ಸೆರಗು ಎಳೆದ್ರಾ ಸಿದ್ಧರಾಮಯ್ಯ? 

Siddaramayya Angry On A Lady

29-01-2019

ತಮ್ಮ ಮಗನ ಕ್ಷೇತ್ರದಲ್ಲಿ ಜನಪ್ರತಿನಿಧಿಗಳು ಸಂಪರ್ಕಕ್ಕೆ ಸಿಗದ್ದನ್ನು ಪ್ರಶ್ನಿಸಿದ ಮಹಿಳೆ ಮೇಲೆ ಸಿದ್ಧರಾಮಯ್ಯ ಕೋಪಾವೇಷ ಪ್ರದರ್ಶಿಸಿ ಸುದ್ದಿಯಾಗಿದ್ದಾರೆ.  ಮೈಸೂರಿನ ವರುಣಾ ಕ್ಷೇತ್ರದ ಕಾರ್ಯಕ್ರಮವೊಂದಕ್ಕೆ ಭಾಗಿಯಾಗಲು ಸಿದ್ಧರಾಮಯ್ಯ  ತೆರಳಿದ್ದರು. ಈ ವೇಳೆ ಮುಸ್ಲಿಂ ಮಹಿಳೆಯೊರ್ವಳ ಮೇಲೆ ಸಿದ್ಧರಾಮಯ್ಯ ಕೋಪತಾಪ ಪ್ರದರ್ಶಿಸಿದ್ದು, ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಗುರಿಯಾಗಿದ್ದು, ಸಿದ್ಧರಾಮಯ್ಯನವರನ್ನು ದುಶ್ಯಾಸನ ಎಂಬರ್ಥದಲ್ಲಿ ಬಿಂಬಿಸಲಾಗುತ್ತಿದೆ.

ಮೈಸೂರಿನ ಟಿ.ನರಸೀಪುರದ  ಗರ್ಗೇಶ್ವರ ಗ್ರಾಮದಲ್ಲಿ  ಕೆಪಿಟಿಸಿಎಲ್‍ನ ಪವರ್ ಎಕ್ಸಚೆಂಜ್ ಕಾಮಗಾರಿ ಶಂಕುಸ್ಥಾಪನೆ ವೇಳೆ ಘಟನೆ ನಡೆದಿದೆ. ಜನರ ಸಮಸ್ಯೆ ಆಲಿಸುತ್ತಿದ್ದ ಸಿದ್ಧರಾಮಯ್ಯ ಬಳಿ ಮಹಿಳೆಯೊರ್ವಳು ನಮ್ಮ ಸಮಸ್ಯೆ ಕೇಳೋಕೆ ಯಾರು ಇಲ್ಲ. ನಿಮ್ಮ ಮಗ ನಮ್ಮ ಊರಿಗೆ ಬರೋದಿಲ್ಲ ಎಂದರು. ರೋಷಾವೇಶದಿಂದ ಮಾತನಾಡಿದ ಆ ಮಹಿಳೆ ಸಿದ್ಧರಾಮಯ್ಯನವರ ಎದುರಿನ ಮೇಜು ಕುಟ್ಟಿದ್ದರು. 

 ಇದರಿಂದ ಸಿಟ್ಟಿಗೆದ್ದ ಸಿದ್ಧರಾಮಯ್ಯ, ಸಾಕು ಕುತ್ಕೋಳಮ್ಮ. ಏನು ನನ್ನ ಎದುರಿಗೆ ಮೇಜು ಕುಟ್ಟಿ ಮಾತಾಡ್ತಿಯಲ್ಲ. ನಾವೇನು ಅನ್ಯಾಯ ಮಾಡಿರೋದು ನಿನಗೆ ಎಂದು ಧಮ್ಕಿ ಹಾಕಿದ್ದಾರೆ. ಇನ್ನು ತಮ್ಮ ಎದುರುಗಡೆ ಕುಳಿತಿದ್ದ ಈ ಮಹಿಳೆಯ ಕೈಯಲ್ಲಿನ ಮೈಕ್ ಕಿತ್ತುಕೊಳ್ಳಲು ಹೋದ ಸಿದ್ಧರಾಮಯ್ಯ ಮೈಕ್ ಎಳೆಯುವ ವೇಳೆ ಆ ಮಹಿಳೆಯ ಸೆರಗು ಕೂಡ ಮೈಕ್ ಜೊತೆ ಬಂದಿದೆ. ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಸಿದ್ಧರಾಮಯ್ಯನವರು ಸಿಟ್ಟಿನಲ್ಲಿ ಆ ಮಹಿಳೆಯರು ಬೆದರಿಸುವ ಭರದಲ್ಲಿ ಸೆರಗಿಗೆ ಕೈ ಹಾಕಿದ್ರಾ ಅನ್ನೋ ಪ್ರಶ್ನೆ ಎದುರಾಗಿದೆ. 

ಸಿದ್ಧರಾಮಯ್ಯನವರ ಈ ವರ್ತನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಿದ್ಧರಾಮಯ್ಯನವರು ಕೋಪದಿಂದ ಆ ಮಹಿಳೆಯ ತಮ್ಮ ದರ್ಪ ಬಿಂಬಿಸುತ್ತಿರುವ ಈ ದೃಶ್ಯ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದ್ದು, ಜನರಿಂದಲೂ ಟೀಕೆಗೆ ಗುರಿಯಾಗಿದೆ. ಮಹಿಳಾ ಆಯೋಗ ಸೇರಿದಂತೆ ಹಲವೆಡೆ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಜನರು ಸಿದ್ಧರಾಮಯ್ಯ ವರ್ತನೆ ಸರಿಯಲ್ಲ ಎಂದು ಟೀಕಿಸುತ್ತಿದ್ದರೇ, ಕಾಂಗ್ರೆಸ್ ಇದು ಅಕಸ್ಮಾತಾಗಿ ನಡೆದ ಘಟನೆ ಎಂದು ಸಮಜಾಯಿಸಿ ನೀಡುವ ಪ್ರಯತ್ನ ಆರಂಭಿಸಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Siddaramayya #Miss Behave #Woman #Mysore


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ