ಕೊಲೆ ಆರೋಪಿಗಳ ಬಂಧನಕ್ಕೆ ಪೊಲೀಸ್ ತಂಡ ರಚನೆ

Formation of police team for arrest of murderers

31-01-2019

ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿ ಸುನೀಲ್ ಕುಮಾರ್ ನ   ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ಚೆನ್ನಪಟ್ಟಣ ಪೊಲೀಸರ ವಿಶೇಷ ತಂಡ ರಚಿಸಲಾಗಿದೆ.ಚನ್ನಪಟ್ಟಣದ ರಾಂಪುರದ ರೌಡಿ ಸುನೀಲ್‍ಕುಮಾರ್(26)ನನ್ನು ಗ್ರಾಮದ ಹೊರವಲಯದ ತೆಂಗಿನ ತೋಟದಲ್ಲಿ ಕಳೆದ ಮಂಗಳವಾರ ರಾತ್ರಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿರುವ ದುಷ್ಕರ್ಮಿಗಳ ಸುಳಿವು ಪತ್ತೆಯಾಗಿದ್ದು ಶೀಘ್ರದಲ್ಲಿಯೇ ಬಂಧಿಸುವುದಾಗಿ ರಾಮನಗರದ ಎಸ್‍ಪಿ ರಮೇಶ್ ಬನ್ನೋತ್ ತಿಳಿಸಿದ್ದಾರೆ.

ಕೊಲೆ,ಕೊಲೆಯತ್ನ,ಸುಲಿಗೆ,ಬೆದರಿಕೆ ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಚನ್ನಪಟ್ಟಣ ಗ್ರಾಮಾಂತರ ಪೆÇಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದ ಸುನೀಲ್‍ಕುಮಾರ್  ಗ್ರಾಮ ತೊರೆದು ಹಲವು ದಿನಗಳ ನಂತರ ಆಗಮಿಸಿ ಮಂಗಳವಾರ ರಾತ್ರಿ ಸುನೀಲ್ ಮನೆಯಲ್ಲಿದ್ದಾಗ ಬಂದ ದುಷ್ಕರ್ಮಿಗಳು ಪಾರ್ಟಿ ಮಾಡಲೆಂದು  ತೆಂಗಿನ ತೋಟಕ್ಕೆ  ಕರೆದುಕೊಂಡು ಹೋಗಿದ್ದಾರೆ.

ಪಾರ್ಟಿಯಲ್ಲಿ ಮದ್ಯಪಾನ ಮಾಡಿಸಿ  ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆಯ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಪರಾರಿಯಾಗಿದ್ದು ಮರುದಿನ. ಬೆಳಗ್ಗೆ ತೋಟದ ಮಾಲೀಕ ಮರಿಯಪ್ಪ ಜಮೀನಿಗೆ ಹೋದಾಗ ಕೊಲೆಯಾಗಿರುವುದು ಕಂಡು ಬಂದಿದೆ.ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಧಾವಿಸಿದ ಚನ್ನಪಟ್ಟಣ ಗ್ರಾಮಾಂತರ ಪೆÇಲೀಸ್ ಠಾಣೆಯ ಪೆÇಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆಗೆ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು.

ಕ್ಯಾಬ್ ಡ್ರೈವರ್ ಆಗಿದ್ದ ಸುನೀಲ್ ಮೈಸೂರಿನಲ್ಲಿ ಜ್ಯುವೆಲ್ಲರಿ ಅಂಗಡಿ ಮಾಲೀಕನ ಪತ್ನಿಯ ಪರಿಚಯ ಮಾಡಿಕೊಂಡು ಡ್ರೈವಿಂಗ್ ಹೇಳಿಕೊಡುವ ನೆಪದಲ್ಲಿ ಅನೈತಿಕ ಸಂಬಂಧ ಬೆಳೆಸಿದ್ದನು. ಗೃಹಿಣಿಯ ಮನೆಯವರಿಗೆ ವಿಷಯ ತಿಳಿದು ರಂಪಾಟವಾಗಿದ್ದರಿಂದ ಆಕೆಯು ಸುನೀಲ್ ಸಂಪರ್ಕ ಬಿಟ್ಟಿದ್ದಳು.

ಇದರಿಂದ ರೊಚ್ಚಿಗೆದ್ದಿದ್ದ ಸುನೀಲ್ ಆಕೆಯ ಮನೆಗೆ ನುಗ್ಗಿ  ಕೊಲೆ ಮಾಡಿ ಸೂಟ್‍ಕೇಸ್‍ನಲ್ಲಿ ಮೃತದೇಹವನ್ನು ತುಂಬಿಕೊಂಡು ಬಂದು ಚನ್ನಪಟ್ಟಣದ ಮೆಣಸಿಗನಹಳ್ಳಿ ಬಳಿಯ ಕಾಡಿನ ಜಾಡಿನಲ್ಲಿ ಸುಟ್ಟು ಜೈಲುಪಾಲಾಗಿದ್ದ ಕುಖ್ಯಾತಿ ಹೊಂದಿದ್ದಾನೆ.

ಈತನ ವಿರುದ್ಧ ಹಲವು ಪೆÇಲೀಸ್ ಠಾಣೆಗಳಲ್ಲಿ ಸಹ ಪ್ರಕರಣಗಳು ದಾಖಲಾಗಿವೆ. ಈ ಮಧ್ಯೆ ಧಾರಾವಾಹಿಗಳಲ್ಲಿ ನಟಿಸುವ ತನ್ನ ಅತ್ತೆ ಮಗಳಿಗೂ ಕೂಡ ಕೊಲೆ ಬೆದರಿಕೆ ಹಾಕಿದ್ದು ಹಲವರ ದ್ವೇಷವನ್ನು ಸಹ ಕಟ್ಟಿಕೊಂಡಿದ್ದನು. ಈ ಹಿನ್ನೆಲೆಯಲ್ಲಿಯೇ ಹತ್ಯೆ ನಡೆದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Chennapattana #Murder #Sunil #Police team


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ