ತೆರೆಗೆ ಬರಲಿದೆ ಸಲಿಂಗಿಗಳ ಲವ್ ಸ್ಟೋರಿ 

Gay love story to Screen

29-01-2019

ಬಾಲಿವುಡ್‍ಗೆ ಹಲವು ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಈ ಬಾರಿ ವಿಭಿನ್ನವಾಗಿ ಸಲಿಂಗ ಕಾಮದ ಕುರಿತ ಚಿತ್ರವೊಂದನ್ನು ನಿರ್ಮಿಸಲು ಮುಂಧಾಗಿದ್ದಾರೆ.  ಸಲಿಂಗ ದಂಪತಿಯ  ನಡುವಣ ಪ್ರೇಮದ ಕತೆಯನ್ನು ಈ ಸಿನಿಮಾ ಹೇಳಲಿದೆ. 
 ದವೋಸ್‍ನಲ್ಲಿ ಇತ್ತೀಚಿಗೆ ಜರುಗಿದ  ವಲ್ರ್ಡ್ ಇಕನಾಮಿಕ್ ಪೋರಂನಲ್ಲಿ ಮಾತನಾಡಿನ  ಕರಣ್,  ಇಂತಹದೊಂದು ವಿಭಿನ್ನ ಸಿನಿಮಾದ ಮೂಲಕ  ಬಾಲಿವುಡ್  ಸಿನಿಮಾ ಮೇಕಿಂಗ್‍ನ ಏಕತಾನತೆಯನ್ನು  ಮುರಿಯುವ ಇಚ್ಛೆಯನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. 
ಚಿತ್ರದ ಬಗ್ಗೆ ವಿವರಣೆ ನೀಡಿರುವ  ಕರಣ್, ಈ ಚಿತ್ರದಲ್ಲಿ ಇಬ್ಬರು ಪ್ರಮುಖ ನಾಯಕರು  ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಅವರು ಯಾರು ಎಂಬುದನ್ನು ನಾನು ಈಗ ಹೇಳಲು ಇಚ್ಛಿಸುವುದಿಲ್ಲ.  ಆದರೆ ನೈಜ ಪ್ರೀತಿಗೆ ಗೇ ರೋಮಾನ್ಸ್‍ನ ಚಿತ್ರವನ್ನು ಮಾಡಲಿದ್ದೇನೆ ಎಂಬ ಮಾಹಿತಿಯನ್ನು ಕರಣ ಹಂಚಿಕೊಂಡಿದ್ದಾರೆ. 
ಬಾಲಿವುಡ್‍ನಲ್ಲಿ  ಅಸಾಂಪ್ರದಾಯಿಕ  ವಸ್ತುವಾಗಿರುವ ಸಲಿಂಗ ಜೋಡಿಯ ನಡುವಣ ಪ್ರೀತಿಯನ್ನು ತೋರಿಸಲು ಹೊರಟಿರುವುದು ಹಲವರು ಹುಬ್ಬೇರಿಸುವಂತೆ ಮಾಡಿದ್ದು, ಚಿತ್ರ ಯಾವಾಗ ಮತ್ತು ಹೇಗೆ ಮೂಢಿಬರುತ್ತೆ ಅನ್ನೋದು ಸಧ್ಯದ ಕುತೂಹಲ. 


ಸಂಬಂಧಿತ ಟ್ಯಾಗ್ಗಳು

#Gay Love story #Bollywood #Movie #Karan Johar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ