ಮಾಲಿವುಡ್‍ಗೂ ಬಂದ್ಲು ಸನ್ನಿ ಲಿಯೋನ್ 

Sunny Leone Come To Mallywood

31-01-2019

ನೀಲಿ ಚಿತ್ರಗಳಿಂದಲೇ ಖ್ಯಾತಿ ಪಡೆದುಕೊಂಡ ಬಾಲಿವುಡ್ ನಟಿ ಸನ್ನಿ ಲಿಯೋನ್ ಇದೀಗ ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟಿದ್ದು, ಮಾಲಿವುಡ್‍ನ ದಿಗ್ಗಜ ನಟ ಮಮ್ಮೂಟಿಯೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಈಗಾಗಲೇ ಕಾಲಿವುಡ್‍ಗೂ ಕಾಲಿಟ್ಟಿರುವ  ಸನ್ನಿ ಲಿಯೋನ್ ಮಧುರರಾಜ ಸಿನಿಮಾ ಮೂಲಕ ಮಾಲಿವುಡ್‍ಗೂ ಎಂಟ್ರಿ ಕೊಟ್ಟಂತಾಗಿದೆ. 


ಮಧುರರಾಜ ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದ್ದು, 2010 ರಲ್ಲಿ ತೆರೆಗೆ ಬಂದಿದ್ದ ಮಮ್ಮೂಟ್ಟಿ ನಟನೆಯ ಸೂಪರ್ ಹಿಟ್ ಚಿತ್ರ ಪೋಕಿರಿ ರಾಜದ ಮುಂದುವರಿದ ಭಾಗವಾಗಿ ಈ ಚಿತ್ರ ಮೂಡಿಬರುತ್ತಿದೆ. ಈಗಾಗಲೆ ಕೊಚ್ಚಿಗೆ ಆಗಮಿಸಿರುವ ಸನ್ನಿ ಲಿಯೋನ್ ಚಿತ್ರೀಕರಣದಲ್ಲ ಬ್ಯುಸಿಯಾಗಿದ್ದಾರೆ.  ಅವರನ್ನು ಚಿತ್ರೀಕರಣಕ್ಕೆ ಸ್ವಾಗತಿಸಲು ನಿರ್ಮಾಪಕ ನೆಲ್ಸನ್ ಖುದ್ದಾಗಿ ವಿಮಾನ ನಿಲ್ದಾಣಕ್ಕೆ ತೆರಳಿದ್ದು, ಚಿತ್ರತಂಡ ಬರಮಾಡಿಕೊಂಡ ರೀತಿಗೆ ಸನ್ನಿ ಲಿಯೋನ್ ಫುಲ್ ಖುಷಿಯಾಗಿದ್ದಾರೆ. 


ಇತ್ತೀಚಿಗೆ ಸನ್ನಿ ಲಿಯೋನ್ ದಕ್ಷಿಣ ಭಾರತದ ಚಿತ್ರರಂಗದತ್ತ ಚಿತ್ತ ಹರಿಸಿದ್ದು, ತಮಿಳಿನ ವೀರಮಹಾದೇವಿ ಚಿತ್ರದಲ್ಲಿ ಪೌರಾಣಿಕ ಪಾತ್ರದಲ್ಲೂ ಕೂಡ ಸನ್ನಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಕನ್ನಡ, ಮಲಯಾಳಂ,ತೆಲುಗು ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ತೆರೆ ಕಾಣಲಿದೆ. ಇದೀಗ ಮಲಯಾಳಂನಲ್ಲೂ ಸನ್ನಿ ನಟಿಸುತ್ತಿದ್ದಾರೆ. ಆ ಮೂಲಕ ಸನ್ನಿ ಲಿಯೋನ್ ನೀಲಿತಾರೆ ಇಮೇಜ್‍ನಿಂದ ಹೊರಬಂದಿದ್ದು, ಎಲ್ಲ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸಿನಿ ರಸಿಕರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ. 
 


ಸಂಬಂಧಿತ ಟ್ಯಾಗ್ಗಳು

#Sunny Leone #Mammutti # Mallywood #Madhur Raj


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ