ಮಾಮಿ ಅಧ್ಯಕ್ಷೆಯಾಗಿ ದೀಪಿಕಾ 

 Deepika as Mami president

31-01-2019

 ಕೆಲದಿನಗಳ ಹಿಂದೆಯಷ್ಟೇ ಹನಿಮೂನ್ ಮುಗಿಸಿ ಬಂದಿರುವ ಬಾಲಿವುಡ್‍ನ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆಗೆ ಹೊಸ ಜವಾಬ್ದಾರಿಯೊಂದು ಹೆಗಲೇರಿದೆ. ಹೌದು ಸ್ಟಾರ್ ನಟಿ ದೀಪಿಕಾ ಪಡುಕೋಣೆ, ಮಾಮಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಮಾಮಿ ಮುಂಬಯಿ ಫಿಲ್ಮ್ ಫೆಸ್ಟಿವಲ್ ಆಗಿದ್ದು, ಇದರ ನೂತನ ಅಧ್ಯಕ್ಷೆಯಾಗಿ  ಆಯ್ಕೆಯಾಗಿದ್ದಾರೆ. 

ಇದುವರೆಗೂ ಕಿರಣರಾವ್ ಮಾಮಿ ಅಧ್ಯಕ್ಷೆಯಾಗಿದ್ದರು. ಇತ್ತೀಚಿಗೆ ನಡೆದ ಬೋರ್ಡ್ ಮೀಟಿಂಗ್‍ನಲ್ಲಿ ನೂತನ ಅಧ್ಯಕ್ಷೆಯಾಗಿ ದೀಪಿಕಾರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ವಿಶ್ವದಾದ್ಯಂತ ದೀಪಿಕಾ ಹೊಂದಿರುವ ಅಭಿಮಾನಿ ಬಳಗ, ಮಾನಸಿಕ ಆರೋಗ್ಯದ ಕುರಿತು ದೀಪಿಕಾ ಮೂಡಿಸಿರುವ ಜಾಗೃತಿ, ಅಭಿಮಾನಿಗಳೊಂದಿಗೆ ದೀಪಿಕಾ ಹೊಂದಿರುವ ಉತ್ತಮ ಬಾಂಧವ್ಯ ಸೇರಿದಂತೆ ಅವರ ಹಲವು ಸಮಾಜಮುಖಿ ಕಾರ್ಯಗಳನ್ನು ಪರಿಗಣಿಸಿ ಈ ಆಯ್ಕೆ ಮಾಡಲಾಗಿದೆ. 

ಇನ್ನು ನೂತನ ಅಧ್ಯಕ್ಷೆಯಾಗಿರುವ ದೀಪಿಕಾ ಪಡುಕೋಣೆ  ನೇತೃತ್ವದಲ್ಲಿ  ನಡೆಯಲಿರುವ ಫಿಲ್ಮ್ ಫೆಸ್ಟಿವಲ್ ಹೊಸ ಹಾಗೂ ಯುವ ಸಮುದಾಯದ ಪ್ರೇಕ್ಷಕರನ್ನು ಫೆಸ್ಟಿವಲ್‍ನತ್ತ ಸೆಳೆಯುವಲ್ಲಿ ಯಶಸ್ವಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದೀಪಿಕಾ ಪಡುಕೋಣೆ, ಇದು ನನಗೆ ಸಿಕ್ಕಿದ ದೊಡ್ಡ ಗೌರವ ಮತ್ತು  ಜವಾಬ್ದಾರಿಯಾಗಿದೆ. ಮಾಮಿ ವಿಷನ್‍ಗಳ ಬಗ್ಗೆ ನನಗೆ ಗೌರವವಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ದೀಪಿಕಾ ಪಡುಕೋಣೆ ಮದುವೆಯ ಜೊತೆ-ಜೊತೆಗೆ ಸಾಕಷ್ಟು ಸಪ್ರೈಸ್ ಗಿಫ್ಟ್‍ಗಳು ಸಿಗ್ತಿರೋದಂತೂ ನಿಜ. 


ಸಂಬಂಧಿತ ಟ್ಯಾಗ್ಗಳು

#Deepika Padukone # President #Mami #Mumbai


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ