ಅನ್ನ ಭಾಗ್ಯ ಅಕ್ಕಿ ಅಕ್ರಮ ಸಾಗಾಟ !

Kannada News

06-06-2017

ಬಳ್ಳಾರಿ:- ಕಡು ಬಡವರಿಗೆ ಸಹಾಯವಾಗಲೆಂದು ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸುತ್ತಿದೆ. ಆದರೆ ಹಣದ ಆಸೆಗೆ ಕೆಲವರು ಬಡವರ ಅಕ್ಕಿಗೂ ಕನ್ನ ಹಾಕಿದ್ದಾರೆ. ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಒಂದು ಲಾರಿ ಅನ್ನ ಭಾಗ್ಯ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನ ಭಾಗ್ಯದ ಅಕ್ಕಿಯನ್ನು ಜಿಲ್ಲೆಯ ಹೊಸಪೇಟೆಯಲ್ಲಿ ಜಪ್ತಿ ಮಾಡಲಾಗಿದೆ. ಹೊಸಪೇಟೆ ನಗರದ ಪಶು ಆಸ್ಪತ್ರೆಯ ಬಳಿ, ಎಸಿ ಪ್ರಶಾಂತ ಕುಮಾರ ಮಿಶ್ರಾ ನೇತೃತ್ವದಲ್ಲಿ ದಾಳಿ ನಡೆಸಿ ಲಾರಿ ಮತ್ತು ಅಕ್ಕಿಯನ್ನು  ವಶಪಡಿಸಿಕೊಂಡಿದ್ದಾರೆ. ಹೊಸಪೇಟೆ ನಿವಾಸಿ ರಾಮು ಸೇರಿ ಮತ್ತೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡಸುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಬಳ್ಳಾರಿ ಅನ್ನ ಭಾಗ್ಯ ಅಕ್ಕಿ ಸಾಗಾಟ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ