ಕೊನೆಗೂ ಮನೆ ಸೇರಿದ ಕನಕದುರ್ಗಾ

 Finally, Kanakadurga joined the house

06-02-2019

ಸುಪ್ರೀಂ ಕೋರ್ಟ್ ಆದೇಶವನ್ನು ಆಧಾರವಾಗಿಟ್ಟುಕೊಂಡು ಶಬರಿಮಲೈ ದೇಗುಲ ಪ್ರವೇಶಿಸಿ ಕುಟುಂಬದಿಂದಲೇ ತಿರಸ್ಕರಿಸಲ್ಪಟ್ಟಿದ್ದ ಹೋರಾಟಗಾರ್ತಿ ಕನಕದುರ್ಗಾ ಕೊನೆಗೂ ಗಂಡನ ಮನೆ ಸೇರಿದ್ದಾರೆ. ಮನೆ ಪ್ರವೇಶಿಸಲು ನಿರಾಕರಿಸಿದ್ದ ಗಂಡ ಹಾಗೂ ಕುಟುಂಬ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದ ಕನಕದುರ್ಗಾ ಕೋರ್ಟ್ ಆದೇಶದಂತೆ ಗಂಡನ ಮನೆಗೆ ಪ್ರವೇಶ ಪಡೆದುಕೊಂಡಿದ್ದಾರೆ. 

ಕನಕದುರ್ಗಾ ದೇವಾಲಯದೊಳಗೆ ಪ್ರವೇಶಿಸಿದ ಬಳಿಕ ತೀವ್ರ ಆಕ್ರೋಶಕ್ಕೆ ಗುರಿಯಾಗಿ ತಲೆಮರೆಸಿಕೊಂಡಿದ್ದರು. ಕೆಲದಿನಗಳ ಬಳಿಕ ಮನೆಗೆ ಮರಳಿದ್ದ ಆಕೆಯ ಮೇಲೆ ಅತ್ತೆ ಹಲ್ಲೆ ನಡೆಸಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಕನಕದುರ್ಗಾ ಚಿಕಿತ್ಸೆ ಪಡೆದು ಮನೆಗೆ ವಾಪಸ್ಸಾಗಿದ್ದರೂ ಅವರನ್ನು ಮನೆಗೆ ಸೇರಿಸಲು ಪತಿ ಹಾಗೂ ಕುಟುಂಬಸ್ಥರು ನಿರಾಕರಿಸಿದ್ದರು. ಇದರಿಂದ ಸಿಟ್ಟಾದ ಕನಕದುರ್ಗಾ ಮಕ್ಕಳು ಹಾಗೂ ಆಶ್ರಯತಾಣ  ಬೇಕು ಎಂಬ ಕಾರಣಕ್ಕೆ,  ಜಿಲ್ಲೆಯ ಅಧಿಕಾರಿಗಳ ಬಳಿ ದೂರು ಸಲ್ಲಿಸಿದ್ದರು. 

ಇದೀಗ ಪ್ರಕರಣದ ವಿಚಾರಣೆ ನಡೆಸಿದ ಪುಲ್ ಮಂಥೋಲ್ ಗ್ರಾಮ ನ್ಯಾಯಾಲಯ ಈ ಆದೇಶ ನೀಡಿದೆ. ಇನ್ನು ಈ ಆದೇಶಕ್ಕೆ ಸಂತೋಷವ್ಯಕ್ತಪಡಿಸಿರುವ ಕನಕದುರ್ಗಾ, ನನ್ನ ಮನೆ ಪ್ರವೇಶಿಸಲು ನ್ಯಾಯಾಲಯ ಅವಕಾಶ ನೀಡಿರುವುದು ನನಗೆ ಖುಷಿ ತಂದಿದೆ.  ಮುಂದಿನ ದಿನಗಳಲ್ಲಿ ನಾನು ಮಕ್ಕಳನ್ನು ನೋಡುತ್ತೇನೆ. ಆದರೆ ನನ್ನ ಗಂಡನ ಮನೆಯವರು ನನ್ನನ್ನು ಮನೆಗೆ ಸೇರಿಸಲು ಸಿದ್ಧವಿಲ್ಲ. ಅವರು ನನ್ನೊಂದಿಗೆ ವಾಸಿಸಲು ಬಂದ್ರೆ ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ. 


ಕನಕದುರ್ಗಾ ಬಿಂದು ರಾಣಿ ಎಂಬ ಇನ್ನೊರ್ವ ಮಹಿಳೆ ಜೊತೆ ಬೆಳಗಿನ ಜಾವ ಶಬರಿಮಲೈ ದೇವಾಲಯಕ್ಕೆ ಪ್ರವೇಶಿಸಿ, 800 ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದು, ಕೇರಳದಲ್ಲಿ ತಕ್ಕಮಟ್ಟಿಗಿನ ಹೋರಾಟ ಹಾಗೂ ದಾಂಧಲೆ ಗಲಾಟೆಗೂ ಕಾರಣವಾಗಿದ್ದರು. 


ಸಂಬಂಧಿತ ಟ್ಯಾಗ್ಗಳು

#KanakaDurgha #House #Shabari male #Court


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ