ಸಿಮಿ ನಿಷೇಧ ಮತ್ತೆ 5 ವರ್ಷಗಳ ಕಾಲ ವಿಸ್ತರಣೆ

 Simi ban again for 5 years

02-02-2019

ದೇಶದಲ್ಲಿ ಹಲವು ವಿಧ್ವಂಸಕ ಕೃತ್ಯಗಳನ್ನು ನಡೆಸಿದ  ಹಾಗೂಭಾಗಿಯಾಗಿರುವ ಆರೋಪ ಹೊತ್ತಿರುವ  ಸಿಮಿ ಸಂಘಟನೆಯ ಮೇಲಿನ ನಿಷೇಧವನ್ನು  ಐದು ವರ್ಷಗಳ ಕಾಲ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಸಿಮಿ ಸಂಘಟನೆಯ ಪ್ರಮುಖರು ಭಾಗಿಯಾಗಿರುವ 58   ಪ್ರಕರಣಗಳನ್ನು ಪಟ್ಟಿ ಮಾಡಿ ಗೃಹ ಸಚಿವಾಲಯವೂ ನಿಷೇಧ ವಿಸ್ತರಿಸಿರುವ ಬಗ್ಗೆ ಅಧಿಕೃತ ಸೂಚನೆ ಹೊರಡಿಸಿದೆ. 

 ಸ್ಟುಡೆಂಟ್ ಇಸ್ಲಾಮಿಕ್ ಮೂವಮೆಂಟ್ ಆಫ್ ಇಂಡಿಯಾ,  ಕೋಮು ಸೌಹಾರ್ದ ಕದಡುವ ಮೂಲಕ ದೇಶದ ಜನರ ಮನಸ್ಸನ್ನು ಹದಗೆಡಿಸುತ್ತಿದೆ. ಅಲ್ಲದೇ ದೇಶದ ಭದ್ರತೆಗೆ ಧಕ್ಕೆ ತರುವಂತಹ ಚಟುವಟಿಕೆಯಲ್ಲೂ ಭಾಗಿಯಾಗಿರುವುದು ಧೃಡಪಟ್ಟಿದೆ.  ಹೀಗಾಗಿ ಈ ಕಾರಣಗಳಿಂದ ತಕ್ಷಣವೇ ಸಿಮಿಯನ್ನು ನಿಷೇಧಿತ ಸಂಘಟನೆ ಎಂದು ಘೋಷಿಸುವ ಅಗತ್ಯವಿದೆ ಎಂದು ಗೃಹ ಸಚಿವಾಲಯ  ಅಭಿಪ್ರಾಯಿಸಿದೆ. 

2014 ರಲ್ಲಿ ಗೃಹ ಸಚಿವಾಲಯವೂ  ಸಿಮಿಯನ್ನು  ಐದು ವರ್ಷಗಳ ಅವಧಿಗೆ ನಿಷೇಧಿಸಿತ್ತು.  ಈ ಅವಧಿ ಜನವರಿ 31ಕ್ಕೆ ಕೊನೆಗೊಂಡ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಿದ ಕೇಂದ್ರ ಸರ್ಕಾರವೂ  ಮತ್ತೊಮ್ಮೆ ನಿಷೇಧ ಹೇರಿದ್ದು, ಐದು ವರ್ಷಗಳ ಅವಧಿಗೆ ಈ ನಿಷೇಧ ಇರಲಿದೆ. ಇದರಿಂದ ದೇಶದಲ್ಲಿ ಈ ಸಂಘಟನೆ ಯಾವುದೇ ಚಟುವಟಿಕೆ, ಸಭೆ,ಸಮಾರಂಭ,ಹೋರಾಟ,ಕೈಗೊಳ್ಳುವಂತಿಲ್ಲ. ಸಂಘಟನೆಯೊಂದಿಗೆ ಸಂಪರ್ಕ ಹೊಂದಿದವರನ್ನು ಶಿಕ್ಷಿಸುವ ಅಧಿಕಾರವೂ ಸರ್ಕಾರಕ್ಕಿದೆ. 

 ದೇಶವನ್ನೆ ಬೆಚ್ಚಿಬೀಳಿಸಿದ್ದ 2014 ರ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯ ಸ್ಪೋಟ್,2017 ರಲ್ಲಿನ ಗಯಾ ಸ್ಪೋಟ್ ಪ್ರಕರಣ ಸೇರಿದಂತೆ ದೇಶದಲ್ಲಿ ನಡೆದ ಹಲವು ಬಾಂಬ್ ಸ್ಪೋಟ್ ಪ್ರಕರಣದಲ್ಲಿ ಈ ಸಂಘಟನೆಯ ಕಾರ್ಯಕರ್ತರ ಹೆಸರು ಕೇಳಿಬಂದಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನಿಷೇಧ ಹೇರಲಾಗಿದೆ. 


ಸಂಬಂಧಿತ ಟ್ಯಾಗ್ಗಳು

#Simi #Five Years #Ban #Home Ministry


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ