ಶ್ರದ್ಧಾ ಕಪೂರ್ ಬುರ್ಖಾ ಹಾಕ್ಕೊಂಡು ಹೋಗಿದ್ದು ಎಲ್ಲಿಗೆ?

 Shraddha Left Shooting  And Went With Nikhab

31-01-2019

ಸಿನಿಮಾ ನಟ-ನಟಿಯರು ಅಂದ ಮೇಲೆ ಅಭಿಮಾನಿಗಳಿಗೇನು ಕೊರತೆ ಇರಲ್ಲ. ಆದರೆ ಕೆಲವರು ಅಭಿಮಾನಿಗಳ ಬಗ್ಗೆ ಸ್ವಲ್ಪನೂ ತಲೆನೇ ಕೆಡಿಸಿಕೊಳ್ಳದೆ ಹಾಯಾಗಿರತಾರೆ. ಆದರೆ  ನಟಿ ಶೃದ್ಧಾ ಕಪೂರ್ ಹಾಗಲ್ಲ.  ಜೀವನ್ಮರಣದ ಹೋರಾಟದಲ್ಲಿದ್ದ ತಮ್ಮ 13 ವರ್ಷದ ಅಭಿಮಾನಿಗಾಗಿ ಶೃದ್ಧಾ ಕಪೂರ್  ಮುಂಬೈಗೆ ಧಾವಿಸಿ ಬಂದಿದ್ದು, ಅಭಿಮಾನಿಯ ಕೊನೆ ಆಸೆ ನೇರವೇರಿಸಿ ಮಾನವೀಯತೆ ಮೆರೆದಿದ್ದಾರೆ. 

ಕ್ಷಯ ರೋಗಕ್ಕೆ ತುತ್ತಾಗಿ ಮುಂಬಯಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಮಯ್ಯಾ ಎಂಬ 13 ವರ್ಷದ ಬಾಲಕಿ  ನನ್ನ ಪ್ರೀತಿಯ ನಟಿ ಶೃದ್ಧಾಕಪೂರ್ ಅವರನ್ನು ನೋಡಬೇಕು. ಇದು ನನ್ನ ಕೊನೆಯ ಆಸೆ ಎಂದು ಹೇಳಿಕೊಂಡಿದ್ದರು.  ಈ ಬಾಲಕಿಯ ಆಸೆಯನ್ನು ಈಡೇರಿಸಲು ಮುಂದಾದ ಆಕೆಯ ಪೋಷಕರು ಹಾಗೂ ವೈದ್ಯರು ಶ್ರದ್ಧಾ ಕಪೂರ್ ಅವರನ್ನು ಸಂಪರ್ಕಿಸಿ ಇರುವ ವಿಚಾರವನ್ನು ತಿಳಿಸಿದ್ದರು. 

ಈ ವಿಚಾರ ತಿಳಿದಾಗ ಸಾಹೋ ಚಿತ್ರಕ್ಕಾಗಿ ಪ್ರಭಾಸ್ ಜೊತೆ ಶೂಟಿಂಗ್‍ನಲ್ಲಿ ಇದ್ದ ಶ್ರದ್ಧಾಕಪೂರ್ ಶೂಟಿಂಗ್‍ನಿಂದ ಬ್ರೇಕ್ ತೆಗೆದುಕೊಂಡು ಆಸ್ಪತ್ರೆಗೆ ಬಂದಿದ್ದಾರೆ. ಆಸ್ಪತ್ರೆಯಲ್ಲಿನ ಇತರ ರೋಗಿಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಶ್ರದ್ಧಾ ಬುರ್ಖಾ ಧರಿಸಿಕೊಂಡು ಆಸ್ಪತ್ರೆಗೆ ಬಂದಿದ್ದಾರೆ. ಹೀಗಾಗಿ ಇತರ  ಅಭಿಮಾನಿಗಳು ಆಸ್ಪತ್ರೆಯ ಬಳಿ ಬಂದು ಜನಸಂದಣಿ ಸೃಷ್ಟಿಯಾಗುವುದನ್ನು ತಪ್ಪಿಸಿದ್ದಾರೆ. 

ಸುಮಯ್ಯಾ ನೋಡಲು ಬರುವಾಗ ಶ್ರದ್ಧಾ ಆಕೆಗೆ ಇಷ್ಟವಾದ ಚಾಕೋಲೇಟ್ ತಗೊಂಡು ಬಂದಿದ್ದು, ಆಕೆಯೊಂದಿಗೆ ಒಂದಷ್ಟು ಹೊತ್ತು ಕಳೆದಿದ್ದಾರೆ. ತನ್ನ ನೆಚ್ಚಿನ ನಟಿಯನ್ನು ಹತ್ತಿರದಿಂದ ನೋಡಿದ ಸುಮಯ್ಯಾ ಕೂಡ ಫುಲ್ ಖುಷಿಯಾಗಿದ್ದು, ಈಗ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ ಎಂದು ಸುಮಯ್ಯಾ ಪೋಷಕರು ಹಾಗೂ ವೈದ್ಯರು ತಿಳಿಸಿದ್ದಾರೆ. ಇನ್ನೊಂದೆ ಶೂಟಿಂಗ್‍ನಿಂದ ಅಭಿಮಾನಿಗಾಗಿ ಬಂದ ಶ್ರದ್ಧಾ ಮಾನವೀಯತೆಗೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಮೆಚ್ಚಗೆ ವ್ಯಕ್ತವಾಗಿದೆ. 


ಸಂಬಂಧಿತ ಟ್ಯಾಗ್ಗಳು

#Fan #Nikhab #Shardha Kapoor #Mumbai


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ