ಬೆಂಗಳೂರು ಉತ್ತರದಲ್ಲಿ ನಡೆಯುತ್ತಾ ಗೌಡ್ರ ಫೈಟ್? 

Gowda

29-01-2019

ಲೋಕಸಭಾ ಚುನಾವಣೆಗೆ ರಾಜಕೀಯ ಲೆಕ್ಕಾಚಾರಗಳು ಆರಂಭವಾದ ಬೆನ್ನಲ್ಲೇ ಬೆಂಗಳೂರು ಉತ್ತರ ಕ್ಷೇತ್ರ ದೇಶದ ಗಮನ ಸೆಳೆಯೋ ಮುನ್ಸೂಚನೆ ದೊರೆತಿದೆ. ಹೌದು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಹಾಲಿ ಕೇಂದ್ರ ಸಚಿವರು ಹಾಗೂ ಮಾಜಿ ಪ್ರಧಾನಿಗಳ ನಡುವೆ ಭರ್ಜರಿ ಫೈಟ್ ನಡೆಯುವ ಸಾಧ್ಯತೆ ಇದೆ. ಮಾಜಿ ಪ್ರಧಾನಿ ದೇವೆಗೌಡರ ವಿರುದ್ಧ ಸ್ಪರ್ಧಿಸೋ ನಾನು ಸಿದ್ದ ಎಂದು ಕೇಂದ್ರ ಸಚಿವ ಸದಾನಂದಗೌಡರು ಒಪ್ಪಿಕೊಂಡಿದ್ದಾರೆ. 

ಹಲವಾರು ಕಾರಣಗಳಿಗಾಗಿ 2019 ರಲೋಕಸಭಾ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿದೆ. ಅದರಲ್ಲಿ ಮಾಜಿ ಪ್ರಧಾನಿ  ಎಚ್.ಡಿ.ದೇವೆಗೌಡರ್ ಚುನಾವಣೆ ಸ್ಪರ್ಧೆ ವಿಚಾರ ಕೂಡ ಒಂದು. ಯಾಕೆಂದ್ರೆ ರಾಜಕೀಯ ನಿವೃತ್ತಿ ಪಡೆಯೋ ಸಾಧ್ಯತೆ ಇದೆ ಎನ್ನುತ್ತಿದ್ದ ಗೌಡ್ರು ಇದೀಗ ಮತ್ತೊಮ್ಮೆ ಮೈಕೊಡವಿಕೊಂಡು ಚುನಾವಣೆಗೆ ಹೊರಟಿದ್ದಾರೆ. 
ಈ ಮಧ್ಯೆ ತಮ್ಮ ಮಾತೃ ಕ್ಷೇತ್ರವಾಗಿದ್ದ ಹಾಸನವನ್ನು ಪ್ರಜ್ವಲ್ ರೇವಣ್ಣನಿಗೆ ಬಿಟ್ಟು ದೇವೆಗೌಡರು  ಮಂಡ್ಯದಲ್ಲಿ ಸ್ಪರ್ಧಿಸುತ್ತಾರೆ ಎನ್ನಲಾಗಿದ್ದು. ಇದೀಗ ಈ ಕ್ಷೇತ್ರವನ್ನು ಇನ್ನೊಬ್ಬ ಮೊಮ್ಮಗ ನಿಖಿಲ್ ಕುಮಾರಸ್ವಾಮಿಗೆ ಬಿಟ್ಟುಕೊಡಲು ಮುಂಧಾಗಿರುವ ದೊಡ್ಡಗೌಡ್ರು ಕ್ಷೇತ್ರದ ಹುಡುಕಾಟದಲ್ಲಿದ್ದು, ಒಕ್ಕಲಿಗರೇ ನಿರ್ಣಾಯಕ ಮತಗಳಾಗಿರುವ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿಇದೆ. 

ಇದಕ್ಕೆ ಪೂರಕ ಎಂಬಂತೆ ಮೊನ್ನೆ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ದೇವೆಗೌಡರು ತಾವು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ಮುನ್ಸೂಚನೆ ನೀಡಿ ಕಾರ್ಯಕರ್ತರಿಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರಕ್ಕೆ ಕೇಂದ್ರ ಸಚಿವ ಸದಾನಂದಗೌಡರು ಖಡಕ್ ಆಗಿಯೇ ರಿಪ್ಲೈ ನೀಡಿದ್ದು, ದೇವೆಗೌಡರು ಆ ಕ್ಷೇತ್ರದಲ್ಲಿ ಸ್ಪರ್ಧಿಸಲಿ. ಅವರೊಂದಿಗೆ ಸೆಣಸಬೇಕು ಎಂಬುದು ನನ್ನ ಇಚ್ಛೆ ಕೂಡ ಎಂದಿದ್ದಾರೆ. 

ಹೀಗಾಗಿ ಬಹುತೇಕ ಕಾಂಗ್ರೆಸ್-ಜೆಡಿಎಸ್‍ನ ಮೈತ್ರಿ ಅಭ್ಯರ್ಥಿಯಾಗಿ ದೇವೆಗೌಡರು ಉತ್ತರದಿಂದ ಸ್ಪರ್ಧಿಸೋದು ಖಚಿತ. ಇದು ಬಿಜೆಪಿ ಮತ್ತು ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ನಡುವಿನ ನೇರ ಫೈಟ್ ಆಗಲಿದ್ದು, ಇಬ್ಬರೂ ಗೆಲುವಿಗೆ ತುಂಬಾ ಹೋರಾಡೋದು ಅನಿವಾರ್ಯವಾಗಲಿದೆ. 

ಇನ್ನೊಂದೆಡೆ ದೇವೆಗೌಡರು ಎದುರು ಶೋಭಾ ಕರಂದ್ಲಾಜೆಯವರನ್ನು ಕಣಕ್ಕಿಳಿಸಿ,ಚಿಕ್ಕಮಗಳೂರು ಕ್ಷೇತ್ರಕ್ಕೆ ಸದಾನಂದ ಗೌಡರನ್ನು ನಿಲ್ಲಿಸುತ್ತಾರೆ ಎಂಬ ಮಾತು ಕೂಡ ಕೇಳಿಬಂದಿದೆ. ಒಟ್ಟಿನಲ್ಲಿ ಲೋಕಸಭಾ ಚುನಾವಣೆ  ಹಲವು ವಿಚಾರಕ್ಕೆ ಕುತೂಹಲ ಪಡೆದುಕೊಳ್ತಿದ್ದು, ಎಲ್ಲೆಲ್ಲಿ ಯಾವ ಯಾವ ಖ್ಯಾತನಾಮರ ನಡುವೆ ಫೈಟ್ ನಡೆಯುತ್ತೆ ಅನ್ನೋದು ಕುತೂಹಲ ಮೂಡಿಸ್ತಿದೆ. 


ಸಂಬಂಧಿತ ಟ್ಯಾಗ್ಗಳು

#Loksabha #Sadanand Gowda #Gowda's Fight #H.D.Devegwoda


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ