ಟಿ20ಐ ಗೆ ಮಿಥಾಲಿ ಗುಡ್ ಬೈ? 

 Mithali Goodbye to T20 Eye?

06-02-2019

ಮಹಿಳಾ ಕ್ರಿಕೆಟ್‍ನಲ್ಲಿ ಹಲವು ಇತಿಹಾಸಗಳನ್ನು ಬರೆದ ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಸಧ್ಯದಲ್ಲೇ ಅಭಿಮಾನಿಗಳಿಗೆ ಒಂದು ಶಾಕ್ ನೀಡಲಿದ್ದಾರೆ. ಹೌದು, ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್ ಸರಣಿ ಬಳಿಕ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಇಂಗ್ಲೆಂಡ್ ವಿರುದ್ಧ ತವರು ನೆಲದಲ್ಲಿ ನಡೆಯಲಿರುವ  ಅಂತಾರಾಷ್ಟ್ರೀಯ  ಟಿ20 ಕ್ರಿಕೆಟ್ ಸರಣಿ ಬಳಿಕ  ಮಿಥಾಲಿ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಟಿ20ಯಲ್ಲಿ ನಿವೃತ್ತಿ ಪಡೆಯಲಿದ್ದು,  ಏಕದಿನ ಕ್ರಿಕೆಟ್‍ನಲ್ಲಿ ತಮ್ಮ ಆಟ ಮುಂದುವರೆಸಲಿದ್ದಾರೆ. 
 
ಇಂಗ್ಲೆಂಡ್  ವಿರುದ್ಧದ ಟಿ20 ಸರಣಿ ಮಾರ್ಚ್ 4 ರಿಂದ  ಅಸ್ಸಾಮ್‍ನ ಬಸ್ರಾಪರ ಕ್ರೀಡಾಂಗಣದಲ್ಲಿ  ಆರಂಭವಾಗಲಿದೆ. 36  ವರ್ಷದ ಬಲಗೈ  ಬ್ಯಾಟರ್  ಮಿಥಾಲಿ, 2020 ರ ಮಹಿಳಾ ಟಿ20ವರೆಗೆ  ತಂಡದಲ್ಲಿ ಉಳಿಯುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಈ ಇಂಗ್ಲೆಂಡ್ ವಿರುದ್ಧದ ಸರಣಿ ಬಳಿಕ  ನಿವೃತ್ತಿ ಪ್ರಕಟಿಸುವ ಸಾಧ್ಯತೆ ಇದೆ ಎಂದು  ಬಿಸಿಸಿಐ ಮೂಲಗಳು  ಹೇಳಿದೆ.  


ಸಂಬಂಧಿತ ಟ್ಯಾಗ್ಗಳು

#Mithali #Good by #T20 I #Bcc


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ