ಮೋದಿ ಬಜೆಟ್ ಬಿಜೆಪಿಯ ಚುನಾವಣಾ ಪ್ರಣಾಳಿಕೆ- ಖರ್ಗೆ

Modi

01-02-2019

ಮೋದಿ ನೇತ್ರತ್ವದ ಎನ್‍ಡಿಎ ಸರ್ಕಾರ ಮಂಡಿಸಿದ ಮಧ್ಯಂತರ ಬಜೆಟ್‍ನ್ನು ವಿಪಕ್ಷಗಳು ಬಿಜೆಪಿಯ ಚುನಾವಣಾ ಪ್ರಣಾಳಿಕೆ ಎಂದು ಟೀಕಿಸಿದೆ. ಪಿಯೂಶ್ ಗೋಯಲ್ ಬಜೆಟ್ ಮಂಡಿಸುತ್ತಿದ್ದಂತೆ ದೇಶದ ವಿವಿಧೆಡೆಯಿಂದ ವಿಮರ್ಶೆ ಪ್ರಾರಂಭವಾಗಿದ್ದು, ರೈತರ ಸಾಲ ಮನ್ನಾ ಮಾಡದೆ ಇರುವುದು ಸೇರಿದಂತೆ ಹಲವು ವಿಚಾರಕ್ಕಾಗಿ ಈ ಬಜೆಟ್ ಜನೋಪಯೋಗಿ ಅಲ್ಲ ಎಂದು ವಿಪಕ್ಷಗಳು ಟೀಕಿಸಿವೆ.

ಬಜೆಟ್ ಮಂಡನೆ ಬಳಿಕ ಸಂಸತ್ ಭವನದ ಹೊರಗಡೆ ಮಾಧ್ಯಮದ ಜೊತೆ ಮಾತನಾಡಿದ ಕಾಂಗ್ರೆಸ್‍ನ ಲೋಕಸಭೆ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಇದು ಬಿಜೆಪಿಯ ಚುನಾವಣಾ ಪ್ರಣಾಳಿಕೆಯಾಗಿದ್ದು, ಲೋಕಸಭೆ ಚುನಾವಣೆಗೂ ಮುನ್ನ  ಬಿಜೆಪಿ ಜನರಿಗೆ ಲಂಚ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಕೇವಲ ಎರಡು-ಮೂರು ತಿಂಗಳು ಆಡಳಿತ ಉಳಿಸಿಕೊಂಡಿರುವ ಬಿಜೆಪಿ ಈ ಘೋಷಣೆಗಳನ್ನು ಈಡೇರಿಸುವುದು ಸಾಧ್ಯವಿಲ್ಲದ ಮಾತು ಎಂದು ಅವರು ಅಭಿಪ್ರಾಯಿಸಿದ್ದಾರೆ. 
ಇನ್ನು ಬಜೆಟ್‍ನ್ನು ಟೀಕಿಸಿರುವ ರಾಹುಲ್ ಗಾಂಧಿ, ರೈತರ ಸಾಲ ಮನ್ನಾ ಮಾಡಿಲ್ಲ. ಅಲ್ಲದೇ ರೈತರಿಗೆ ದಿನದ ವೆಚ್ಚವಾಗಿ ಕೇವಲ 17 ರೂಪಾಯಿಯಂತೆ 6 ಸಾವಿರ ರೂಪಾಯಿ ಘೋಷಿಸಿರೋದು ರೈತ ಸಮುದಾಯಕ್ಕೆ ಮೋದಿ ಮಾಡಿರುವ ಅನ್ಯಾಯ ಎಂದರು. 
ಬಜೆಟ್ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಮೋದಿ ಬಡವರ ಹಾಗೂ ರೈತರ ಸ್ವಾವಲಂಬನೆಗಾಗಿ ಯಾವ ಯೋಜನೆಯನ್ನು ಘೋಷಿಸಿಲ್ಲ.  ಕೇಂದ್ರ ಸರ್ಕಾರದ ಬಜೆಟ್ ಕಾಟನ್ ಕ್ಯಾಂಡಿಯಂತೆ ಮೇಲ್ಬಾಗದಲ್ಲಿ ಮಾತ್ರ ಸಿಹಿಯಾಗಿದೆ. ಸಾಲಮನ್ನಾ ಮಾಡಿಲ್ಲ ಎಂದು ಟೀಕಿಸಿದ್ದಾರೆ. 
ಒಟ್ಟಿನಲ್ಲಿ ಮೋದಿ ನೇತ್ರತ್ವದ ಎನ್‍ಡಿಎ ಸರ್ಕಾರದ ಕೊನೆಯ ಬಜೆಟ್ ಆಗಿದ್ದ ಈ ಬಜೆಟ್ ಕಾಂಗ್ರೆಸ್ ಮತ್ತು ಜೆಡಿಎಸ್‍ನವರಿಗೆ ಸಮಧಾನ ತರುವಲ್ಲಿ ವಿಫಲವಾಗಿದ್ದು ಇದು ಕೇವಲ ಚುನಾವಣಾ ತಂತ್ರ ಎಂದೇ ಬಣ್ಣಿತವಾಗುತ್ತಿದೆ. 
 


ಸಂಬಂಧಿತ ಟ್ಯಾಗ್ಗಳು

#Modi Budget #Karghe #Bjp Manifesto #Rahul


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ