ರಾಮಮಂದಿರ ಕಟ್ಟದಿದ್ದರೇ ಮೋದಿಗೆ ಗುಂಡು ಹೊಡಿತೀರಾ? ಬೇಳೂರು ವಿವಾದ

Beluru Gopalkrishna New Controversy?

04-02-2019

ಗಾಂಧಿಜೀಗೆ ಹಿಂದು ಮಹಾಸಭಾ ಮಾಡಿದ ಅವಮಾನ ಖಂಡಿಸಿ ಕಾಂಗ್ರೆಸ್ ಭವನದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನಾಲಿಗೆ ಹರಿ ಬಿಟ್ಟಿದ್ದಾರೆ.

ಪ್ರಧಾನಿ ಮೋಧಿಯವರು ರಾಮ ಮಂದಿರವನ್ನು ಕಟ್ಟಿ ಬಿಡ್ತೀನಿ ಅಂದ್ರು. ಆದ್ರೆ, ಇದುವರೆಗೂ ರಾಮ ಮಂದಿರ ಕಟ್ಟೇ ಇಲ್ಲ.ಹಾಗಿದ್ರೆ ಮೋದಿಯವರನ್ನೂ ನೀವು ಗುಂಡಿಟ್ಟು ಕೊಂದು ಬಿಡ್ತೀರಾ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ್ರಧಾನಿ ಮೋದಿ ಬಾಬ್ರಿ ಮಸೀದಿಯನ್ನು ಕಟ್ಟಲಿಲ್ಲ ಅಂದ್ರೆ ಗುಂಡು ಹೊಡಿತೀರಾ?. ಅಂದ್ರೆ ಮೋದಿಗೆ ಗುಂಡು ಹೊಡಿತೀರಾ ಎಂದು ಗೋಪಾಲಕೃಷ್ಣ ಸವಾಲು ಹಾಕಿದರು.

ನೀವಷ್ಟೇ ಹಿಂದುಗಳಲ್ಲ, ನಾವು ಹಿಂದುಗಳೇ. ಮಹಿಳೆಯರಿಗೆ ಅವಮಾನ ಮಾಡಿದವರನ್ನ,ಬ್ಲೂ ಫಿಲ್ಮ್ ನೋಡಿದವರನ್ನ, ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡಿದ ಎಷ್ಟು ಮಂದಿಯ ಕೈ ಕತ್ತರಿಸಿದ್ದೀರಿ ಎಂದು ಅನಂತಕುಮಾರ ಹೆಗಡೆ ಅವರ ಕೈ ಕತ್ತರಿಸಿ ಅನ್ನೋ ಹೇಳಿಕೆ ಪ್ರಸ್ತಾಪಿಸಿ ಕಿಡಿ ಕಾರಿದರು.

ದಿನೇಶ್ ಗುಂಡೂರಾವ್ ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡುವ ಅನಂತಕುಮಾರ್ ಹೆಗಡೆ ಅವರ ಪತ್ನಿ ಯಾವ ಧರ್ವಕ್ಕೆ ಸೇರಿದವರು ಎಂದು ಇದೇ ವೇಳೆ ಪ್ರಶ್ನಿಸಿದರು.
ಯಾವ ಜಾತಿಗೆ ಸೇರಿದವರು ಅನ್ನೋದರ ಬಗ್ಗೆ ಡಿಎನ್‍ಎ ಪರೀಕ್ಷೆ ಮಾಡಿಸಲಿ. ಅನಂತಕುಮಾರ ಹೆಗಡೆ ಪತ್ನಿ ಯಾವ ಜಾತಿಗೆ ಹುಟ್ಟಿದವರು ಅನ್ನೋದು ಗೊತ್ತಾ?ಆ ಬಗ್ಗೆ ಡಿಎನ್‍ಎ ಪರೀಕ್ಷೆಯಾಗಲಿ ಎಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದರು.


ಸಂಬಂಧಿತ ಟ್ಯಾಗ್ಗಳು

#Narendra Modi #Beluru Gopalkrishna #Shoot Out #Controversy


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ