ಕೆಪಿಎಸ್‍ಸಿ ಎದುರು ಮಹಿಳೆಯರ ಪ್ರತಿಭಟನೆ

Women protest against KPSC

06-02-2019

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ 643 ಮಹಿಳಾ ಮೇಲ್ವಿಚಾರಕಿಯರು ಹುದ್ದೆಯ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವಂತೆ ಒತ್ತಾಯಿಸಿ ಕೆಪಿಎಸ್‍ಸಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ನಗರದ ವಿಧಾನಸೌಧ ಸಮೀಪದ ಉದ್ಯೋಗ ಸೌಧದ ಬಳಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ಜಮಾಯಿಸಿದ ಉದ್ಯೋಗ ಆಕಾಂಕ್ಷಿಗಳು, ಕೆಪಿಎಸ್ ಸಿ ಪಟ್ಟಿ ಪ್ರಕಟಿಸದೆ, ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆ ತನ್ನ ದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷೆ ವರಲಕ್ಷ್ಮೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನ 643 ಮಹಿಳಾ ಮೇಲ್ವಿಚಾರಕಿಯರು ಹುದ್ದೆಯ ನೇಮಕಾತಿ ಅಧಿಸೂಚನೆಯನ್ನು 2016ನೇ ಸಾಲಿನಲ್ಲಿ ಹೊರಡಿಸಿ, ಇದೇ ಸಾಲಿನಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು.

ನಂತರ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು 2018ನೇ ಸಾಲಿನಲ್ಲಿ  ಪ್ರಕಟಿಸಿದ್ದಾರೆ. ಈ ಪಟ್ಟಿ ಪ್ರಕಟಿಸಿ ಎರಡು ತಿಂಗಳು ಕಳೆದರೂ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಭ್ಯರ್ಥಿಗಳು ದೂರವಾಣಿ ಮೂಲಕ ವಿಚಾರಿಸಿದಾಗ ಒಂದು ವಾರ, ಹದಿನೈದು ದಿನ ಎಂದೆಲ್ಲಾ ಕಾದು ನೋಡಿ ಎನ್ನುತ್ತಾರೆ ಕೆಪಿಎಸ್ ಸಿ ಅಧಿಕಾರಿಗಳು.ಆದರೆ,
ಆಯ್ಕೆಯಾದ ಅಭ್ಯರ್ಥಿಗಳ ವಯೋಮಿತಿ ಹೆಚ್ಚು, ಕಡಿಮೆಯಾಗುವ ಆತಂಕದಲ್ಲಿದ್ದಾರೆ.

ಅಲ್ಲದೆ, ಕೆಪಿಎಸ್ ಸಿ ನಿಯಮದ ಪ್ರಕಾರ ಗ್ರೂಪ್ ಸಿ ಹುದ್ದೆಗಳ ನೇಮಕಾತಿಯ ಅಧಿಸೂಚನೆ ಹೊರಡಿಸುವ 7,9  ತಿಂಗಳಯೊಳಗೆ  ನೇಮಕಾತಿ ಪ್ರಕ್ರಿಯೆ ಮುಕ್ತಾಯಗೊಳಿಸಬೇಕು.ಆದರೆ, ಮೂರು ವರ್ಷ ಕಳೆದರು ನೇಮಕಾತಿ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸಂಬಂಧಿತ ಟ್ಯಾಗ್ಗಳು

#Kpsc #Protest #Womans #Bangalore


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ