ನಿಖಿಲ್ ಕುಮಾರಸ್ವಾಮಿಗಾಗಿ ತೆಲುಗು ಚಿತ್ರವನ್ನು ರಿಮೇಕ್ ಮಾಡಿದ್ರಾ ಹರ್ಷ? 

 Telugu Movie Remake for Nikhil Kumaraswamy?

01-02-2019

ಜನಭರಿತ ಎರಡನೇ ವಾರ ಎಂಬ ಟೈಟಲ್‍ನೊಂದಿಗೆ ಅದ್ದೂರಿ ಪ್ರಚಾರ ಪಡೆದುಕೊಳ್ಳುತ್ತಿರುವ ಚಿತ್ರ ಸೀತಾರಾಮ ಕಲ್ಯಾಣ ರಿಮೇಕ್ ಚಿತ್ರ ಎಂಬ ಮಾತು ಕೇಳಿಬಂದಿದ್ದು, ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಗಾಗಿ ನಿರ್ದೇಶಕ ಹರ್ಷ ತೆಲುಗು ಚಿತ್ರವನ್ನು ಹೋಲುವ ಸಿನಿಮಾ ನಿರ್ಮಿಸಿದ್ರಾ ಅನ್ನೋ ಅನುಮಾನ ಚಿತ್ರರಂಗದಲ್ಲಿ ಸೃಷ್ಟಿಯಾಗಿದೆ. 

ಚಿತ್ರರಂಗದಲ್ಲಿ ಒಂದು ಒಳ್ಳೆಯ ಬ್ರೇಕ್‍ಗಾಗಿ ಕಾದಿದ್ದ ನಟ ನಿಖಿಲ್ ಕುಮಾರಸ್ವಾಮಿಯವರ ಸೀತಾರಾಮ ಕಲ್ಯಾಣ ಚಿತ್ರ ಸಾಕಷ್ಟು ನೀರಿಕ್ಷೆ ಮೂಡಿಸಿತ್ತು. ಇದು ಫ್ಯಾಮಿಲಿ ಎಂಟರಟೈನ್‍ಮೆಂಟ್ ಚಿತ್ರ ಎಂಬ ಬಿರದುದನ್ನು ಪಡೆದುಕೊಂಡ ಸೀತಾರಾಮ ಕಲ್ಯಾಣ ಚಿತ್ರದ ಶೂಟಿಂಗ್ ಆರಂಭವಾದಾಗಿನಿಂದಲೂ ಇದು ತೆಲುಗು ಚಿತ್ರದ ರಿಮೇಕ್ ಎಂಬ ಗುಸು-ಗುಸು ಕೇಳಿಬರುತ್ತಲೇ ಇತ್ತು. 

ಇದೀಗ ಕಳೆದ ವಾರ ತೆಲುಗಿನಲ್ಲಿ ಬಿಡುಗಡೆಯಾದ ರರಾಂಡೋಯ್ ವೇಡುಕ ಚೂದ್ದಂ ಸಿನಿಮಾದ ಬಹುತೇಕ ಚಿತ್ರಗಳಿಗೆ ಸೀತಾರಾಮ ಕಲ್ಯಾಣದ ದೃಶ್ಯಗಳು ಹೋಲಿಕೆಯಾಗುತ್ತಿದ್ದು, ರಿಮೇಕ್ ಮಾಡಿದ್ದಾರೆ ಎಂಬ ಅನುಮಾನ ದಟ್ಟವಾಗತೊಡಗಿದೆ. ಇನ್ನು ಸೀತಾರಾಮ ಕಲ್ಯಾನ ಸಕ್ಸಸ್ ಮೀಟ್‍ನಲ್ಲಿ ಈ ಬಗ್ಗೆ ನಿರ್ದೇಶಕ ಎ.ಹರ್ಷ ಅವರಿಗೆ ಪ್ರಶ್ನೆ ಕೇಳಲಾಗಿದ್ದು, ಹರ್ಷ ತಡವರಿಸುತ್ತಾ ಉತ್ತರ ನೀಡಿದ್ದಾರೆ. 

ನಾವು ಯಾವುದೇ ಚಿತ್ರದ ಸೀನ್ ಬೈ ಸೀನ್ ಕಾಪಿ ಮಾಡಿಲ್ಲ. ನಿರ್ಮಾಪಕ ಜಯಣ್ಣ ಸಿನಿಮಾದ ಹಂಚಿಕೆ ಮಾಡಿದ್ದಾರೆ. ಜೀ ಟಿವಿ ಹಿಂದಿ ರೈಟ್ ಮಾರಾಟವಾಗಿದೆ. ಅವರು ಸಿನಿಮಾ ನೋಡಿಯೇ ತೆಗೆದುಕೊಳ್ಳುವುದು ನಾವು ಅವರಿಗೆ ಮೋಸ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೇ, ನಾನು ಆ ಸಿನಿಮಾವನ್ನು ನೋಡಿಲ್ಲ. ಸಿನಿಮಾ ನೋಡುತ್ತೇನೆ. ನಮ್ಮ ಚಿತ್ರ ಹಾಗೆಯೇ ಇದ್ದರೆ ಖಂಡಿತ ಕ್ಷಮೆ ಕೇಳುತ್ತೇನೆ ಎಂದು ಹರ್ಷ ಹೇಳಿದ್ದಾರೆ. 

ಸಿನಿಮಾ ನೋಡಿದ ಪ್ರೇಕ್ಷಕರ ಪ್ರಕಾರ ಎರಡೂ ಚಿತ್ರಗಳಲ್ಲಿ ಸಾಕಷ್ಟು ಸಮಾನತೆ ಇದೆ ಎನ್ನಲಾಗಿದೆ. ಕೆಲ ದೃಶ್ಯಗಳು ಯಥಾವತ್ತಾಗಿ ಕೂಡ ಇದೆ ಎಂಬ ಮಾತು ಕೇಳಿಬಂದಿದೆ. ಹೀಗಾಗಿ ತೆಲುಗು ಚಿತ್ರ ರಿಮೇಕ್ ಮಾಡಿ ಅದಕ್ಕೆ ಸ್ವಂತಿಕೆಯ ಪೋಸ್ ಕೊಟ್ಟು ಚಿತ್ರತಂಡ ಕನ್ನಡಿಗರನ್ನು ಯಾಮಾರಿಸಿದ್ರಾ ಅನ್ನೋ ಪ್ರಶ್ನೆ ಸಿನಿಪ್ರಿಯರನ್ನು ಕಾಡಲಾರಂಭಿಸಿದೆ. 


ಸಂಬಂಧಿತ ಟ್ಯಾಗ್ಗಳು

#Seetharama Kalyana #Telugu #Nikhil Kumarswamy #Remake


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ