ನನ್ನ ಹೆಂಡ್ತಿ ತೆಲುಗು ಮೂಲದವರು- ಸಿಎಂ ಕುಮಾರಸ್ವಾಮಿ 

 My Wife is From Telugu- Cm Kumarswamy

05-02-2019

ಲೋಕಸಭೆ ಚುನಾವಣೆಗೆ ಇನ್ನು ವೇದಿಕೆ ಸಿದ್ಧವಾಗುತ್ತಿರುವಾಗಲೇ ಮತ್ತೆ ರಾಜಕೀಯ ನಾಯಕರ ನಾಲಿಗೆಗಳು ಎಲ್ಲೇ ಮೀರಲಾರಂಭಿಸಿದ್ದು, ದಿವಂಗತ ನಟ, ಮಾಜಿ ಸಚಿವ ಅಂಬರೀಶ್ ಪತ್ನಿ ಸುಮಲತಾ ಅವರ ಮೂಲ ಪ್ರಶ್ನಿಸುವ ಮೂಲಕ ಜೆಡಿಎಸ್ ನಾಯಕರೊಬ್ಬರು ವಿವಾದ ಸೃಷ್ಟಿಸಿದ್ದು, ಹಾಗಿದ್ದರೇ ಅನಿತಾ ಕುಮಾರಸ್ವಾಮಿ ಎಲ್ಲಿಯವರು ಸ್ವಾಮಿ ಎಂದು ಸಾರ್ವಜನಿಕರು  ಪ್ರಶ್ನಿಸುತ್ತಿದ್ದಾರೆ. 

ನಟ, ಮಾಜಿ ಸಂಸದ, ಸಚಿವ ಅಂಬರೀಶ್ ನಿಧನದ ಬಳಿಕ ಸುಮಲತಾ ರಾಜಕೀಂiÀi ಪ್ರವೇಶ ಮಾಡ್ತಾರೆ ಎಂಬ ಮಾತು ಕೇಳಿಬರತೊಡಗಿತ್ತು. ಒಮ್ಮೆ ಸುಮಲತಾ ಕಾಂಗ್ರೆಸ್‍ನಿಂದ ಕಣಕ್ಕಿಳಿತಾರೆ ಎನ್ನಲಾಗಿತ್ತಾದರೂ, ಮತ್ತೊಮ್ಮೆ ಸ್ವತಂತ್ರವಾಗಿ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇನ್ನೂ ಕೂಡ ಈ ವಿಚಾರದ ಬಗ್ಗೆ ಸುಮಲತಾ ಅಂಬರೀಶ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಸುಮಲತಾ ರಾಜಕೀಯ ಪ್ರವೇಶದ ಬಗ್ಗೆ ನಿನ್ನೆ ಜೆಡಿಎಸ್ ಮುಖಂಡ ಕೆ.ಟಿ.ಶ್ರೀಕಂಠೇಗೌಡ್ ಎಂಬುವವರು ಲಘುವಾಗಿ ಮಾತನಾಡಿದ್ದಾರೆ. ಸುಮಲತಾ ಮಂಡ್ಯದ ಗೌಡ್ತಿ ಅಲ್ಲ ಅವರು ಆಂಧ್ರ ಮೂಲದವರು ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದರು. ಅಲ್ಲದೇ ಗೆದ್ದ ಮೇಲೆ ಸುಮಲತಾ ಅವರನ್ನು ಎಲ್ಲಿ ಹುಡುಕೋದು ಎಂದು ಲೇವಡಿ ಮಾಡಿದ್ದರು.
 
ಶ್ರೀಕಂಠೇಗೌಡರ ಈ ಹೇಳಿಕೆಗೆ ತೀವ್ರ ವಿರೋದ ವ್ಯಕ್ತವಾಗಿದೆ. ಅಲ್ಲದೆ ಮಾಜಿ ಪ್ರಧಾನಿ ದೇವೆಗೌಡರ್ ಸೊಸೆ, ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ ಎಲ್ಲಿಯವರು? ಅವರ ಮೂಲ ಯಾವುದು ಎಂದು ಜನ ಪ್ರಶ್ನಿಸುತ್ತಿದ್ದಾರೆ. ಈ ಹಿಂದೆ ಸಿಎಂ ಕುಮಾರಸ್ವಾಮಿಯವರೇ  ತಮ್ಮ ಪತ್ನಿ ತೆಲುಗು ಮೂಲದವರು ಎಂದು ಹೇಳಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಜಾಗ್ವಾರ ಮೂವಿ ಬಿಡುಗಡೆಯ ವೇಳೆಗೆ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಕುಮಾರಸ್ವಾಮಿ ತಮ್ಮ ಪತ್ನಿಯ ಮೂಲ  ತೆಲುಗು ಹೀಗಾಗಿ ಅವರಿಗೆ ಭಾಷೆಯ ಪರಿಚಯವಿದೆ ಎಂದಿದ್ದರು. ಈಗ ವಿಡಿಯೋ ಇಟ್ಟುಕೊಂಡಿರುವ ಅಂಬಿ ಅಭಿಮಾನಿಗಳು ಶ್ರೀಕಂಠಗೌಡರ್ ಹೇಳಿಕೆ ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ. 
ಈ ಹಿಂದೆ ಮಂಡ್ಯದಲ್ಲಿ ರಮ್ಯ ಲೋಕಸಭೆಗೆ ಸ್ಪರ್ಧಿಸಿದ್ದ ವೇಳೆಯೂ ಇದೇ ರೀತಿಯ ವೈಯಕ್ತಿಕ ವಿಚಾರಗಳು ಚರ್ಚೆಗೊಳಗಾಗಿತ್ತು. ಇದೀಗ ಸುಮಲತಾ  ಚುನಾವಣೆಗೆ ಸ್ಪರ್ಧಿಸುವ ವಿಚಾರ ಖಚಿತವಾಗುವ ಮುನ್ನವೇ ವಿವಾದಗಳು ಆರಂಭವಾಗಿದ್ದು, ಇವೆಲ್ಲ ಎಲ್ಲಿಗೆ ಹೋಗಿ ನಿಲ್ಲುತ್ತೋ ಕಾದು ನೋಡಬೇಕಿದೆ. 


ಸಂಬಂಧಿತ ಟ್ಯಾಗ್ಗಳು

#Kumarswamy #Telugu #Anitha Kumarswamy #Mandya


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ