ಶೂಟೌಟ್ ಪ್ರಕರಣ ಕಡಬಗೆರೆ ಸೀನ ವಿಚಾರಣೆ

Kadabgere Seena Investigation

05-02-2019

ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡೇಟು ತಿಂದಿದ್ದ ಕಡಬಗೆರೆ ಸೀನನನ್ನು ಸಿಸಿಬಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.ನಗರ ಪೆÇಲೀಸ್ ಆಯುಕ್ತರ ಕಚೇರಿಗೆ ಕರೆಸಿ ಸಿಸಿಬಿ ಎಸಿಪಿ ಬಾಲರಾಜ್ ಹಾಗೂ ಡಿಸಿಪಿ ಗಿರೀಶ್ ಮುಂದೆ ಹೇಳಿಕೆ ಪಡೆದು ಪ್ರಕರಣದ ಪ್ರಾಥಮಿಕ ಮಾಹಿತಿ ಕಲೆಹಾಕಿದ್ದಾರೆ.ಹೆಚ್ಚಿನ ವಿಚಾರಣೆ ಅಗತ್ಯವಿರುವ ಹಿನ್ನೆಲೆ ವಿಚಾರಣೆಗೆ ಮತ್ತೆ ಕರೆಯುವುದಾಗಿ ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಕಡಬಗೆರೆ ಶೂಟೌಟ್ ಪ್ರಕರಣವನ್ನು ಸಿಸಿಬಿಗೆ ವಹಿಸಿದ ನಂತರ ಎರಡನೇ ಬಾರಿ ಸೀನನನ್ನು ವಿಚಾರಣೆಗೆ ಕರೆಸಿ ಹೇಳಿಕೆ ದಾಖಲಿಸಿದ್ದಾರೆ.ಕಳೆದ2017ರ ಫೆಬ್ರವರಿ 2 ರಂದು ಯಲಹಂಕ ಕೋಗಿಲು ಕ್ರಾಸ್ ಬಳಿ ಕಡಬಗೆರೆ ಶ್ರೀನಿವಾಸ್ ಅಲಿಯಾಸ್ ಡಾಬಾ ಸೀನನ ಮೇಲೆ ಶೂಟೌಟ್‍ನಡೆದಿತ್ತು.ಘಟನೆಯಲ್ಲಿ ಶ್ರೀನಿವಾಸ್ ಪ್ರಾಣಾಪಾಯದಿಂದ ಪಾರಾಗಿದ್ದ. 


ಘಟನೆ ಹಿನ್ನೆಲೆ ಯಲಹಂಕ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಸಿಸಿಬಿ ತನಿಖೆ ನಡೆಸುವಂತೆ ಕಡಬಗೆರೆ ಸೀನಾ ಮನವಿ ಮಾಡಿದ್ದ. ಈ ಹಿನ್ನೆಲೆ ಸಿಸಿಬಿ ತನಿಖೆ ಚುರುಕುಗೊಳಿಸಿದೆ. ವಿಲ್ಸನ್ ಗಾರ್ಡನ್ ರೌಡಿಶೀಟರ್ ನಾಗರಾಜ್, ಡಬಲ್ ಮೀಟರ್ ಮೋಹನ ಸೇರಿದಂತೆ 10ಕ್ಕೂ ಹೆಚ್ಚು ರೌಡಿಗಳನ್ನ ವಿಚಾರಣೆ ನಡೆಸುತ್ತಿದ್ದಾರೆ.
 


ಸಂಬಂಧಿತ ಟ್ಯಾಗ್ಗಳು

#Kadabagere Seena #Ccb #Shoot out # Investigation


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ