ಸ್ವತಂತ್ರವಾಗಿ ಕಣಕ್ಕಿಳಿತಾರಾ ಸುಮಲತಾ ಅಂಬರೀಶ್?

 Sumalatha Ambarish  Independent  Contestant ?

01-02-2019

ಇತ್ತೀಚಿಗೆ ನಿಧನರಾದ ಸ್ಯಾಂಡಲವುಡ್‍ನ ಹಿರಿಯಣ್ಣನಂತಿದ್ದ ನಟ, ಮಾಜಿ ಸಂಸದ,ಸಚಿವ ಅಂಬರೀಶ್ ಮಂಡ್ಯದ ಜನರ ಪಾಲಿಗೆ ಆಪತ್ಬಾಂದವರಂತಿದ್ದು, ಮಂಡ್ಯದ ಗಂಡು ಎನ್ನಿಸಿಕೊಂಡಿದ್ದರು. ಇದೀಗ ಅವರ ನಿಧನದಿಂದ ಮಂಡ್ಯ ರಾಜಕೀಯವಾಗಿ ಅನಾಥವಾಗಿದ್ದು, ಉತ್ತರಾಧಿಕಾರಿಯಾಗಿ ಯಾರು ಬರ್ತಾರೆ ಅನ್ನೋ ಕುತೂಹಲ ಸೃಷ್ಟಿಯಾಗಿದೆ. 

ಈ ಮಧ್ಯೆ ಮಂಡ್ಯದ ರಾಜಕೀಯ ಉತ್ತರಾಧಿಕಾರಿಯಾಗಿ ಸುಮಲತಾ ಅಂಬರೀಶ್ ಹೆಸರು ಕೇಳಿ ಬರುತ್ತಿದೆ.  ಅಂಬರೀಶ್ ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಮಂಡ್ಯದ ಜನರು ಅವರ ಉತ್ತರಾಧಿಕಾರಿಯಾಗಿ ಸುಮಲತಾ ಅವರೇ ಬರಬೇಕೆಂದು ಆಗ್ರಹಿಸಿದ್ದಾರೆ. ಇನ್ನು ಅಂಬಿ ಅಭಿಮಾನಿಗಳು ಹೇಗೆ ಹೇಳುತ್ತಾರೆ ಹಾಗೆ ಮುಂದಿನ  ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿರುವ ಸುಮಲತಾ ರಾಜಕೀಯಕ್ಕೆ ಬರಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. 

ಅಂಬರೀಶ್ ಅವರು ಕಾಂಗ್ರೆಸ್ ಪಕ್ಷದಲ್ಲೇ ಇದ್ದು, ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದರು. ಆದರೆ ಈ ಬಾರಿ ಕಾಂಗ್ರೆಸ್ ಮಂಡ್ಯದಲ್ಲಿ ಮೈತ್ರಿ ಮಾಡಿಕೊಂಡು ಜೆಡಿಎಸ್‍ಗೆ ಸೀಟು ಬಿಟ್ಟು ಕೊಡುವ ಸಾಧ್ಯತೆ ಇರೋದರಿಂದ ಸುಮಲತಾಗೆ ಕಾಂಗ್ರೆಸ್‍ನಿಂದ ಸೀಟು ಸಿಗೋದು ಕಷ್ಟ ಎನ್ನಲಾಗುತ್ತಿದೆ. ಹೀಗಾಗಿ ಮಂಡ್ಯದ ಅಂಬರೀಶ ಆಭಿಮಾನಿಗಳ ಜೊತೆ ಚರ್ಚಿಸಿ ಸುಮಲತಾ ಸ್ವತಂತ್ರವಾಗಿ ಸ್ಪರ್ಧಿಸುವ ಚಿಂತನೆಯಲ್ಲಿದ್ದಾರೆ. 
ಒಂದೊಮ್ಮೆ ಸುಮಲತಾ ಅಂಬರೀಶ್ ಕಾಂಗ್ರೆಸ್ ತೊರೆದು ಸ್ವತಂತ್ರವಾಗಿ ಸ್ಪರ್ಧಿಸಿದರೆ ಕೈಪಾಳಯಕ್ಕೆ ಹಿನ್ನಡೆಯಾಗಲಿದ್ದು,ಮಂಡ್ಯದಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಬಹುತೇಕ ಅಂಬಿ ಅಭಿಮಾನಿಗಳೇ ಆಗಿರೋದರಿಂದ ಕಾಂಗ್ರೆಸ್‍ನ ಸಾಂಪ್ರದಾಯಿಕ ಮತಗಳೆಲ್ಲ ಸುಮಲತಾ ಅಂಬರೀಶ್‍ರ ಕಡೆ ತಿರುಗಲಿದೆ. ಹೀಗಾಗಿ ಕಾಂಗ್ರೆಸ್ ಸುಮಲತಾರನ್ನು ಮನವೊಲಿಸುವ ಎಲ್ಲ ಸಾಧ್ಯತೆ ಇದೆ. 
ಇನ್ನು ಇಂಥ ರಾಜಕೀಯ ಪರಿಸ್ಥಿತಿಗಳ ಲಾಭ ಪಡೆಯುವಲ್ಲಿ ನಿಸ್ಸೀಮರಾಗಿರುವ ಜೆಡಿಎಸ್ ಕೂಡ ಸುಮಲತಾರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಸರ್ಕಸ್ ಆರಂಭಿಸುವ ಸಾಧ್ಯತೆ ಇದೆ. ಆದರೆ ಸುಮಲತಾ ಅಂಬರೀಶ್ ಅವರು, ಅಂಬಿ ಅಭಿಮಾನಿಗಳ ನಿರ್ಮಾಣವೇ ಅಂತಿಮ ಎಂದಿದ್ದು, ರಾಜಕೀಯ ಲೆಕ್ಕಾಚಾರ ಯಾರ ರೀತಿಯ ತಿರುವು ಪಡೆದುಕೊಳ್ಳುತ್ತೆ ಕಾದು ನೋಡಬೇಕಿದೆ. 


ಸಂಬಂಧಿತ ಟ್ಯಾಗ್ಗಳು

# Sumalatha Ambarish #Independent #Mandya #Contestant


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ