ಲೈಂಗಿಕ ದೌರ್ಜನ್ಯ ಪ್ರಕರಣ ಸಿಬಿಐಗೆ 

 Sexual assault case to CBI

04-02-2019

ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ ಲೈಂಗಿಕ ಕಿರುಕುಳ ನೀಡಿ ಬಿಷಪ್ ಸ್ಯಾಮ್ಯೂಯೆಲ್ ಅವರು ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ

ತನಿಖಾ ದೃಷ್ಠಿಯಿಂದ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದ್ದು ಶೀಘ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸಿಸಿಬಿ ಅಧಿಕಾರಿಗಳಿಗೆ ನಗರ ಪೆÇಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸೂಚನೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಬಿಷಪ್ ಕೆ.ಸಾಮ್ಯೂಯೆಲ್ ಮತ್ತು ವಿನೋದ್ ದಾಸ್ ಎಂಬುವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಸಂಬಂಧ ಶಿವಾಜಿನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಚರ್ಚ್ ಆಫ್ ಸೌತ್ ಇಂಡಿಯಾ ಹಾಸ್ಪಿಟಲ್‍ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಅವ್ಯಹಾರಕ್ಕೆ ಸಂಬಂಧಪಟ್ಟಂತೆ ವಿನೋದ ದಾಸ್ ಎಂಬ ವ್ಯಕ್ತಿ ವಿರುದ್ಧ ಕೊತ್ತನೂರು ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ವಿನೋದ್ ದಾಸ್ ರಾಜಿ ಸಂಧಾನಕ್ಕಾಗಿ ಮಹಿಳೆಯನ್ನು ಬಿಷಪ್ ಬಳಿ ಕರೆದುಕೊಂಡು ಹೋಗಿದ್ದರು. ಈ ವೇಳೆ ಬಿಷಪ್ ಕೇಸ್ ವಾಪಸ್ ಪಡೆಯುವಂತೆ ಮಹಿಳೆಗೆ ಒತ್ತಾಯಿಸಿ ಒಪ್ಪದಿದ್ದಾಗ 1 ಕೋಟಿ ರೂ. ಕೊಡುವುದಾಗಿ ಆಮಿಷವೊಡ್ಡಿ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದರು. ಇದಕ್ಕೆ  ವಿರೋಧಿಸಿದಾಗ ಕೊಲೆ ಬೆದರಿಕೆ ಹಾಕಿದ್ದಾಗಿ ಸಂತ್ರಸ್ತೆ ಆರೋಪಿಸಿದ್ದಾರೆ.

ಅವಮಾನದಿಂದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದೆ ಎಂದು ಸಂತ್ರಸ್ಥ ಮಹಿಳೆಯು ತಿಳಿಸಿದ್ದು ಅದರ ವಿಡಿಯೋ ಬಯಲಾಗಿದೆ ಹಿಂದೆ ಬಿಷಪ್ ಸ್ಯಾಮ್ಯೂಯೆಲ್ ವಿರುದ್ಧ ಪೆÇೀಕ್ಸೋ, ಲೈಂಗಿಕ ದೌರ್ಜನ್ಯ, ಬೆದರಿಕೆ, ಭೂ ಕಬಳಿಕೆ ಇನ್ನಿತರ ಪ್ರಕರಣಗಳು ದಾಖಲಾಗಿವೆ.


ಸಂಬಂಧಿತ ಟ್ಯಾಗ್ಗಳು

# Sexual Assault #CbI #Bangalore #Sunilkumar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ