900 ವರ್ಷಗಳ ಹಳೆಯ ಬುದ್ಧನ ವಿಗ್ರಹವನ್ನು ಮಾರುತ್ತಿದ್ದ ವ್ಯಕ್ತಿ ಬಂಧನ !

Kannada News

05-06-2017

ನವದೆಹಲಿ :- ಹನ್ನೆರಡನೆ ಶತಮಾನದ ಬುದ್ಧನ ವಿಗ್ರಹವನ್ನು ಮಾರುತ್ತಿದ್ದ ವ್ಯಕ್ತಿಯನ್ನು ದೆಹಲಿ ಕ್ರೈಮ್ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಉತ್ತರ ದೆಹಲಿಯಲ್ಲಿ ವಿಗ್ರಹ ಮಾರಾಟದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ದೆಹಲಿ ಡಿಸಿಪಿ ಮಧುರ್ ವರ್ಮಾ ವಿಗ್ರಹವನ್ನು 1. 4 ಕೋಟಿಗೆ ಮಾರಲೆತ್ನಿಸುತ್ತಿದ್ದಾಗ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನಗ್ವಾಂಗ್ ಟುಸಂಡ್ ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ವಿಗ್ರವನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ ಈತ ಭಾರತಕ್ಕೆ 2009-10 ರಲ್ಲಿ ಬಂದಿದ್ದು, ಟಿಬೆಟ್ ಮೂಲದವನಾಗಿದ್ದಾನೆ. ಅರುಣಾಚಲ ಪ್ರದೇಶದ ಚೀಪಾ ಎಂಬ ಕುಟುಂಬದೊಂದಿಗೆ ಪರಿಚಯ ಬೆಳಸಿಕೊಂಡ  ನಗ್ವಾಂಗ್ ಅವರ ಮನೆಯ ಮಗಳನ್ನು ವಿವಾಹವಾಗಿದ್ದ ಮತ್ತು ಅಷ್ಟೇ ಬೇಗ ವಿಚ್ಚೇದನವು ಆಗಿತ್ತು, ವಿವಾಹವಾದ ನಂತರದಲ್ಲಿ ಚೀಪಾ ಅವರ ಕುಟುಂದಲ್ಲಿ ಬೆಲೆಬಾಳುವ  ವಿಗ್ರಹಳ ಮೇಲೆ  ಕಣ್ಣಿಟ್ಟಿದ್ದ. ಹಣದ ಆಸೆಗೆ  ಬುದ್ಧನ ವಿಗ್ರಹವನ್ನು ತೆಗೆದುಕೊಂಡು ಪರಾರಿಯಾಗಿದ್ದನು, ಇದೀಗ ವಿಗ್ರಹ ಮಾರತ್ತಿದ್ದಾಗ ದೆಹಲಿ  ಪೊಲೀಸರ ಅತಿಥಿಯಾಗಿದ್ದಾನೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ