ಬಿಬಿಎಂಪಿ ಆಯುಕ್ತರಿಗೆ ಕೊಲೆ ಬೆದರಿಕೆ ಪತ್ರ !

Kannada News

05-06-2017

ಬೆಂಗಳೂರು:- ವಸತಿ ಪ್ರದೇಶದಲ್ಲಿ ವಾಣಿಜ್ಯ ವಹಿವಾಟು ಸ್ಥಗಿತಕ್ಕೆ ನೋಟಿಸ್ ನೀಡುತ್ತಿರುವ ಬಿಬಿಎಂಪಿ ವಿಶೇಷ ಆಯುಕ್ತ ಸರ್ಫರಾಜ್ ಖಾನ್ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಪತ್ರ ಬಂದಿದೆ. ಸರ್ಫರಾಜ್ ಖಾನ್ ಹೆಸರಿಗೆ ಹಲಸೂರು ಬಿಜೆಪಿ ಘಟಕದ ಹೆಸರಿನಲ್ಲಿ ಅಂಚೆ ಮೂಲಕ ಬಂದಿರುವ ಪತ್ರದಲ್ಲಿ ವಸತಿ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಸ್ಥಗಿತಕ್ಕೆ ನೋಟಿಸ್ ನೀಡುವ ಕೆಲಸವನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ ನಿಮ್ಮ ಕೊಲೆ ಮಾಡುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಲಾಗಿದೆ. ಜೊತೆಗೆ ಪಾಕಿಸ್ತಾನಕ್ಕೆ ಕಳುಹಿಸುವ ಬೆದರಿಕೆಯನ್ನೂ ಒಡ್ಡಿದ್ದಾರೆ. ವಸತಿ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ನಿಲ್ಲಿಸುವಂತೆ ಬಿಬಿಎಂಪಿಯಿಂದ ನೋಟೀಸ್ ನೀಡಲು ನಿರ್ಧರಿಸಲಾಗಿತ್ತು. ಅದರಂತೆ ಪಾಲಿಕೆಯಿಂದ ನೋಟಿಸ್ ನೀಡುವ ಹೊಣೆಯನ್ನು ಸರ್ಫರಾಜ್ ಖಾನ್ ಹೊತ್ತಿದ್ದಾರೆ. ಈ ಹಿನ್ನಲೆಯಲ್ಲಿ ನೋಟೀಸ್ ನೀಡೋದನ್ನು ನಿಲ್ಲಿಸಬೇಕೆಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ. ಆದರೆ ಈ ಬೆದರಿಕೆಗೆ ಹೆದರುವುದಿಲ್ಲ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಸರ್ಫರಾಜ್ ಖಾನ್ ಸ್ಪಷ್ಟಪಡಿಸಿದ್ದಾರೆ. ನೋಟೀಸ್ ಜಾರಿ ಸ್ಥಗಿತಗೊಳಿಸುವಂತೆ ನನಗೆ ಬೆದರಿಕೆ ಪತ್ರ ಬಂದಿದೆ. ಹಲಸೂರು ಬಿಜೆಪಿ ಘಟಕದಿಂದ ಎನ್ನುವ ಹೆಸರಿದ್ದರೂ ಇದು ಬಿಜೆಪಿಯವರ ಕೆಲಸವಲ್ಲ. ಸ್ಥಳೀಯರೇ ಇದನ್ನು ಮಾಡಿರಬೇಕೆಂದು ಅನ್ನಿಸುತ್ತಿದೆ. ಏನೇ ಆದರೂ ನಾನು ನೋಟಿಸ್ ನೀಡುವ ಕೆಲಸವನ್ನು ಮುಂದುವರೆಸುತ್ತೇನೆ ಎಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ