ಪಂಚತಂತ್ರಕ್ಕೆ ಬಂದ್ರು  ಮಂಕುತಿಮ್ಮ

Mankuthimma In Panchatantra Movie

04-02-2019

ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪಂಚತಂತ್ರ ಚಿತ್ರ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರದ ಶೃಂಗಾರದ ಹೊಂಗೆ ಮರ ಹೂಬಿಟ್ಟಿದೆ ಹಾಡು ಯೂಟ್ಯೂಬ್‍ನಲ್ಲಿ ಮೋಡಿ ಮಾಡಿದ್ದು, ಯುವಜನತೆಯ ಮನಗೆದ್ದಿದೆ. ಈ ಹಾಡು ಚಳಿಗಾಲದಲ್ಲಿ ಹನಿಮೂನಿಗೆ ಹೊರಟಿರುವ ಜೋಡಿಗೆ  ಗಿಫ್ಟ್ ಎಂದು ಭಟ್ರು ವ್ಯಾಖ್ಯಾನಿಸಿದ್ದಾರೆ. ಇದೀಗ ಚಿತ್ರದ ಎರಡನೇ ಹಾಡಿಗಾಗಿ ಭಟ್ರು ಮಂಕುತಿಮ್ಮನನ್ನೇ ಕರೆತಂದಿದ್ದು, ಹಾಡು ಸಖತ್ ವೈರಲ್ ಆಗ್ತಿದೆ. 


ಈ ಹಾಡನ್ನು ರಘು ದೀಕ್ಷಿತರು ಹಾಡಿದ್ದು,  ಯುವಜನತೆ ಹಾಗೂ ಮಧ್ಯವಯಸ್ಸಿನವರ ನಡುವಿನ ತಳಮಳನ್ನು ಈ ಹಾಡಿನಲ್ಲಿ ಚಿತ್ರಿಸುವ ಪ್ರಯತ್ನ ನಡೆದಿದೆ.  ಈ ಹಾಡಿನ ಆಡಿಯೋ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೂಪರ್ ಹಿಟ್ ಆಗಿದ್ದು, ಈಗಾಗಲೆ ಲಕ್ಷಾಂತರ ಜನರು ಸಾಂಗ್ ನೋಡಿ ಎಂಜಾಯ್ ಮಾಡ್ತಿದ್ದಾರೆ.  

ವಿಹಾನ್ ಗೌಡ್,ಸೋನಲ್ ಮಂಥೆರೋ,ಅಕ್ಷರ ಗೌಡ್ ನಟನೆಯ  ಈ ಸಿನಿಮಾ ಸಧ್ಯದಲ್ಲಿ ಬಿಡುಗಡೆಯಾಗಲಿದೆ. ಈ ಹಿಂದೆ ಬಿಡುಗಡೆಯಾದ  ಸಿನಿಮಾದ  ಎರಡು ಹಾಡುಗಳು ಸೂಪರ್ ಹಿಟ್ ಆಗಿದ್ದು,  ಈ ಹಾಡು ಕೂಡ ದೊಡ್ಡಮಟ್ಟದಲ್ಲಿ ಯಶಸ್ಸು ಪಡೆಯಲಿದೆ. 

ಇದೇ ಮೊದಲ ಬಾರಿಗೆ  ಹರಿಕೃಷ್ಣ, ಯೋಗರಾಜ್ ಭಟ್, ರಘು ದೀಕ್ಷಿತ್ ಒಂದಾಗಿರುವುದು ಈ ಹಾಡು ಹಿಟ್ ಆಗಲು ಮುಖ್ಯ ಕಾರಣ ಎನ್ನಲಾಗುತ್ತಿದೆ.  ಇನ್ನು  ಈ ಚಿತ್ರದಲ್ಲಿ  ರಂಗಾಯಣ ರಘು ಹಾಸ್ಯವಿದ್ದು, ಈ ಚಿತ್ರ ಸಾಕಷ್ಟು ಯಶಸ್ಸು ಪಡೆಯುವ ನೀರಿಕ್ಷೆ ಮೂಡಿಸಿದೆ. 


ಸಂಬಂಧಿತ ಟ್ಯಾಗ್ಗಳು

#Panchatantra #Mankutimma #Yograj Bhat #Movie


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ