ಗಣೇಶ್‍ ಗಾಗಿ ಕನ್ನಡಕ್ಕೆ ಬರ್ತಿದ್ದಾರೆ ಸಲ್ಮಾನ್ ಖಾನ್ ಸಹೋದರ

 Salman Khan

05-02-2019

ಸಾಲು ಸಾಲು ಚಿತ್ರಗಳು ಬಾಕ್ಸಾಫೀಸ್‍ನಲ್ಲಿ ಸೋತಿರೋದರಿಂದ ಕಂಗೆಟ್ಟಿರೋ ಗೋಲ್ಡನ್ ಸ್ಟಾರ್ ಗಣೇಶ್ ಪಾಲಿಗೆ ಈಗ ಕಿರುತೆರೆಯ ಶೋವೊಂದನ್ನು ಬಿಟ್ರೆ ಬೇರಾವ ಆಧಾರವೂ ಇಲ್ಲ. ಆದರೆ ಸೋಲುಗಳಿಗೆ ಧೃತಿಗೆಡದೆ ಸ್ಯಾಂಡಲವುಡ್‍ನಲ್ಲಿ ತಮ್ಮ ಸಿನಿ ಜರ್ನಿ ಮುಂದುವರೆಸಿರುವ ಗೋಲ್ಡನ್ ಸ್ಟಾರ್ ಗಣೇಶ್ ಈ ಬಾರಿ ತಮ್ಮ ಹೊಸ ಚಿತ್ರದಲ್ಲಿ ಬಾಲಿವುಡ್‍ನಿಂದ ಅತಿಥಿಯೊಬ್ಬರನ್ನು ಕನ್ನಡಕ್ಕೆ ಕರೆತರುತ್ತಿದ್ದಾರೆ. 


ಇಷ್ಟಕ್ಕೂ ಗಣೇಶ್ ಚಿತ್ರಕ್ಕಾಗಿ ಬಾಲಿವುಡ್‍ನಿಂದ  ಬರ್ತಿರೋ ಸೆಲಿಬ್ರಿಟಿ ಯಾರು ಅಂದ್ರಾ? ಅದು ಮತ್ಯಾರು ಅಲ್ಲ ಬಾಲಿವುಡ್‍ನ ಬ್ಯಾಡ್ ಬಾಯ್ ಖ್ಯಾತಿಯ ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್‍ಖಾನ್. ಈಗಾಗಲೇ ಅರ್ಬಾಜ್ ಖಾನ್ ಜೊತೆ ಗಣೇಶ್ ಮಾತುಕತೆ ಮುಗಿದಿದ್ದು, ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.


ವೇರ್ ಇಸ್ ಮೈ ಕನ್ನಡಕ ಎಂಬ ಚಿತ್ರದಲ್ಲಿ ಗಣೇಶ್ ನಾಯಕರಾಗಿ ನಟಿಸುತ್ತಿದ್ದು, ಹೆಸರೆ ಸೂಚಿಸುವಂತೆ ಇಂದೊಂದು ಔಟ್ ಎಂಡ್ ಔಟ್ ಕಾಮೆಡಿ ಚಿತ್ರ. ಇದೇ ಚಿತ್ರಕ್ಕಾಗಿ ಅರ್ಬಾಜ್ ಖಾನ್‍ರನ್ನು ಗಣೇಶ್ ಕನ್ನಡಕ್ಕೆ ಕರೆತಂದಿದ್ದಾರೆ. ಕನ್ನಡ ಮತ್ತು ಹಿಂದಿಯಲ್ಲಿ ಹಲವು ಟೆಲಿವಿಷನ್ ಶೋಗಳನ್ನು ಮಾಡಿರುವ ರಾಜ್ ಮತ್ತು ದಾಮಿನಿ ಈ ಚಿತ್ರಕ್ಕೆ ಯಾಕ್ಷನ್ ಕಟ್ ಹೇಳುತ್ತಿದ್ದಾರೆ. 


ಸಿನಿಮಾದ ಸ್ಕ್ರಿಪ್ಟ್ ತುಂಬ ಇಂಟರಸ್ಟಿಂಗ್ ಅಂತ ಅನ್ನಿಸಿದ್ದರಿಂದ ಈ ಕನ್ನಡ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ ಅಂತಿದ್ದಾರೆ ನಟ ಅರ್ಬಾಜ್ ಖಾನ್. ಫೆಬ್ರವರಿ 7 ರಂದು ಚಿತ್ರದ ಮುಹೂರ್ತ ನಡೆಯಲಿದ್ದು, ಸಿನಿಮಾದ ಬಹುತೇಕ ಶೂಟಿಂಗ್ ಲಂಡನ್‍ನಲ್ಲಿ ನಡೆಯಲಿದೆ. ಒಟ್ಟಿನಲ್ಲಿ ಕನ್ನಡದಲ್ಲಿ ನೆಲೆ ಕಂಡುಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿರುವ ಗಣೇಶ್ ಹಾಗೂ ಹಿಂದಿಯಲ್ಲಿ ಗೆಲ್ಲದ ಅರ್ಬಾಜ್ ಖಾನ್ ಇಬ್ಬರೂ ಸೇರಿ ಕನ್ನಡ ಚಿತ್ರವೊಂದರಲ್ಲಿ ಹೊಸ ಕಸರತ್ತು ನಡೆಸಿದ್ದು, ಚಿತ್ರ ಅದೇಷ್ಟರ ಮಟ್ಟಿಗೆ ಹಿಟ್ ಆಗುತ್ತೆ ಕಾದುನೋಡಬೇಕಿದೆ. 


ಸಂಬಂಧಿತ ಟ್ಯಾಗ್ಗಳು

#Salman Khan #Kannada Movie #Ganesh #arbaaz khan


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ