ಸಮ್ಮಿಶ್ರ ಸರ್ಕಾರ ಉಳಿಸುವ ಹೊಣೆ ಸಿದ್ಧು ಹೆಗಲಿಗೆ 

 The coalition government  saving  responsiblty to Siddaramayya

31-01-2019

ರಾಜ್ಯದಲ್ಲಿ ಕುಮಾರಸ್ವಾಮಿ ಮತ್ತು ಸಮ್ಮಿಶ್ರ ಸರ್ಕಾರದ ನಡುವೆ ಉಂಟಾಗಿರುವ ಅಸಮಧಾನವನ್ನು ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿ ಕಣಕ್ಕಿಳಿದಿದ್ದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಏಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಖತ್ ಶಾಕ್ ನೀಡಿದ್ದಾರೆ. ನಿನ್ನೆ ದೆಹಲಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಸಿದ್ಧರಾಮಯ್ಯನವರಿಗೆ ರಾಹುಲ್ ಗಾಂಧಿ ಯಾವುದೇ ಕಾರಣಕ್ಕೆ ಸಮ್ಮಿಶ್ರಸರ್ಕಾರ ಉರುಳದಂತೆ ನೋಡಿಕೊಳ್ಳುವ ಜವಾಬ್ದಾರಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 
ಸಿದ್ಧರಾಮಯ್ಯನವರು ರಾಜ್ಯದ ಚುನಾವಣಾ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜೊತೆ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದರು. ಈ ವೇಳೆ ರಾಜ್ಯದ ರಾಜಕೀಯ ಚಿತ್ರಣದ ವಿವರಣೆ ಪಡೆದ ರಾಹುಲ್ ಗಾಂಧಿ, ಬಳಿಕ ದೋಸ್ತಿ ಸರ್ಕಾರದಲ್ಲಿ ಯಾವುದೇ ಗೊಂದಲಗಳು ಉಂಟಾಗಬಾರದು. ಮೈತ್ರಿ ಸರ್ಕಾರ ಪತನಗೊಳ್ಳಬಾರದು ಎಂದು ಸಿದ್ಧರಾಮಯ್ಯನವರಿಗೆ ತಾಕೀತು ಮಾಡಿದ್ದು, ಇದರ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ. 


ಲೋಕಸಭೆ ಚುನಾವಣೆ ಸಮೀಪಿಸುತ್ತಿರೋದರಿಂದ ಜೆಡಿಎಸ್ ಮೈತ್ರಿ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳನ್ನು ಪಡೆದುಕೊಳ್ಳಲು ಯತ್ನಿಸುತ್ತಿರೋದು ಎಲ್ಲರಿಗೂ ತಿಳಿದ ವಿಚಾರ. ಆದರೂ ಕುಮಾರಸ್ವಾಮಿಯವರ ಅಸಮಧಾನವನ್ನು ಗಂಭೀರವಾಗಿ ಪರಿಗಣಿಸಿರುವ  ರಾಹುಲ್ ಗಾಂಧಿ,  ಮೈತ್ರಿ ಸರ್ಕಾರಕ್ಕೆ ಏನು ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹಿರಿಯರಾದ ಸಿದ್ಧರಾಮಯ್ಯನವರಿಗೆ ವಹಿಸಿದ್ದಾರೆ. 

ಜೆಡಿಎಸ್ ಕಾಂಗ್ರೆಸ್‍ನ್ನು ಬೆದರಿಸಿ ಕನಿಷ್ಠ 12 ಎಂಪಿ ಸೀಟುಗಳನ್ನು ಪಡೆದುಕೊಳ್ಳುವ ಸಿದ್ಧತೆಯಲ್ಲಿದೆ. ಫೆಬ್ರವರಿ ಮೊದಲ ವಾರದಲ್ಲಿ ಈ ಕುರಿತು ಜೆಡಿಎಸ್-ಕಾಂಗ್ರೆಸ್ ವರಿಷ್ಠರ ನಡುವೆ ಸಭೆ ನಡೆಯಲಿದ್ದು, ಕಾಂಗ್ರೆಸ್ ಜೆಡಿಎಸ್‍ಗೆ 5-6 ಸೀಟು ಬಿಟ್ಟು ಕೊಡುವ ಸಾಧ್ಯತೆ ಇದೆ. ಇದು ಮತ್ತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಬಿಕ್ಕಟ್ಟು ಹೆಚ್ಚಿಸಲಿದೆ. ಸಿದ್ಧರಾಮಯ್ಯನವರ ಆಪ್ತರ ವರ್ತನೆಯಿಂದಲೇ ಸಿಎಂ ಕುಮಾರಸ್ವಾಮಿ ಹೆಚ್ಚಿನ ತಲೆನೋವು ಅನುಭವಿಸುತ್ತಿದ್ದು, ಇದನ್ನು ಖುದ್ದು ಬಗೆಹರಿಸಬೇಕಾಗಿರುವ ಸಿದ್ಧರಾಮಯ್ಯ ಯಾರ ಪರ ನಿಲ್ಲುತ್ತಾರೆ ಅನ್ನೋದು ಸಧ್ಯದ ಕುತೂಹಲ. 

ಇನ್ನು ರಾಹುಲ್ ಗಾಂಧಿಗೆ ರಾಜ್ಯದಲ್ಲಿ ಸಿಎಂ ವಿರುದ್ಧ ಎಮ್‍ಎಲ್‍ಎಗಳು ತಿರುಗಿ ಬೀಳಲು ಪ್ರಮುಖ ಕಾರಣ ಏನು ಎಂಬ ವಿಚಾರವನ್ನು ಸಿದ್ಧರಾಮಯ್ಯ ವಿವರಿಸಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಎಮ್‍ಎಲ್‍ಎಗಳನ್ನು ನಿರ್ಲಕ್ಷ್ಯಿಸಲಾಗುತ್ತಿರೋದರಿಂದ ಅವರು ರೊಚ್ಚಿಗೇಳುತ್ತಿದ್ದಾರೆ ಎಂಬ ಅಂಶವನ್ನು ರಾಹುಲ್ ಗಮನಕ್ಕೆ ತಂದಿದ್ದು, ಆದರೂ ಸರ್ಕಾರ ಉಳಿಯಲೇ ಬೇಕೆಂದು ಪಟ್ಟು ಹಿಡಿದಿರುವ ರಾಹುಲ್ ಗಾಂಧಿ ಈ ಹೊಣೆಯನ್ನು ಸಿದ್ಧರಾಮಯ್ಯನವರ ಮಡಿಲಿಗೆ ಹಾಕಿರೋದರಿಂದ ಮಾಜಿ ಸಿಎಂ ಸಿದ್ಧು ಮನಸ್ಸಿಲ್ಲದ ಮನಸ್ಸಿನಿಂದ ಕುಮಾರಸ್ವಾಮಿ ಪರ ಬ್ಯಾಟಿಂಗ ಆರಂಭಿಸುವ ನೀರಿಕ್ಷೆ ಇದೆ. 


ಸಂಬಂಧಿತ ಟ್ಯಾಗ್ಗಳು

#Karnataka # Responsiblty #Coalition government #Siddaramayya


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ