ಮಾನಸಿಕ ಅಸ್ವಸ್ಥರ ನರಳಾಟ ನೆರವಿಗೆ ಬಾರದ ಜಿಲ್ಲಾಡಳಿತ !

Kannada News

06-06-2017

ಕೊಪ್ಪಳ:- ಹಸಿವಿನಿಂದ ತತ್ತರಿಸಿರುವ ಇಬ್ಬರು ಮಾನಸಿಕ ಅಸ್ವಸ್ಥರನ್ನು ಮನೆಯಲ್ಲಿ ಕೂಡಿ ಹಾಕಲಾಗಿರುವ ಅಮಾನವೀಯ ಘಟನೆಯೊಂದು ಕೊಪ್ಪಳದಲ್ಲಿ ನಡೆದಿದೆ. ಈ ಮಾನಸಿಕ ಅಸ್ವಸ್ಥರು ದನದ  ಕೊಟ್ಟಿಗೆಯಲ್ಲಿನ ಪಶುಗಳಂತೆ ವಾಸ  ಮಾಡುತ್ತಿದ್ದು ನಗ್ನರಾಗಿದ್ದಾರೆ. ಮಾನಸಿಕ ಅಸ್ವಸ್ಥರು ಕುಷ್ಟಗಿ ತಾಲೂಕಿನ ಬೊಮ್ಮನಾಳದವರು, ಮುತ್ತಪ್ಪ ಹಾಗು ಬಿಂದುರಾವ ಎಂಬುವವರು ಮಾನಸಿಕ ಅಸ್ವಸ್ಥರು. ಮುತ್ತಪ್ಪನ ಪತ್ನಿ ಬರ ಹಿನ್ನಲೆ  ಮಂಗಳೂರಿಗೆ ಗುಳೇ ಹೋಗಿದ್ದಾರೆ, ಬಿಂದುರಾವ ಅವರಿಗೆ ಸಂಬಂಧಿಗಳು ಇಲ್ಲ. ಇವರಿಗೆ ಚಿಕಿತ್ಸೆ ಕೊಡಿಸಿ ಎಂದು ಸ್ಥಳೀಯರು ಸಹಾಯಕ ಆಯುಕ್ತರಿಗೆ ಮನವಿ ಮಾಡಿದ್ದರು. ಸಹಾಯಕ ಆಯುಕ್ತರು ಕ್ರಮ ಕೈಗೊಳ್ಳಬೇಕೆಂದು ಆರೋಗ್ಯ ಇಲಾಖೆಗೆ ಫೆಬ್ರವರಿ ತಿಂಗಳಲ್ಲಿಯೇ ಪತ್ರ ಬರೆಯಲಾಗಿತ್ತು. ಆದರೆ ಆರೋಗ್ಯ ಇಲಾಖೆಗೆ ಪತ್ರ ಬರೆದು ನಾಲ್ಕು ತಿಂಗಳಾದರೂ ಯಾವುದೇ ಪ್ರಯೋಜನವಾಗಲಿಲ್ಲ, ಗ್ರಾಮಸ್ಥರು ಅಸ್ವಸ್ಥರಿಗೆ ಆಗಾಗ  ಆಹಾರ ನೀಡುತ್ತಿದ್ದಾರೆ.  ನೆರವಿಗೆ ಬಾರದ ಜಿಲ್ಲಾಡಳಿತದ ವಿರುದ್ದ ಗ್ರಾಮಸ್ಥರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ