ಇನ್ನೂ ಕೈಗೆ ಸಿಗದ ಶಾಸಕ ಗಣೇಶ್

Mla  Ganesh is yet to get a Police Hand

29-01-2019

ಶಾಸಕ ಆನಂದ್ ಸಿಂಗ್ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಕಂಪ್ಲಿ ಶಾಸಕ ಗಣೇಶ್ ಬಂಧನಕ್ಕೆ ಮುಂಬೈ, ಪುಣೆ, ಗೋವಾಕ್ಕೆ ತೆರಳಿದ್ದ ಪೊಲೀಸ್  ತಂಡಗಳು ಬರಿಗೈಯಲ್ಲಿ ಹಿಂದಿರುಗಿವೆ.

ಹಲ್ಲೆ ಸಂಬಂಧ ಆನಂದ್‍ಸಿಂಗ್ ಹೇಳಿಕೆ ಪಡೆದುಕೊಂಡಿದ್ದ ರಾಮನಗರ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿ, ಆರೋಪಿ ಶಾಸಕ ಗಣೇಶ್ ಶೋಧಕ್ಕಾಗಿ 4 ತಂಡಗಳನ್ನು ರಚಿಸಿ ಮುಂಬೈ, ಪುಣೆ, ಗೋವಾ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಕಳುಹಿಸಲಾಗಿತ್ತು ಪೆÇಲೀಸರು ಶೋಧ ನಡೆಸುತ್ತಿರುವುದು ಗೊತ್ತಾಗಿ ಶಾಸಕ ಗಣೇಶ್ ನಿರಂತರ ಜಾಗ ಬದಲಿಸುತ್ತಿರುವುದರಿಂದ ಪೆÇಲೀಸರು ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ.

ಈ ನಡುವೆ ಹಲ್ಲೆಗೊಳಗಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ  ಶಾಸಕ ಆನಂದ್ ಸಿಂಗ್ ಗುಣಮುಖರಾಗುತ್ತಿದ್ದು ಕಣ್ಣಿನ ಭಾಗದ ಊತ ಕಡಿಮೆಯಾಗಿದೆ ತಮ್ಮ ಮೇಲೆ ಹಲ್ಲೆ ನಡೆಸಿರುವ ಗಣೇಶ್ ಬಂಧನದವರೆಗೆ ಶಾಸಕ ಆನಂದ್ ಸಿಂಗ್ ಆಸ್ಪತ್ರೆಯಿಂದ ಬಿಡುಗಡೆಯಾಗದಿರಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಆನಂದ್‍ಸಿಂಗ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿ.ಎನ್ ಗಣೇಶ್ ಮೊದಲ ಆರೋಪಿಯಾಗಿದ್ದು, ಭಾರತೀಯ ದಂಡ ಸಂಹಿತೆ ಸೆಕ್ಷನ್ 323, 324, 307, 504 ಹಾಗೂ 506ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪ್ರಕರಣದಲ್ಲಿ ಕೊಲೆಯತ್ನ ಎಂದು ಉಲ್ಲೇಖಿಸಲಾಗಿದೆ.

ಪೆÇಲೀಸರು ಇತ್ತ ಶಾಸಕ ಗಣೇಶ್ ಪತ್ತೆಗೆ ಮುಂದಾಗಿರುವ ಹಿನ್ನೆಲೆ ಬಂಧನದ ಭೀತಿ ಎದುರಿಸುತ್ತಿರುವ ಗಣೇಶ್, ರಾಮನಗರ ಜಿಲ್ಲಾ ನ್ಯಾಯಾಲದಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ.ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ ಗಣೇಶ್ ಅವರನ್ನು ಕಾಂಗ್ರೆಸ್ ಪಕ್ಷ ಅಮಾನತ್ತು ಮಾಡಲಾಗಿದ್ದು, ತನಿಖೆಗಾಗಿ ಕೆಪಿಸಿಸಿಯಿಂದ ವಿಚಾರಣಾ ಸಮಿತಿ ಕೂಡ ರಚಿಸಲಾಗಿದೆ


ಸಂಬಂಧಿತ ಟ್ಯಾಗ್ಗಳು

#Mla Ganesh #Police #Mla Anand Sing #Absconding


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ