ಮೋದಿ ಬಜೆಟ್‍ನಲ್ಲಿ ಏನಿದೆ ಗೊತ್ತಾ?

What is Modi

01-02-2019

ಎನ್.ಡಿ.ಎ ಸರ್ಕಾರದ ಕೊನೆಯ ಬಜೆಟ್‍ನ್ನು ವಿತ್ತ ಸಚಿವ ಪಿಯೂಶ್ ಗೋಯೆಲ್ ಶುಕ್ರವಾರ ಮಂಡಿಸಿದ್ದು, 2019 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಬಡವರು, ಮಧ್ಯಮವರ್ಗದವರು, ಸರ್ಕಾರಿ ಉದ್ಯೋಗಿಗಳನ್ನು ಸೆಳೆಯುವಂತ ಬಜೆಟ್ ಮಂಡಿಸಿದ್ದಾರೆ. 

5 ಲಕ್ಷ ರೂಪಾಯಿವರೆಗಿನ ಆದಾಯ ಮಿತಿ ಹೊಂದಿರುವವರು ತೆರಿಗೆ ಪಾವತಿಸುವಂತಿಲ್ಲ. ಅಷ್ಟೇ ಅಲ್ಲ ಭವಿಷ್ಯ ನಿಧಿ ಹಾಗೂ ವಿಮೆಯಲ್ಲಿ  ಹೂಡಿಕೆ ಮಾಡಿದರೆ 6.25 ಲಕ್ಷ ರೂವರೆಗೂ ತೆರಿಗೆ ವಿನಾಯತಿ. ಟಿಡಿಎಸ್ ಅಡಿಯಲ್ಲಿ ಗೃಹಸಾಲದ ಮಿತಿ  1.5 ಲಕ್ಷ ರೂಪಾಯಿಯಿಂದ 2 ಲಕ್ಷ ರೂಪಾಯಿಗೆ ಏರಿಕೆ. ಸ್ಟ್ಯಾಂಡರ್ಡ್ ಡಿಡಕ್ಷನ್‍ನ್ನು 40 ಸಾವಿರದಿಂದ 50 ಸಾವಿರಕ್ಕೆ ಏರಿಸಲಾಗಿದೆ. ಮನೆ ಬಾಡಿಗೆ ಭತ್ಯೆ ಮಿತಿ ಹೆಚ್ಚಳ ಎಚ್‍ಆರ್‍ಎ 24 ಸಾವಿರದಿಂದ 60 ಸಾವಿರಕ್ಕೆ ಏರಿಕೆಯಾಗಿದೆ. 

ತೆರಿಗೆದಾರ 2 ಕೋಟಿ ತನಕ ಆದಾಯ ಉಳ್ಳವರಿಗೆ ಎರಡು ಮನೆ ಮೇಲಿನ ಹೂಡಿಕೆ ಮೇಲೆ ತೆರಿಗೆ ವಿನಾಯತಿ ದೊರೆಯಲಿದೆ. ಅಲ್ಲದೇ 5 ಲಕ್ಷದಿಂದ 10 ಲಕ್ಷದವರೆಗೆ ಆದಾಯ ಹೊಂದಿರುವವರಿಗೆ ಶೇ 20 ರಷ್ಟು ಹಾಗೂ 50 ಲಕ್ಷದಿಂದ 1 ಕೋಟಿ ರೂಪಾಯಿ ವಾರ್ಷಿಕ ಆದಾಯ ಇರುವರರಿಗೆ  ಶೇ 10 ರಷ್ಟು ಸರ್ ಚಾರ್ಜ ವಿಧಿಸಲಾಗಿದೆ. 

ಇನ್ನು ರೈತರಿಗೂ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ನೀಡಿದ್ದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 2 ಹೆಕ್ಟೇರ್‍ಗಿಂತ ಕಡಿಮೆ ಭೂಮಿಯುಳ್ಳ ರೈತರಿಗೆ 6 ಸಾವಿರ ನಗದು ನೇರವಾಗಿ ರೈತರ ಖಾತೆಗೆ ವರ್ಗಾವಣೆಯಾಗಲಿದೆ.  ಡಿಸೆಂಬರ್ 2018 ರಿಂದ ಪೂರ್ವಾನ್ವಯವಾಗುವಂತೆ ಈ ಯೋಜನೆ ಜಾರಿಗೆ ಬರಲಿದೆ. 
ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂಪಾಯಿ ಹಣ ರೈತರ ಖಾತೆಗೆ ಜಮೆ ಆಗಲಿದೆ. ಇದರಿಂದ 12 ಕೋಟಿ ರೈತರಿಗೆ ಅನುಕೂಲವಾಗಲಿದೆ. ಈ ಯೋಜನೆಗೆ 75000 ಕೋಟಿ ಮೀಸಲಿಡಲಾಗುವುದು ಎಂದು ಗೋಯಲ್ ತಿಳಿಸಿದ್ದಾರೆ. ಇನ್ನು ಆರೋಗ್ಯ ಕ್ಷೇತ್ರದಲ್ಲಿ ಆಯುಷ್ಮಾನ ಭಾರತ ಯೋಜನೆ ಅಡಿ ಕಳೆದ ನಾಲ್ಕು ತಿಂಗಳಿನಲ್ಲಿ 10 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂಬುದನ್ನು ಪಿಯೂಶ್ ಉಲ್ಲೇಖಿಸಿದ್ದಾರೆ. 22 ನೇ ಏಮ್ಸ್ ಆಸ್ಪತ್ರೆ ಹರ್ಯಾಣಾದಲ್ಲಿ ಸ್ಥಾಪನೆಯಾಗಲಿದೆ ಎಂದು ಪಿಯೂಶ್ ಪ್ರಕಟಿಸಿದ್ದಾರೆ. 

ಪಶುಪಾಲನೆ ಮತ್ತು ಮೀನುಗಾರಿಕೆ ಶೇಕಡಾ 2 ರಷ್ಟು ಸಬ್ಸಿಡಿಯ ಬಡ್ಡಿದರವನ್ನು ಬಜೆಟ್‍ನಲ್ಲಿ ಪ್ರಕಟಿಸಲಾಗಿದೆ. ರಾಷ್ಟ್ರೀಯ ಗೋಕುಲ ಯೋಜನೆಯಡಿ, ಪ್ರಸಕ್ತ ವರ್ಷದಿಂದಲೇಗೋಪಾಲನೆಗೆ 750 ಕೋಟಿ ಅನುದಾನ ವಿತರಿಸುವುದಾಗಿಯೂ ಬಜೆಟ್ ಘೋಷಿಸಿದೆ. ಇದಲ್ಲದೇ ಮೀನುಗಾರಿಕೆಗೆ ಪ್ರತ್ಯೇಕ ಇಲಾಕೆ ರಚನೆ ಸೇರಿದಂತೆ ಹಲವು ಜನಪರ ಹಾಗೂ ಮಧ್ಯಮವರ್ಗಕ್ಕೆ ನೆರವಾಗುವ ಯೋಜನೆಯನ್ನು ಬಜೆಟ್‍ನಲ್ಲಿ ಪ್ರಕಟಿಸಿದೆ. 
ಡಿಜಟಲೀಕರಣಕ್ಕೂ ಆದ್ಯತೆ ನೀಡುವುದಾಗಿ ಪ್ರಕಟಿಸಿರುವ ಪಿಯೂಶ್ ಗೊಯಲ್, ಮುಂದಿನ ಐದು ವರ್ಷಗಳಲ್ಲಿ 1 ಲಕ್ಷ ಡಿಜಿಟಲ್ ಹಳ್ಳಿಯ ನಿರ್ಮಾಣದ ಯೋಜನೆ ಪ್ರಕಟಿಸಿದ್ದಾರೆ. ಮೊಬೈಲ್ ಕಂಪನಿಗಳ ಸಂಖ್ಯೆಯಲ್ಲಿ ಏರಿಕೆಯಾಗಿರೋದನ್ನು ಪಿಯೂಶ್ ಪ್ರಸ್ತಾಪಿಸಿದ್ದು, ಈಶಾನ್ಯ ಭಾಗಕ್ಕೆ ಶೇಕಡಾ 21 ರಷ್ಟು ಅಂದರೇ, 58.166 ಕೋಟಿ ಅನುದಾನ ಮೀಸಲಿಡೋದಾಗಿ ಬಜೆಟ್‍ನಲ್ಲಿ ಘೋಷಿಸಲಾಗಿದೆ. 
ಭಾರತೀಯ ಸಿನಿಮಾ ನಿರ್ಮಾತೃಗಳಿಗೆ ಏಕ ಗವಾಕ್ಷಿ ಸಿನಿಮಾ ನಿರ್ಮಾಣ ಕ್ಲಿಯರೆನ್ಸ್, ಸಿನಿಮಟೋಗ್ರಫಿ ಕಾಯ್ದೆಗೆ ಅನಿಟ್ ಕ್ಯಾಮ್ ಕಾರ್ಡಿಂಗ್ ಸೌಲಭ್ಯವನ್ನು ಪರಿಚಯಿಸಲಾಗುತ್ತಿದೆ. ಒಟ್ಟಿನಲ್ಲಿ ಜನಪರ ಬಜೆಟ್ ಮಂಡನೆಯಾಗಿದ್ದು, ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಕ್ಷೇತ್ರಕ್ಕೂ ನ್ಯಾಯ ಒದಗಿಸುವ ಪ್ರಯತ್ನದಲ್ಲಿ  ಕೇಂದ್ರದ ಎನ್‍ಡಿಎ ಸರ್ಕಾರ ಬಹುತೇಕ ಯಶಸ್ವಿಯಾಗಿದೆ


ಸಂಬಂಧಿತ ಟ್ಯಾಗ್ಗಳು

#India #piyush goyal #2019 Budget #Peoples


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ