ನಿನ್ನೆ ಬಿಜೆಪಿ ನಾಯಕರನ್ನು ಭೇಟಿ ಮಾಡಿದ ಎಚ್.ಡಿ.ರೇವಣ್ಣ

 HD Ravanna Who Met BJP Leaders Yesterday

30-01-2019

ಒಂದೆಡೆ ಸಿಎಂ ಕುಮಾರಸ್ವಾಮಿ  ಮಾತು ಮಾತಿಗೂ ರಾಜೀನಾಮೆ ನೀಡೋದಾಗಿ ಬೆದರಿಸುತ್ತಿದ್ದರೇ ಇತ್ತ ಸಿಎಂ ಸಹೋದರ ಎಚ್.ಡಿ.ರೇವಣ್ಣ ಗುಪ್ತವಾಗಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಇದು ಈ ವಿಚಾರ ರಾಜ್ಯದ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ. 

ಮೂಲಗಳ ಪ್ರಕಾರ ನಿನ್ನೆ ರೇವಣ್ಣ ಗುಪ್ತವಾಗಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದು, ಒಂದು ಗಂಟೆಗಳ ಕಾಲ ಗೌಪ್ಯವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ಈ ಸಮಯದಲ್ಲಿ ಉಪಸ್ಥಿತರಿದ್ದರು ಅನ್ನೋದನ್ನು ಹೆಸರು ಹೇಳಲಿಚ್ಚಿಸಿದ ನಾಯಕರೊಬ್ಬರು ಸೂಪರ್ ಸುದ್ದಿಗೆ ಖಚಿತ ಪಡಿಸಿದ್ದಾರೆ. 

ಆದರೆ ಒಂದು ಗಂಟೆಗಳ ಮಾತುಕತೆಯಲ್ಲಿ ಯಾವೆಲ್ಲ ಅಂಶಗಳು ಚರ್ಚೆಗೆ ಬಂದಿದೆ ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ರೇವಣ್ಣ ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಆಡಳಿತ ನಡೆಸಲು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಹೇಳಿಕೊಂಡರು ಎನ್ನಲಾಗುತ್ತಿದೆ. ಅಲ್ಲದೆ ಲೋಕಸಭಾ ಚುನಾವಣೆಯನ್ನು ಎದುರಿಸುವ ವಿಚಾರದ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದ್ದು, ಸಾಕಷ್ಟು ಪ್ರಶ್ನೆಗಳನ್ನ ಹುಟ್ಟುಹಾಕಿದೆ. 

ಲೋಕಸಭಾ ಚುನಾವಣೆಯೊಳಗೆ ರಾಜ್ಯದಲ್ಲಿ ಸರ್ಕಾರ ಬದಲಾಗಲಿದೆ ಎಂದು ಬಿ.ಎಸ್.ಯಡಿಯೂರಪ್ಪ ಸಾಕಷ್ಟು ಬಾರಿ ಹೇಳಿದ್ದಾರೆ. ಅಲ್ಲದೆ ಕಾಂಗ್ರೆಸ್ ನ ಅತೃಪ್ತ ನಾಯಕರು ಬಿಜೆಪಿಯ ಸಂಪರ್ಕದಲ್ಲಿ ಇದ್ದಾರೆ ಎಂದೂ ಹೇಳಲಾಗುತ್ತಿದೆ. ಹೀಗಿರುವಾಗಲೇ ನಡೆದ ರೇವಣ್ಣ ಹಾಗೂ ಜೆಡಿಎಸ್ ನಾಯಕರ ಭೇಟಿ ರಾಜಕೀಯದ ಹೊಸ  ಸಾಧ್ಯತೆಗಳ ಕುರಿತು ಚರ್ಚೆಯೊಂದನ್ನು ಹುಟ್ಟು ಹಾಕಿದ್ದು, ಜೆಡಿಎಸ್ ಕೈಯಿಂದ ಹೊರಬಂದು ಕಮಲದೊಂದಿಗೆ ದೋಸ್ತಿ ಬೆಳೆಸಲಿದ್ಯಾ ಅನ್ನೋ ಪ್ರಶ್ನೆಯೂ ಸೃಷ್ಟಿಯಾಗಿದೆ. 


ಸಂಬಂಧಿತ ಟ್ಯಾಗ್ಗಳು

#Jds # Met # HD Ravanna #BJP Leaders


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ