ಎಚ್‍ಎಸ್‍ಆರ್ ಲೇಔಟ್ ಪೊಲೀಸರಿಗಿನ್ನು ಕಡ್ಡಾಯ ರಜೆ

Compulsory leave for the  HSR Lay Out Police

04-02-2019

ಹೆಚ್‍ಎಸ್‍ಆರ್ ಪೊಲೀಸ ಠಾಣೆಯ ಸಿಬ್ಬಂದಿಯ ಹುಟ್ಟುಹಬ್ಬದ ದಿನ ಹಾಗೂ ವಿವಾಹ ವಾರ್ಷಿಕೋತ್ಸವ ದಿನವನ್ನು ಕಡ್ಡಾಯ ವಾರದ ರಜೆಯನ್ನಾಗಿ ಇನ್ಸ್‍ಪೆಕ್ಟರ್ ಎಸ್.ಆರ್ ರಾಘವೇಂದ್ರ ಅವರು ಘೋಷಣೆ ಮಾಡಿದ್ದಾರೆ.

ವಾರದಲ್ಲಿ ಯಾವುದೇ ದಿನ ರಜೆಯಿರಲಿ ಅದರ ಬದಲಿಗೆ ಸಿಬ್ಬಂದಿಯ ಹುಟ್ಟುಹಬ್ಬದ ದಿನ ಹಾಗೂ ವಿವಾಹ ವಾರ್ಷಿಕೋತ್ಸವ ದಿನದಂದು ರಜೆ ಪಡೆದುಕೊಳ್ಳಬಹುದು ಎಂದು ಅವರು ಠಾಣೆಯ ನೋಟಿಸ್ ಬೋರ್ಡ್‍ನಲ್ಲಿ ಹಾಕಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒತ್ತಡದ ಬದುಕಿನಲ್ಲಿ ನಿಮ್ಮ ಕುಟುಂಬದವರು ನಿಮ್ಮ ಪ್ರೀತಿ ನಿರೀಕ್ಷೆ ಮಾಡುತ್ತಿರುತ್ತಾರೆ.ಇದಕ್ಕಾಗಿ ಹುಟ್ಟುಹಬ್ಬದ ದಿನ ಹಾಗೂ ವಿವಾಹದ ದಿನ ನಿಮ್ಮ ಕುಟುಂಬದ ಜೊತೆ ಕಳೆಯಿರಿ ಎಂದು ಇನ್ಸ್ ಪೆಕ್ಟರ್ ಸಿಬ್ಬಂದಿಗೆ ಪತ್ರದ ಮೂಲಕ ಉಡುಗೊರೆ ನೀಡಿದ್ದಾರೆ.

ಕುಟುಂಬದವರು ಮತ್ತು ಪ್ರೀತಿ ಪಾತ್ರದಾರ ಸ್ನೇಹಿತರು ಮಾತ್ರ ಅದಕ್ಕಾಗಿ ನಿಮ್ಮ ಹುಟ್ಟುಹಬ್ಬದ ದಿನವನ್ನು ಹಾಗೂ ನಿಮ್ಮ ವಿವಾಹದ ದಿನವನ್ನು ಹೆಚ್ಚ ಅರ್ಥಪೂರ್ಣವಾಗಿ ಆಚರಿಸಲು ಆ ದಿನಗಳಂದು ಕಡ್ಡಾಯವಾಗಿ ವಾರದ ರಜೆಯನ್ನು ಬಳಸಿಕೊಳ್ಳಲು ಸೂಚಿಸಿರುತ್ತೇನೆ. ಇದರಿಂದ ನೀವುಗಳು ವೃತ್ತಿ ಜೀವನದಲ್ಲಿ ಒತ್ತಡವಿಲ್ಲದೆ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲಿ ಎಂಬುದು ನನ್ನ ಆಶಯ'' ಎಂದು ಸಿಬ್ಬಂದಿಗೆ ಪತ್ರ ಬರೆದಿದ್ದಾರೆ.ಇನ್ಸ್‍ಪೆಕ್ಟರ್ ಎಸ್.ಆರ್ ರಾಘವೇಂದ್ರ ಅವರು ನೀಡಿದ ಈ ಕೊಡುಗೆಯಿಂದ ಪೆÇಲೀಸ್ ಸಿಬ್ಬಂದಿ ಫುಲ್ ಖುಷಿಯಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Bangalore #Police #Hsr LayOut #Leave


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ