ಪಾಕಿಸ್ತಾನದ ನ್ಯಾಯಾಲಯಕ್ಕೆ ಹಿಂದು ನ್ಯಾಯಾಧೀಶೆ 

 Hindu Judge for Pakistani court

29-01-2019

ಪಾಕಿಸ್ತಾನದ ಸಿವಿಲ್ ನ್ಯಾಯಾಧೀಶೆಯಾಗಿ ಹಿಂದೂ ಮಹಿಳಾ ಜಡ್ಜ್ ವೊಬ್ಬರು ಆಯ್ಕೆಯಾಗಿದ್ದಾರೆ. ಭಾರತ ಮೂಲದ ಸುಮನ್ ಕುಮಾರಿ ನ್ಯಾಯಾಧೀಶೆಯಾಗಿ ಆಯ್ಕೆಯಾದ ಮಹಿಳೆ. ಆ ಮೂಲಕ ಸುಮನ್ ಕುಮಾರಿ ಈ ಸ್ಥಾನಕ್ಕೆ ನೇಮಕವಾದ ಪ್ರಥಮ ಹಿಂದೂ ಮಹಿಳೆ ಖ್ಯಾತಿಗೆ ಪಾತ್ರರಾಗಿದ್ದಾರೆ. 

ಸಿಂಧ್ ಪ್ರಾಂತ್ಯದ ಕ್ವಾಬಾರ್ ಶಾದಾಬ್ಕೊಟ್ ಪ್ರದೇಶದ ನಿವಾಸಿ ವೈದ್ಯರಾದ ಪವನ್ ಕುಮಾರ್ ಬೋಧನ್  ಪುತ್ರಿ ಹೀಗೆ ನ್ಯಾಯಾಧೀಶೆಯಾಗಿ  ಆಯ್ಕೆಯಾದ ಪ್ರತಿಭಾವಂತೆ. ಈಕೆ ನ್ಯಾಯಾಂಗ ಅಧಿಕಾರಿಗಳ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದರು. 
ಹೈದ್ರಾಬಾದ್‍ನಲ್ಲಿ  ಎಲ್‍ಎಲ್‍ಬಿ ಪದವಿ ಪಡೆದಿದ್ದ  ಸುಮನ್, ಕರಾಚಿಯ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಇನ್ನು ಸುಮನ್ ಕುಮಾರಿ ಸಾಧನೆಗೆ ಆಕೆಯ ಕುಟುಂಬ ವರ್ಗ ಸಂಭ್ರಮ ವ್ಯಕ್ತಪಡಿಸಿದೆ.  ಸುಮನ್ ಕುಮಾರಿ ಅಕ್ಕ ಸಾಫ್ಟವೇರ್ ಇಂಜಿನಿಯರ್ ಆಗಿದ್ದು, ಮತ್ತೊಬ್ಬ ಸಹೋದರಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದಾರೆ. 

ಪಾಕಿಸ್ತಾನದಲ್ಲಿ ಶೇಕಡಾ 1.85 ರಷ್ಟು ಹಿಂದುಗಳಿದ್ದಾರೆ.  ಇವರಲ್ಲಿಯೇ ಹಲವು ಮಾದರಿ ಸಾಧನೆ ಮಾಡಿದ್ದಾರೆ. 2006 ರಲ್ಲಿ  ರತ್ನ ಭಗವಾನ್ ದಾಸ್ ಚಾವ್ಲಾ ಅವರು ಸೆನೆಟ್ ಸೇರಿದ ಮೊದಲ ಪಾಕಿಸ್ತಾನದ ಹಿಂದೂ ಮಹಿಳೆಯಾಗಿದ್ದರು. ಇದೀಗ ಈ ರೀತಿಯ ಸಾಧನೆಗಳು ಹೆಚ್ಚುತ್ತಿದ್ದು, ಅಲ್ಲಿನ ಹಿಂದುಗಳು ಸಾಕಷ್ಟು ಅವಕಾಶ ಪಡೆದುಕೊಳ್ಳುತ್ತಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Hindu #Pakistani court #Judge #Suman Kumari


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ