ಭೂಗತ ಪಾತಕಿ ರವಿ ಪೂಜಾರಿ ಬಂಧನ

 Underworld Gangster Ravi Poojary Arrested

01-02-2019

ಭೂಗತವಾಗಿದ್ದುಕೊಂಡೇ  ದೇಶದಲ್ಲಿ ಆತಂಕ ಸೃಷ್ಟಿಸಿದ್ದ ಪಾತಕಿ ರವಿ ಪೂಜಾರಿ ಬಂಧನವಾಗಿದೆ. ಐಡೆಂಟಿಟಿ ಬದಲಾಯಿಸಿಕೊಂಡು ಶ್ರೀಲಂಕಾದ ಪಾಸ್‍ಪೋರ್ಟ್‍ನಲ್ಲಿ ಟೋನಿ ಫರ್ನಾಂಡಿಸ್ ಹೆಸರಿನಲ್ಲಿ  ಆಫ್ರಿಕಾದಲ್ಲಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ಇಂಟರ್‍ಪೋಲ್ ಪೊಲೀಸರು  ಸೆನೆಗಲ್‍ನ ರಾಜಧಾನಿ ಡಕಾರ್‍ನಲ್ಲಿ ಗುರುವಾರ ವಶಕ್ಕೆ ಪಡೆದಿದ್ದಾರೆ. 

ವಿದೇಶದಲ್ಲಿದ್ದುಕೊಂಡೇ ಭಾರತದಲ್ಲಿ ಚಟುವಟಿಕೆ ವಿಸ್ತರಿಸಿದ್ದ ರವಿ ಪೂಜಾರಿ, ಕರ್ನಾಟಕ,ಕೇರಳ,ಮಹಾರಾಷ್ಟ್ರದ ಉದ್ಯಮಿಗಳು, ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಬೆದರಿಕೆ ಹಾಕಿ ಹಫ್ತಾ ವಸೂಲಿ ಮಾಡುತ್ತಿದ್ದ.  ಈತನ ವಿರುದ್ಧ ದೇಶದ ಹಲವು ಭಾಗಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಈತನ ವಿರುದ್ಧ ಕೇಂದ್ರ ಸರ್ಕಾರ ರೆಡ್ ಕಾರ್ನರ್ ನೋಟಿಸ್ ಕೂಡ ಹೊರಡಿಸಿತ್ತು. 1992 ರಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಈತ ಬಳಿಕ ರೈಲಿನಿಂದ ಹಾರಿ ತಪ್ಪಿಸಿಕೊಂಡಿದ್ದ. 

ಉಡುಪಿ ಮೂಲದ ಮಲ್ಪೆ ಸಮೀಪದ ಕಡೆಕಾರ್‍ನಲ್ಲಿ ಮೂಲದ ರವಿ ಪೂಜಾರಿ, ಕಳೆದ 15 ವರ್ಷದಿಂಧ ಆಸ್ಟ್ರೇಲಿಯಾ, ದುಬೈ ಸೇರಿದಂತೆ ಹಲವು ದೇಶಗಳಲ್ಲಿ ತಲೆಮರೆಸಿಕೊಂಡು, ಅಲ್ಲಿಂದಲೇ ಬೆದರಿಕೆ ಕರೆಗಳನ್ನು ಮಾಡಿ ಹಫ್ತಾ ವಸೂಲಿ ಮಾಡಿಕೊಂಡು ಭಾರತದ ಪೊಲೀಸ್ ಮತ್ತು ಭದ್ರತಾ ವ್ಯವಸ್ಥೆಗೆ ಸವಾಲಾಗಿದ್ದ. 

ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಶಾರೂಕ್ ಖಾನ್,ಕರ್ನಾಟಕದ ಹಲವು ಉದ್ಯಮಿಗಳು, ರಾಜಕಾರಣಿಗಳಿಗೂ ಬೆದರಿಕೆ ಹಾಕಿದ್ದ. ಈತನ ವಿರುದ್ಧ 120 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರಿಂದ ಕೇಂದ್ರ ಸರ್ಕಾರ ಇವನನ್ನು ದೇಶಕ್ಕೆ ಕರೆತರುವ ಪ್ರಯತ್ನವನ್ನು ಮಾಡಿತ್ತು. ಇದೀಗ ಇಂಟರ್‍ಪೋಲ್‍ನವರು ಬಂಧಿಸಿದ್ದು, ಕೇಂದ್ರ ಸರ್ಕಾರ ಹಸ್ತಾಂತರಕ್ಕೆ ಮನವಿ ಮಾಡುವ ಸಾಧ್ಯತೆ ಇದೆ. 


ಸಂಬಂಧಿತ ಟ್ಯಾಗ್ಗಳು

#Ravi Poojari #Gangster #Underworld #Arrested


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ