ಕುಸ್ತಿಗೆ ಅಂತ್ಯ ಹಾಡಲು ಫೆ 6 ಕ್ಕೆ ದೋಸ್ತಿ ಸಭೆ?

 The Dosthi meeting was held on February 6 to end the War?

04-02-2019

ಆಪರೇಷನ್ ಕಮಲದ ಕರಿನೆರಳು, ಸರ್ಕಾರದ ಪತನದ ಭೀತಿ ನಡುವೆ ಮೈತ್ರಿ ಸರ್ಕಾರದ ಪಕ್ಷಗಳ ನಾಯಕರಲ್ಲಿ ಕೇಳಿ ಬರುತ್ತಿರುವ ಅಪಸ್ವರ, ವಿವಾದ, ಆರೋಪ-ಪ್ರತ್ಯಾರೋಪಕ್ಕೆ ಉತ್ತರ ಕಂಡುಕೊಳ್ಳಲು ಉಭಯ ಪಕ್ಷಗಳ ನಾಯಕರು ಕೊನೆಗೂ ಮುಂದಾಗಿದ್ದಾರೆ.

ಫೆಬ್ರವರಿ 6ರಂದು ಖಾಸಗಿ ಹೋಟೆಲಿನಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಜಂಟಿ ಶಾಸಕಾಂಗ ಸಭೆಗೆ ನಡೆಸಲು ತೀರ್ಮಾನಿಸಿದ್ದಾರೆ. ಅಂದಿನ ಸಭೆಗೆ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಸಂಸದರು,ವಿಧಾನ ಪರಿಷತ್ ಸದಸ್ಯರು ಹಾಜರಾಗಲಿದ್ದಾರೆ.

ಜಂಟಿ ಶಾಸಕಾಂಗ ಸಭೆಗೆ ಮಾಜಿ ಪ್ರಧಾನಿ ದೇವೇಗೌಡರು ಹಾಜರಾಗಲು ಆಸಕ್ತರಾಗಿದ್ದಾರೆ. ಆದರೆ ಅನಾರೋಗ್ಯದಿಂದ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿರುವ ಕಾರಣ ಸಭೆಗೆ ಹಾಜರಾಗುವುದು ಸಾಧ್ಯಗಳು ಕ್ಷೀಣಿಸಿದೆ ಎನ್ನಲಾಗಿದೆ.

ಆಮೂಲಕ ಶಾಸಕರ ಆರೋಪಗಳು, ಅನುದಾನ ಹಂಚಿಕೆ ತಾರತಮ್ಯ, ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವಣ ದ್ವೇಷಮಯ ವಾತಾವರಣ, ಭಿನ್ನಾಭಿಪ್ರಾಯಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರ ನೀಡಲಿದ್ದಾರೆ. ಅಲ್ಲದೆ ಸಮಸ್ಯೆಗಳಿದ್ದರೆ ತಕ್ಷಣ ಸಚಿವರಿಗೆ ಸೂಚನೆ ನೀಡುವ ಮೂಲಕ ವಿವಾದ ಇತ್ಯರ್ಥಗೊಳಿಸಲು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಮೈತ್ರಿ ಸರ್ಕಾರದ ಪತನಕ್ಕೆ ಬಿಜೆಪಿ ಮುಹೂರ್ತ ನಿಗದಿ ಮಾಡಿರುವ ಬೆನ್ನಲ್ಲೇ ಉಭಯ ಪಕ್ಷಗಳ ಮುಖಂಡರು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಒಟ್ಟಾಗಿ ಸರ್ಕಾರ ಮುನ್ನಡೆಸುವ ಮೂಲಕ ಆಪರೇಷನ್ ಕಮಲಕ್ಕೆ ತಡೆಯೊಡ್ಡುವ ತಂತ್ರ ರೂಪಿಸಿದ್ದಾರೆ.

ಫೆಬವರಿ 6 ರಂದು ಮೈತ್ರಿ ಪಕ್ಷಗಳ ಶಾಸಕಾಂಗ ಸಭೆ ಕರೆಯಲಾಗಿದೆ ಎಂದು ಅಧಿಕೃತವಾಗಿ ಆಹ್ವಾನ ಪತ್ರ ನೀಡಿಲ್ಲ, ಆದರೆ  ಉಪ ಮುಖ್ಯಮಂತ್ರಿ ಅವರು ಅಂದು ಔತಣಕೂಟ ಏರ್ಪಡಿಸಿದ್ದು ಇದರ ನೆಪದಲ್ಲಿ ಉಭಯ ಪಕ್ಷಗಳ ಸಚಿವರು, ಶಾಸಕರು, ಸಂಸದರು,ವಿಧಾನ ಪರಿಷತ್ ಸದಸ್ಯರು ಆಗಮಿಸಬೇಕೆಂದು ಕರೆಯೋಲೆ ನೀಡಲಾಗಿದೆ.

ಜಂಟಿ ಶಾಸಕಾಂಗ ಸಭೆಗೆ ಕಾಂಗ್ರೆಸ್ ಅತೃಪ್ತ 4 ಶಾಸಕರಿಗೂ ಆಹ್ವಾನ ನೀಡಲಾಗಿದ್ದು ಫೆಬ್ರವರಿ 6 ಸಭೆಗೂ ಎಷ್ಟು ಅಸಮಾಧಾನಿತ ಶಾಸಕರು ಹಾಜರಾಗುತ್ತಾರೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

ಫೆಬವರಿ 6 ರಂದು ಆರಂಭವಾಗಲಿರುವ ಜಂಟಿ ಅಧಿವೇಶನ ಮತ್ತು ಆಯವ್ಯಯ ಕಲಾಪದಲ್ಲಿ ಪಾಲ್ಗೊಳ್ಳುವಂತೆ ಶಾಸಕರಿಗೆ ವಿಪ್ ಜಾರಿ ಮಾಡಲು ಶಾಸಕಾಂಗ ನಾಯಕ ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

#Feb 6 #Karnataka #Meeting #Dosthi War


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ