ಭಾರತಕ್ಕೆ ಮಲ್ಯ ಹಸ್ತಾಂತರಿಸಲು ಬ್ರಿಟನ್ ಗ್ರೀನ್ ಸಿಗ್ನಲ್

 Britain

05-02-2019

ಬ್ಯಾಂಕ್‍ಗಳಿಗೆ ಬಹುಕೋಟಿ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಿ  ಬ್ರಿಟನ್ ಗೃಹ ಕಾರ್ಯದರ್ಶಿ ಆದೇಶಿಸಿದ್ದಾರೆ. ಇದೊಂದು ರಾಜತಾಂತ್ರಿಕ ವಿಜಯ ಎಂದು ಭಾರತದ ಗೃಹ ಕಚೇರಿ ಹೇಳಿದೆ. ಈ ಆದೇಶದಿಂದ ಮಲ್ಯ ಸಂಕಷ್ಟಕ್ಕಿಡಾಗಿದ್ದು, ಭಾರತಕ್ಕೆ ಬಂದಲ್ಲಿ 9 ಸಾವಿರ  ಕೋಟಿ ಸಾಲ ಪ್ರಕರಣದ ವಿಚಾರಣೆ ಎದುರಿಸಬೇಕಿದೆ. 

ಸಾಲ ಮಾಡಿ ಭಾರತದಿಂದ ತಲೆಮರೆಸಿಕೊಂಡಿದ್ದ ವಿಜಯ್ ಮಲ್ಯರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನ ಮಾಡಿತ್ತು. ಆದರೆ ಸಫಲವಾಗಿರಲಿಲ್ಲ.  ಡಿ 10 ರಂದು ಲಂಡನ್‍ನ  ವೆಸ್ಟ್ ಮಿನಿಸ್ಟರ್ ಕೋರ್ಟ್  ಮಲ್ಯ ಗಡಿಪಾರಿಗೆ ಅಸ್ತು ಎಂದಿತ್ತು.  ನ್ಯಾಯಾಲಯದ ಆದೇಶದ ಪ್ರತಿ  ಬ್ರಿಟನ್ ಗೃಹ ಕಾರ್ಯದರ್ಶಿಗೆ ತಲುಪಿದ್ದು,  ಅವರು ಮಲ್ಯ ಹಸ್ತಾಂತರ ಆದೇಶಕ್ಕೆ ಸಹಿ ಹಾಕಿದ್ದಾರೆ. 

ಇನ್ನು ಈ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಮಲ್ಯ ಅವರಿಗೆ 14 ದಿನಗಳ ಕಾಲಾವಕಾಶ ನೀಡಲಾಗಿದೆ. ಫೆ 3 ರಂದು ಮಲ್ಯ ಹಸ್ತಾಂತರಕ್ಕೆ ಬ್ರಿಟನ್‍ಕಾರ್ಯದರ್ಶಿ ಸಹಿ ಹಾಕಿದ್ದಾರೆ.  ಇದರಿಂದ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಲು ಇದ್ದ  ಕಾನೂನು ತೊಡಕುಗಳು ನಿವಾರಣೆಯಾದಂತಾಗಿದೆ. 2016 ರಲ್ಲಿಯೇ ಭಾರತ ಬಿಟ್ಟು  ಪರಾರಿಯಾಗಿದ್ದ ಮಲ್ಯ ಅಂದಿನಿಂದಲೂ ಬ್ರಿಟನ್‍ನಲ್ಲಿಯೆ ನೆಲೆಸಿದ್ದಾರೆ.


 ಮಲ್ಯ ಭಾರತಕ್ಕೆ ಹಸ್ತಾಂತರವಾಗುತ್ತಿರುವುದರಿಂದ ಸರ್ಕಾರವನ್ನು ಟೀಕಿಸುತ್ತಿದ್ದ ವಿಪಕ್ಷಗಳಿಗೆ ಮುಖಭಂಗವಾದಂತಾಗಿದ್ದು,  ತನ್ನ ನಡೆ ಮೂಲಕವೇ ಸರ್ಕಾರ ಉತ್ತರ ನೀಡಿದಂತಾಗಿದೆ. ಇದಕ್ಕೂ ಮೊದಲು ವಿವಿಐಪಿ ಕಾಪ್ಟರ್ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಖೆಲ್ ಹಸ್ತಾಂತರವಾಗಿತ್ತು. 


ಸಂಬಂಧಿತ ಟ್ಯಾಗ್ಗಳು

#Vijay Malya #Handover # Britain #India


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ