ಬಿಗ್‍ಬಾಸ್ ಕತೆ ಜನರ ವ್ಯಥೆ

Bigboss Story

29-01-2019

ನೀರಿಕ್ಷಿತ ಪ್ರಮಾಣದಲ್ಲಿ ಕನ್ನಡಿಗರ ಮೆಚ್ಚುಗೆ ಗಳಿಸುವಲ್ಲಿ ವಿಫಲವಾಗಿದ್ದರೂ ತಕ್ಕಮಟ್ಟಿಗೆ ಜನರ ಮನಸೆಳೆದಿದ್ದ ಬಿಗ್‍ಬಾಸ್ ರಿಯಾಲಿಟಿ ಶೋಗೆ ತೆರೆ ಬಿದ್ದಿದೆ. ಬಿಗ್ ಬಾಸ್ 6 ನೇ ಸೀಸನ್ ವಿನ್ನರ್ ಆಗಿ ಆಧುನಿಕ ಕೃಷಿಕ ಶಶಿ ವಿಜೇತರಾಗಿದ್ದಾರೆ. ಆದರೆ ಈ ರಿಯಾಲಿಟಿ ಶೋ ಬಗ್ಗೆ ಜನರು ಸಾಕಷ್ಟು  ಅಸಮಧಾನಗಳನ್ನು ಹುಟ್ಟುಹಾಕಿದ್ದು, ನಿಜಕ್ಕೂ ಇದು ಜನರ ಓಟು ಆಧರಿಸಿ ನಡೆಯುವ ಕಾರ್ಯಕ್ರಮ ಹೌದಾ ಅಲ್ಲವಾ? ಅಥವಾ ಒಳಗಡೆ ಏನು ನಡೆಯುತ್ತೆ ಅನ್ನೋ ಪ್ರಶ್ನೆ ಕೂಡ ಕನ್ನಡಿಗರನ್ನು ಕಾಡ್ತಿದೆ. 

ಖಾಸಗಿ ವಾಹಿನಿ ನಡೆಸುವ ಬಿಗ್‍ಬಾಸ್ ರಿಯಾಲಿಟಿ ಶೋ ಕಳೆದ ಐದು ವರ್ಷಗಳಿಂದ  ಪ್ರತಿವರ್ಷವೂ ನಡೆಯುತ್ತ ಬಂದಿದ್ದು, ಈ ಬಾರಿಯೂ ನಡೆದಿತ್ತು. ಅಭಿನಯ ಚಕ್ರವರ್ತಿ ಸುದೀಪ್ ನಡೆಸುವ ಈ ಕಾರ್ಯಕ್ರಮ ಆರಂಭವಾದಾಗಲೆ  ಜನಸಾಮಾನ್ಯರು ಯಾರ- ಯಾರ ಫೈನಲ್‍ಗೆ ಹೋಗಬಹುದೆಂದು ನಿರ್ಧರಿಸಿದ್ದರು. 
ಆ್ಯಂಡಿ, ಶಶಿ,ನವೀನ,ರ್ಯಾಪಿಡ್ ರಶ್ಮಿ ಫೈನಲ್ ಅಭ್ಯರ್ಥಿಗಳಾಗಿ ಬರಬಹುದೆಂದು ಜನರು ಊಹಿಸಿದ್ದರು. ಜನರ ಊಹೆ ನಿಜವಾಗಿದ್ದು, ಅವರೆ ಫೈನಲ್ ಕಂಟೆಸ್ಟೆಂಟ್‍ಗಳಾಗಿ ಬಂದು ನಿಂತಿದ್ದರು. ಎಂಬಲ್ಲಿಗೆ ಬಿಗ್‍ಬಾಸ್ ಗೆ ವಿಚಿತ್ರವಾಗಿ ವರ್ತಿಸುವ, ಹುಚ್ಚರಂತೆ ಕಿರುಚಾಡುವ ವ್ಯಕ್ತಿಗಳೆ ಶೋಗೆ ಬೇಕು, ಅಂಥವರೆ ಅಲ್ಲಿ ಅಂತಿಮಹಂತದವರೆಗೂ ಇರಬಹುದು ಎಂಬ ಸಂಗತಿ ಬೆಳಕಿಗೆ ಬಂದಂತಾಗಿದೆ.

 ಪ್ರೇಕ್ಷಕರು ಕಳುಹಿಸಿದ ಲಕ್ಷಾಂತರ ಮೆಸೆಜ್ ನೋಡಿ ನಾವು ವಿನ್ನರ್‍ನ್ನು ಆಯ್ಕೆಮಾಡಿಕೊಳ್ಳುತ್ತೇವೆ ಎಂದು ಬಿಗ್‍ಬಾಸ್ ಹೇಳಿಕೊಂಡರೂ ಪಾರದರ್ಶಕವಾಗಿ ವಾಹಿನಿ ನಿರ್ಧಾರ ತೆಗೆದುಕೊಳ್ಳದೆ ಮೊದಲೆ ಸೆಲೆಕ್ಟ್ ಮಾಡಿದ ವ್ಯಕ್ತಿಗಳಿಗೆ ವಿನ್ನರ್ ಟ್ರೋಪಿ ನೀಡುತ್ತದೆ. ವಿಜಯ್ ರಾಘವೇಂದ್ರ ಒಬ್ಬರನ್ನು ಹೊರತುಪಡಿಸಿದರೇ ಇನ್ಯಾವ ಮಧ್ಯವಯಸ್ಸಿನ ವ್ಯಕ್ತಿಗೂ ಬಿಗ್‍ಬಾಸ್ ಟ್ರೋಫಿ ನೀಡಲಾಗಿಲ್ಲ. ಹೀಗಾಗಿ ವಾಹಿನಿ ಮೊದಲೆ ತಮ್ಮ ವಿನ್ನರ್ ನಿರ್ಧರಿಸಿ  ಕಾರ್ಯಕ್ರಮವನ್ನು ನಾಮಕಾವಸ್ಥೆ ನಡೆಸಿ ಅಭ್ಯರ್ಥಿಗಳನ್ನು ಗೆಲ್ಲಿಸಲಾತ್ತದೆ ಎಂಬ ಮಾತುಗಳು ಯಾವಾಗಲೂ ಕೇಳಿಬರುತ್ತಿದೆ. 

ಇದಲ್ಲದೆ ಲಕ್ಷಾಂತರ ಜನರು ಕೂತು ನೋಡುವ ಈ ಶೋದಲ್ಲಿ ಪ್ರೇಕ್ಷಕರಿಗೆ ಬೆಲೆಇಲ್ಲದಂತೆ ವರ್ತಿಸಲಾಗಿದ್ದು, ತಡರಾತ್ರಿಯವರೆಗೆ ಶೋವನ್ನು ಡ್ರ್ಯಾಗ್ ಮಾಡಿ,  ವಿನಾಕಾರಣ ಹರಟೆ ಹೊಡೆದುಕೊಂಡು ಕಾಲವಿಳಂಬ ಮಾಡಿ ಪ್ರೇಕ್ಷಕ ಗೃಹಿಣಿಯರ ಅಸಮಾಧಾನಕ್ಕೆ ಕಾರಣವಾಗಿದ್ದಾರೆ. ನಿನ್ನೆಯೂ ತಡರಾತ್ರಿ 11.44 ರವರೆಗೆ ಶೋ ನಡೆದ ಪರಿಣಾಮ ಬಿಗ್ ಬಾಸ್ ನೋಡುವ ಉತ್ಸಾಹದಿಂದ ಕೂತಿದ್ದ ಉದ್ಯೋಗಸ್ಥ ತಾಯಂದಿರಿಗೆ, ಪ್ರೇಕ್ಷಕರಿಗೆ, ಮಕ್ಕಳಿಗೆ ನಿದ್ದೆ ಬಿಟ್ಟು ಟಿವಿಶೋ ನೋಡುವ ಸ್ಥಿತಿ ಎದುರಾಗಿದ್ದು, ವಿನಾಕಾರಣ ಟಿಆರ್‍ಪಿಗಾಗಿ ಹೀಗೆಲ್ಲ ಅವತಾರ ಮಾಡುತ್ತಾರೆ ಎಂಬ ಆರೋಪವೂ ಕೇಳಿಬಂದಿದೆ. 
 


ಸಂಬಂಧಿತ ಟ್ಯಾಗ್ಗಳು

#Shashikumar #Bigg Boss 6 #Bigboss # Kannada


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ