ಅಧಿವೇಶನಕ್ಕೆ ಗೈರಾಗಿ ಸರ್ಕಾರದ ಎದೆಯಲ್ಲಿ ನಡುಕ ತಂದ ಶಾಸಕರು

 MLAs Absent  for the Sesion

06-02-2019

ವಿಧಾನಮಂಡಲದ ಜಂಟಿ ಅಧಿವೇಶನದ ಮೊದಲ ದಿನವಾದ ಇಂದು ಪ್ರಾರಂಭದಲ್ಲಿ ಆಡಳಿತಾರೂಢ ದೋಸ್ತಿ ಪಕ್ಷದ ಎಂಟು ಮಂದಿ ಶಾಸಕರು ಗೈರು ಹಾಜರಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಅದರಲ್ಲೂ ಕಾಂಗ್ರೆಸ್‍ನ 8 ಮಂದಿ ಶಾಸಕರು ಅಧಿವೇಶನದಿಂದ ದೂರು ಉಳಿದಿರುವುದು ಬಿಜೆಪಿಯ ಆಪರೇಷನ್ ಕಮಲದತ್ತ ಮುಖ ಮಾಡಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಇಂದಿನಿಂದ ಆರಂಭವಾಗಲಿರುವ ವಿಧಾನಮಂಡಲದ ಜಂಟಿ ಅಧಿವೇಶನದ ಸಂದರ್ಭದಲ್ಲಿ ಅಧಿವೇಶನದ ಮೊದಲ ದಿನದಿಂದ ಕೊನೆ ದಿನದವರೆಗೂ ಎಲ್ಲ ಸದಸ್ಯರು ಕಡ್ಡಾಯವಾಗಿ ಸದನಕ್ಕೆ ಹಾಜರಾಗಬೇಕು.

ಸರ್ಕಾರದ ಪರವಾಗಿ ಮತ ಹಾಕಬೇಕೆಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ವಿಧಾನಸಭೆ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ನಿನ್ನೆಯಷ್ಟೇ ವಿಪ್ ಜಾರಿ ಮಾಡಿದ್ದರು.

ಆದರೆ ಇಂದು ಕಾಂಗ್ರೆಸ್‍ನ ಭಿನ್ನಮತೀಯ ಶಾಸಕರಾಗಿರುವ ರಮೇಶ್ ಜಾರಕಿಹೊಳಿ(ಗೋಕಾಕ್), ಮಹೇಶ್ ಕುಮಟಳ್ಳಿ(ಅಥಣಿ), ಬಿ.ನಾಗೇಂದ್ರ( ಬಳ್ಳಾರಿ ಗ್ರಾಮೀಣ), ಪ್ರತಾಪ್‍ಗೌಡ ಪಾಟೀಲ್(ಮಸ್ಕಿ), ಬಿ.ಸಿ.ಪಾಟೀಲ್(ಹಿರೇಕೆರೂರು), ಡಾ.ಉಮೇಶ್ ಜಾಧವ್(ಚಿಂಚೋಳಿ), ಜೆ.ಎನ್.ಗಣೇಶ್(ಕಂಪ್ಲಿ), ಡಾ.ಸುಧಾಕರ್(ಚಿಕ್ಕಬಳ್ಳಾಪುರ), ಜೆಡಿಎಸ್‍ನ ನಾರಾಯಣಗೌಡ(ಕೆ.ಆರ್.ಪೇಟೆ) ಹಾಗೂ ಪಕ್ಷೇತರ ಶಾಸಕರಾದ ಆರ್.ಶಂಕರ್(ರಾಣೆಬೆನ್ನೂರು) ಮತ್ತು ಎಚ್.ನಾಗೇಶ್ (ಮುಳಬಾಗಿಲು) ಅವರು ಗೈರಾಗಿದ್ದರು.


ಸಂಬಂಧಿತ ಟ್ಯಾಗ್ಗಳು

#Mlas #Sesion #Absent #Govrnment


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ