ಬಾಡಿಬಿಲ್ಡಿಂಗ್ ನಲ್ಲಿ ಅಪ್ಪಟ ಗ್ರಾಮೀಣ ಪ್ರತಿಭೆ ಸ್ನೇಹಾ

Rural Woman Talent In bodybuilding

05-02-2019

ಬಾಡಿಬಿಲ್ಡಿಂಗ್ ಅಂದಾಕ್ಷಣನೇ  ಜನರು ಇದು ಹುಡುಗರ ವಿಚಾರ ಅಂದ್ಕೋತಾರೆ. ಆದರೆ ಹುಡುಗಿಯರು ಬಾಡಿಬಿಲ್ಡಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಅಂದ್ರೆ ನಂಬ್ತಿರಾ. ಅಪ್ಪಟ ಗ್ರಾಮೀಣ ಪ್ರತಿಭೆಯೊಬ್ಬರು ಇಂತಹದೊಂದು ವಿಭಿನ್ನ ಸಾಧನೆ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ. ಅವರೇ ಹಾಸನದ ಸ್ನೇಹಾ. 

ಸ್ನೇಹಾ ಬಾಡಿಬಿಲ್ಡಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, ಪುರುಷರಿಗೆ ಸಮನಾಗಿ ನಿಂತು ಯೂಥ್ ಐಕಾನ್ ಎನ್ನಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಸಾಫ್ಟವೇರ್ ಇಂಜೀನಿಯರ್ ಆಗಿರುವ ಸ್ನೇಹಾ ಬಾಡಿಬಿಲ್ಡಿಂಗ್ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಹಾಸನದ ಸಂಪ್ರದಾಯಸ್ಥರ ಮನೆಯಿಂದ ಬಂದ ಸ್ನೇಹಾ ಆರಂಭದಲ್ಲಿ ಬಾಡಿಬಿಲ್ಡಿಂಗ್ ಕ್ಷೇತ್ರ ಆಯ್ದುಕೊಂಡಿದ್ದಕ್ಕೆ ಸಾಕಷ್ಟು ಟೀಕೆ ಹಾಗೂ ವಿರೋಧವನ್ನು ಎದುರಿಸಿದ್ದಾರೆ. ಆದರೆ ಯಾವುದಕ್ಕೂ ಅಂಜದೆ ಅಳುಕದೆ ಮುಂದೆ ಸಾಗಿ ಇತರರಿಗಿಂತ ಭಿನ್ನವಾದ ಗುರಿಯೊಂದನ್ನು ಸಾಧಿಸಿ ನಿಂತಿದ್ದಾರೆ. 

ಚಿಕ್ಕಂದನಿಂದಲೇ ಸ್ನೇಹಾ ಯೋಗದಲ್ಲಿ ಅಪಾರವಾದ ಆಸಕ್ತಿಯಿತ್ತು. ಓದು ಮುಗಿಸಿ ಕೆಲಸಕ್ಕೆ ಸೇರಿದ ಮೇಲೆ ಫಿಟ್‍ನೆಸ್‍ಗಾಗಿ ಜಿಮ್ ಮೊರೆ ಹೋದ ಸ್ನೇಹಾಗೆ ಅಲ್ಲಿ ಬಾಡಿಬಿಲ್ಡಿಂಗ್ ಕ್ಷೇತ್ರ ಮನಸೆಳೆಯಿತು. ಅಲ್ಲಿಂದ ತಮ್ಮ ಬಾಡಿ ಬಿಲ್ಡಿಂಗ್‍ನತ್ತ ಗಮನ ಹರಿಸಿದ ಸ್ನೇಹಾ ಬಾಡಿಬಿಲ್ಡಿಂಗ್‍ನಲ್ಲಿರುವ ಹಲವು ವಿಭಾಗಗಳ ಪೈಕಿ ಬಿಕನಿ ವಿಭಾಗದಲ್ಲಿ ಹೆಸರು ಗಳಿಸಿದ್ದಾರೆ. 


ಬಿಕನಿ ಅನ್ನೋದನ್ನು ಅಸಹ್ಯವಾಗಿ ಅಥವಾ ಮುಜುಗರದ ದೃಷ್ಟಿಯಿಂದ ನೋಡಬೇಡಿ. ನೀವು ಗಮನಿಸಬೇಕಾಗಿರುವುದು ಸಾಧನೆಯನ್ನೇ ವಿನಃ ಬಟ್ಟೆಯನ್ನಲ್ಲ ಅನ್ನೋದು ಸ್ನೇಹಾ ಕಿವಿಮಾತು. ಬಾಡಿಬಿಲ್ಡಿಂಗ್‍ನಲ್ಲಿ ಸಾಧನೆ ಮಾಡುವ ಮೂಲಕ ರಾಜ್ಯದ ಹೆಸರಾಂತ ಫಿಟನೆಸ್ ಟ್ರೇನರ್ ಆಗಿ ಹೆಸರು ಗಳಿಸಿರುವ ಸ್ನೇಹ ಇದರಲ್ಲೇ ತಮ್ಮ ಭವಿಷ್ಯ ಕಂಡುಕೊಳ್ಳುವುದಕ್ಕಾಗಿ ತಮ್ಮ ಪ್ರೀತಿಯ ಸಾಫ್ಟವೇರ್ ವೃತ್ತಿಯನ್ನು ತ್ಯಜಿಸಿದ್ದಾರಂತೆ. 

ಬದುಕಿನಲ್ಲಿ ಒಂದು ಗುರಿ ಸಾಧಿಸೋಕೆ ಎಷ್ಟೇ ಅಡೆತಡೆಗಳು ಬಂದರೂ ನೀವು ಮೆಟ್ಟಿ ನಿಲ್ಲಬೇಕು. ಆ ಧೈರ್ಯ, ಆತ್ಮವಿಶ್ವಾಸ ನಿಮ್ಮಲ್ಲಿ ಇರಲಿ ಅನ್ನೋದು ಗ್ರಾಮೀಣ ಭಾಗದಿಂದ ಬಂದು ಸಾಧನೆಯ ಶಿಖರದಲ್ಲಿ ನಿಂತ ಸ್ನೇಹಾ ಅವರ ಪ್ರೇರಣೆಯ ಮಾತು. 


ಸಂಬಂಧಿತ ಟ್ಯಾಗ್ಗಳು

#Woman Talent #Sneha # Bodybuilding #Hasan


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ