ತಿರುಪತಿಯಲ್ಲಿ ವಜ್ರದ ಕಿರೀಟ ಕಳವು

 The diamond crown was stolen in Tirupati

04-02-2019

ತಿರುಪತಿಯ  ದೇವಾಲಯದಲ್ಲಿ ಮೂರು ರತ್ನಖಚಿತ ಬಂಗಾರದ ಕಿರೀಟಗಳ ಕಳ್ಳತನವಾಗಿದ್ದು, ಆಡಳಿತ ಮಂಡಳಿ ಹಾಗೂ ಭಕ್ತರು ಕಂಗಾಲಾಗಿದ್ದಾರೆ. ತಿರುಪತಿ ತಿರುಮಲ ದೇವಸ್ಥಾನದ ಆಡಳಿತಕ್ಕೆ ಸೇರಿದ ಗೋವಿಂದರಾಜ ಸ್ವಾಮಿ ದೇವಾಲಯದಲ್ಲಿ ಭಾರಿ ಪ್ರಮಾಣ ಕಳುವು ನಡೆದಿದೆ. ಶನಿವಾರ ಸಂಜೆ ನಡೆದಿರಬಹುದೆಂದು ಶಂಕಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 


12 ನೇ ಶತಮಾನದಲ್ಲಿ ಶ್ರೀರಾಮಾನುಜಾಚಾರ್ಯರಿಂದ ಸ್ಥಾಪನೆಯಾದ  ತಿರುಪತಿಯ  ದೊಡ್ಡ ದೇವಾಲಯ ಇದಾಗಿದ್ದು, ಇಲ್ಲಿರುವ  ಕಿರೀಟಗಳಲ್ಲಿ ಅತ್ಯಮೂಲ್ಯವಾದ ರತ್ನ ಹಾಗೂ ವಜ್ರಗಳಿಂದ ಅಲಂಕರಿಸಲ್ಪಟ್ಟಿದ್ದು,  ಕಳುವಾದ ಈ ಕಿರೀಟದ ಮೌಲ್ಯ ಅಂದಾಜಿಸುವುದೇ ಕಷ್ಟವಾಗಿದೆ. ಮಲಯಪ್ಪ ದೇವರ 528 ಗ್ರಾಂನ ಕಿರೀಟ, ಶ್ರೀದೇವಿಯ 408 ಗ್ರಾಂನ ಕಿರೀಟ,ಭೂದೇವಿಯ 415 ಗ್ರಾಂ ಕಿರೀಟ ಕಳುವಾಗಿದೆ.

ಪೊಲೀಸರು ಕಳುವಾದ ಸ್ಥಳದ ಹಾಗೂ ದೇವಾಲಯದ ಇತರ ಭಾಗದ ಸಿಸಿಟಿವಿಗಳ ಪರಿಶೀಲನೆಯಲ್ಲಿ ತೊಡಗಿದ್ದು, ತನಿಖೆ ವೇಳೆಯಲ್ಲಿ ದೇವಾಲಯದ ಸಿಬ್ಬಂದಿ ಹಾಗೂ ಬಂದ ಭಕ್ತರು ಕೂಡ ಶಂಕಿತರೇ, ನಾವು ಕಿರೀಟ ಪತ್ತೆ ಮಾಡಲು ಎಲ್ಲರನ್ನು ವಿಚಾರಣೆಗೆ ಒಳಪಡಿಸುತ್ತೇವೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಆದರೆ ಅಷ್ಟೊಂದು ಬಿಗಿಭದ್ರತೆಯ ದೇವಾಲಯದಲ್ಲಿ ಇಂತಹದೊಂದು ಘಟನೆ ನಡೆದಿರೋದು ಅಚ್ಚರಿಗೆ ಕಾರಣವಾಗಿದೆ.
 


ಸಂಬಂಧಿತ ಟ್ಯಾಗ್ಗಳು

#Tirupati #Stolen #Diamond crown #Shocking


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ