ಮಾಜಿ ಪ್ರಧಾನಿ ದೇವೆಗೌಡರು ಆಸ್ಪತ್ರೆಗೆ ದಾಖಲು 

 Former Prime Minister Deve Gowda Hospitalized

02-02-2019

ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು ಬಾತ್‍ರೂಮಿನಲ್ಲಿ ಜಾರಿ ಬಿದ್ದು ಗಾಯಗೊಂಡಿದ್ದಾರೆ. ಪದ್ಮನಾಭನಗರದಲ್ಲಿ ಮಧ್ಯಾಹ್ನನದ ವೇಳೆ ಈ ಘಟನೆ ನಡೆದಿದ್ದು, ಬಾತ್‍ರೂಮಿನಲ್ಲಿ ಜಾರಿ ಬಿದ್ದ ಕಾರಣ ದೇವೆಗೌಡರು ಕಾಲು ಮೂಳೆಮುರಿದು ಹೋಗಿದೆ ಎನ್ನಲಾಗಿದೆ. 
ಮನೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಇದೀಗ ದೇವೆಗೌಡರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಡಿ ಹಾಗೂ ಕಾಲಿನ ಮೂಳೆಯಲ್ಲಿ ಬಿರುಕು ಮೂಡಿರುವ ಶಂಕೆ  ವ್ಯಕ್ತವಾಗಿದ್ದು,ಎಕ್ಸರೆ ಮಾಡಲು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ದೇವೆಗೌಡರ ಆರೋಗ್ಯ ಸ್ಥಿರವಾಗಿದೆ.ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ
ನನ್ನ ಆರೋಗ್ಯ ಸ್ಥಿರವಾಗಿದೆ. ಕಾಲು ಸ್ವಲ್ಪ ಟ್ವಿಸ್ಟ್ ಆಗಿದೆ. ವೈದ್ಯರ ಸೂಚನೆಯಂತೆ ಎಮ್‍ಆರ್‍ಐ ಸ್ಕ್ಯಾನಿಂಗ್ ಮಾಡಿಸಲು ಆಸ್ಪತ್ರೆಗೆ ತೆರಳುತ್ತಿದ್ದೇನೆ. ಯಾವುದೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸ್ವತಃ ದೇವೆಗೌಡರು ಪ್ರತಿಕ್ರಿಯಿಸಿದ್ದಾರೆ.  


ಸಂಬಂಧಿತ ಟ್ಯಾಗ್ಗಳು

#Former Prime Minister # Hospitalized # Deve Gowda #Bangalore


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ