ಸ್ಯಾಂಡಲವುಡ್‍ನಲ್ಲಿ ಇದು ಮಕ್ಕಳ ಯುಗ

This is a children

29-01-2019

ಸಾಮಾನ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಪರಭಾಷೆಯ ನಟ-ನಟಿಯರು ಪಾದಾರ್ಪಣೆ ಮಾಡೋದು ಮಾಮೂಲು. ಆದರೆ 2019 ಸ್ಯಾಂಡಲವುಡ್ ನೆಕ್ಸ್ಟ್ ಜನರೇಶನ್ ಗೆ ಸುವರ್ಣಯುಗವಾಗೋ ಮುನ್ಸೂಚನೆ ದೊರೆತಿದೆ. ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಒಂದಿಷ್ಟು ಖ್ಯಾತನಾಮರ ಮಕ್ಕಳು ಬಣ್ಣ ಹಚ್ಚಿ ತೆರೆಗೆ ಬರಲಿದ್ದು, ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಇತ್ತೀಚಿಗೆ ನಿಧನರಾದ ಮಂಡ್ಯದ ಗಂಡು, ಅಂಬರೀಶ್ ಪುತ್ರ ಅಭಿಷೇಕ ಗೌಡ ಪ್ರೇಮಕಥೆಯೊಂದರ ಮೂಲಕ ತೆರೆಗೆ ಬರುತ್ತಿದ್ದಾರೆ. ಫೆಬ್ರವರಿ 14 ರಂದು ಚಿತ್ರದ ಟೀಸರ್ ತೆರೆಗೆ ಬರಲಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಫಸ್ರ್ಟ ಲುಕ್ ಅಭಿಷೇಕ ಅವರ ನಟನಾ ಕೌಶಲ್ಯವನ್ನು ಬಿಂಬಿಸುವಂತಿದ್ದು, ಒಂದಿಷ್ಟು ಅಭಿಮಾನಿ ಬಳಗವನ್ನು ಕಟ್ಟಿಕೊಟ್ಟಿದೆ.

ಇನ್ನು ಡಾ.ರಾಜಕುಮಾರ್ ಕುಟುಂಬದ ಮೂರನೇ ತಲೆಮಾರಿನ ಮತ್ತೊಂದು ಕುಡಿ ಕೂಡ ಈ ವರ್ಷ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ನಟ ಹಾಗೂ ಡಾ.ರಾಜಕುಮಾರ್ ಅಳಿಯ ರಾಮ್‍ಕುಮಾರ್ ಪುತ್ರ  ಧಿರೇನ್ ಈ ವರ್ಷ ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ.  ರ್ಯಾಂಬೋ-2 ದಂತಹ ಚಿತ್ರಗಳನ್ನು ನೀಡಿದ ನಿರ್ದೇಶಕ ಅನಿಲ್ ಕುಮಾರ್ ಈ ಚಿತ್ರಕ್ಕೆ ಆಕ್ಷ್ಯನ್ ಕಟ್ ಹೇಳಲಿದ್ದಾರೆ. ದಾರಿ ತಪ್ಪಿದ ಮಗ ಶಿರ್ಷೀಕೆಯಡಿ ಈ ಚಿತ್ರ ಮೂಡಿಬರಲಿದೆ.

ಸ್ಯಾಂಡಲವುಡ್ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಕೂಡ ಬೆಳ್ಳೆತೆರೆಯಲ್ಲಿ ಕಾಣಿಸಿಕೊಳ್ಳಲಿದ್ದು, ಹಿರಿಯ ನಟ ರವಿಚಂದ್ರನ್ ಕೂಡ ಇವರಿಗೆ ಸಾಥ್ ನೀಡಲಿದ್ದಾರೆ. ಇದಲ್ಲದೆ ನಟ ರಾಘವೇಂದ್ರ ರಾಜಕುಮಾರ್ ಕಿರಿಯ ಪುತ್ರ ಯುವರಾಜ್ ಕುಮಾರ್ ಕೂಡ ಚಿತ್ರರಂಗಕ್ಕೆ ಬರಲು ಸಿದ್ಧತೆ ಮಾಡಿಕೊಂಡಿದ್ದು, ನಟನೆ-ಡ್ಯಾನ್ಸ್ ಸೇರಿದಂತೆ ಎಲ್ಲದರಲ್ಲೂ ಪರಿಣಿತಿ ಪಡೆದುಕೊಂಡಿದ್ದಾರಂತೆ.

ಇನ್ನು ರಾಮ್‍ಕುಮಾರ್ ಪುತ್ರಿ ಧನ್ಯ ಕೂಡ ಚಿತ್ರರಂಗಕ್ಕೆ ಬರಲು ಸನ್ನದ್ಧರಾಗಿದ್ದು, ಸೂಕ್ತ ಚಿತ್ರಕತೆಯ ಹುಡುಕಾಟದಲ್ಲಿ ಇದ್ದಾರಂತೆ. ಒಟ್ಟಿನಲ್ಲಿ ಈ ವರ್ಷ ಸ್ಯಾಂಡಲವುಡ್‍ನ ಖ್ಯಾತನಾಮಾಂಕಿತರ ಮಕ್ಕಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡೋದು ಬಹುತೇಕ ಖಚಿತವಾಗಿದ್ದು, ಇವರೆಲ್ಲ ಹೇಗೆ ನೋಡಿ ಮಾಡ್ತಾರೆ ಕಾದು ನೋಡಬೇಕಿದೆ.
 


ಸಂಬಂಧಿತ ಟ್ಯಾಗ್ಗಳು

#Children's age #Abishek #Sandalwood #Diren Ramkumar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ