ಮತ್ತೆ ಬರ್ತಿದೆ ಮಾಲ್ಗುಡಿಡೇಸ್

Malgudi Days Back

06-02-2019

"ಮಾಲ್ಗುಡಿಡೇಸ್" ದಿವಂಗತ ನಟ ಶಂಕರ್ ನಾಗ ನಿರ್ದೇಶನದ ಈ ಧಾರವಾಹಿ ಹೆಸರನ್ನು ಕೇಳದವರೇ ಇಲ್ಲ. ಕೆ.ನಾರಾಯಣ ರಚಿಸಿದ್ದ ಕತೆ ಆಧರಿಸಿ ಸಿದ್ಧವಾಗಿದ್ದ ಈ ಧಾರಾವಾಹಿ ವೀಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿತ್ತು. ಇದೀಗ ಮತ್ತೊಮ್ಮೆ ಮಾಲ್ಗುಡಿ ಡೇಸ್ ತೆರೆಗೆ ಬರಲು ಸಿದ್ಧವಾಗಿದೆ. ಆದರೆ ಈ ಬಾರಿ ಧಾರಾವಾಹಿಯಾಗಲ್ಲ ಚಿತ್ರವಾಗಿ. 

ಹೌದು ಮಾಲ್ಗುಡಿಡೇಸ್ ಸಿನಿಮಾವಾಗಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ಸ್ವಯಂಪ್ರಭ ಎಂಟರಟೈನ್‍ಮೆಂಟ್ ಪ್ರೊಡಕ್ಷನ್ ಲಾಂಛನದಲ್ಲಿ  ಕೆ.ರತ್ನಾಕರ್ ಕಾಮತ್ ಚಿತ್ರ ನಿರ್ಮಿಸಲಿದ್ದಾರೆ. ಇದೇ ತಿಂಗಳಿನಲ್ಲಿ ಚಿತ್ರದ ನಿರ್ಮಾಣ ಆರಂಭವಾಗಲಿದೆ. ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಈ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ಈಗಾಗಲೇ ಮಾಲ್ಗುಡಿಡೇಸ್ ಪೋಸ್ಟರ್‍ನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಿಡುಗಡೆಗೊಳಿಸಿದ್ದಾರೆ. 
ಚಿತ್ರವನ್ನು ಕಿಶೋರ್ ಮೂಡಬಿದ್ರೆ ಕತೆ,ಚಿತ್ರಕತೆ,ಸಂಭಾಷಣೆಯೊಂದಿಗೆ ನಿರ್ದೇಶಿಸುತ್ತಿದ್ದು, ಉದಯ್ ಲೀಲಾ ಸಂಗೀತವಿದೆ.  ಪ್ರದೀಪ್  ನಾಯಕ್ ಸಂಕಲನಕಾರರಾಗಿದ್ದು,  ಗಗನ್ ಖಡೇರಿಯಾ ಸಂಗೀತ ನೀಡುತ್ತಿದ್ದಾರೆ. ಸಾತ್ವಿಕ್ ಹೆಬ್ಬಾರ್, ಸಂದೀಪ ಬೆದ್ರ,ಕರುಣಾಕರ್, ಶಂಶಾಕ ನಾರಾಯಣ ನಿರ್ದೇಶನ ತಂಡದಲ್ಲಿದ್ದಾರೆ. 

ಆದರೆ ಕೆ.ನಾರಾಯಣ ಅವರ ಮಾಲ್ಗುಡಿಡೇಸ್ ಗೂ ಇದಕ್ಕೂ ಏನಾದ್ರೂ ಸಂಬಂಧವಿದ್ಯಾ? ಇದು ಯಾವ ರೀತಿಯ ಚಿತ್ರಕತೆ ಒಳಗೊಂಡಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸಿನಿಮಾತಂಡವನ್ನು ಕತೆಯನ್ನು ಸಸ್ಪೆನ್ಸಾಗಿ ಕಾಪಾಡಿಕೊಳ್ಳಲು ಮುಂದಾಗಿದ್ದು, ಶಿರ್ಷೀಕೆ ಕುತೂಹಲ ಮೂಡಿಸಿರೋದಂತು ನಿಜ. 


ಸಂಬಂಧಿತ ಟ್ಯಾಗ್ಗಳು

#Malgudi Days #Movie #Back #Serial


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ