ತಮ್ಮನನ್ನು ಹಿಂದಿಕ್ಕಲೂ ಬಂದ್ರಾ ಪ್ರಿಯಾಂಕಾ? 

Priyanka Came  to overtake Rahul Gandhi ?

25-01-2019

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ ರಾಜಕೀಯ ಪಕ್ಷಗಳಲ್ಲಿ ಹೊಸ-ಹೊಸ ಬೆಳವಣಿಗೆಗಳು ಗರಿಗೆದರುತ್ತಿವೆ. ಇಂತಹುದೇ ಒಂದು ಧೀಡಿರ ಬೆಳವಣಿಗೆಯಲ್ಲಿ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕ್ ವಾಧ್ರಾ( ಗಾಂಧಿ)ಯವರನ್ನು ನೇಮಿಸಲಾಗಿದ್ದು, ಉತ್ತರ ಪ್ರದೇಶದಂತಹ ಮಹತ್ವದ ರಾಜ್ಯವೊಂದರ ಹೊಣೆಗಾರಿಕೆ ವಹಿಸಲಾಗಿರೋದು ದೇಶದ ಜನರಿಗೆ ಮಾತ್ರವಲ್ಲ ಸ್ವತಃ ಕಾಂಗ್ರೆಸ್ಸಿಗರಿಗೆ ಅಚ್ಚರಿ ಮೂಡಿಸಿದೆ. 

ಮೂಲಗಳ ಮಾಹಿತಿ ಪ್ರಕಾರ ಪ್ರಿಯಾಂಕಾ ನೇಮಕದ ವಿಚಾರದಲ್ಲಿ ಕಾಂಗ್ರೆಸ್  ಹೈಕಮಾಂಡ ಗೌಪ್ಯತೆಯನ್ನು ಕಾಪಾಡಿಕೊಂಡಿತ್ತು. ಕಾಂಗ್ರೆಸ್ ಹಿರಿಯ ನಾಯಕರು ಹಾಗೂ ಉತ್ತರ ಪ್ರದೇಶದ  ಕಾಂಗ್ರೆಸ್ ಉಸ್ತುವಾರಿ ಹೊತ್ತಿದ್ದ  ಗುಲಾಂ ನಬಿ ಆಜಾದ್‍ರಿಗೂ ಕೂಡ  ಈ ಬೆಳವಣಿಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಈ ಧೀಡಿರ ನೇಮಕ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪ್ರಿಯಾಂಕಾ  ಸಕ್ರಿಯ ರಾಜಕಾರಣಕ್ಕೆ ಧುಮುಕಿರುವ ಕಾರಣವೇನು? ಇದರಿಂದ ಕಾಂಗ್ರೆಸ್‍ಗೆ ಆಗಬಹುದಾದ ಲಾಭ ನಷ್ಟವೇನು? ಪ್ರಿಯಾಂಕಾ ತಮ್ಮ ಪತಿಯ ವಿರುದ್ಧ ಕೇಳಿಬಂದಿರುವ ಆರೋಪಗಳಿಂದ ಅವರನ್ನು ರಕ್ಷಿಸಲು ರಾಜಕಾರಣವನ್ನು ಆಯ್ಕೆಮಾಡಿಕೊಂಡಿರಬಹುದಾ? ಎಂಬ ಪ್ರಶ್ನೆಗಳು ಕಾಡತೊಡಗಿದೆ. 

ರಾಜಕೀಯ ವಿಶ್ಲೇಷಕರ ಪ್ರಕಾರ ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣ ಪ್ರವೇಶದಿಂದ ಬಿಜೆಪಿ ಅಂತಹ  ನಷ್ಟವೇನು ಇಲ್ಲ ಎನ್ನಲಾಗುತ್ತಿದೆ. ಆದರೆ ಕಾಂಗ್ರೆಸ್‍ನಲ್ಲಿ ಹೀಗೆ ಧೀಡಿರ ಪ್ರಿಯಾಂಕಾ ವಾಧ್ರಾ ಗಾಂಧಿಯವರಿಗೆ ಉನ್ನತ ಹುದ್ದೆ ನೀಡಿರೋದು ಆಂತರಿಕವಾಗಿ  ಹಿರಿಯ ನಾಯಕರ ಅಸಮಧಾನಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಅಲ್ಲದೆ ಪ್ರಿಯಾಂಕಾ ಪತಿ ರಾಬರ್ಟ್ ವಾಧ್ರಾ ಮೇಲೆ ರೈತರ ಜಮೀನನ್ನು ಕಬಳಿಸಿದ್ದು ಸೇರಿದಂತೆ ಬೇರೆ ಬೇರೆ ಆರೋಪಗಳಿದ್ದು, ಇದು ಬಿಜೆಪಿಯ ಟೀಕೆಗೆ ಅಸ್ತ್ರ ಒದಗಿಸಿದಂತಾಗಲಿದೆ ಎಂಬ ಮಾತು ಕೇಳಿಬಂದಿದೆ. 

ಸ್ವತಃ ರಾಹುಲ್ ಗಾಂಧಿ ರಾಜಕೀಯ ಭವಿಷ್ಯದ ಮೇಲೆ ಪ್ರಿಯಾಂಕಾ ಆಗಮನ ಪರಿಣಾಮ ಬೀರಲಿದೆ ಎನ್ನುವ ಮಾತನ್ನು ತಳ್ಳಿಹಾಕುವಂತಿಲ್ಲ. ಯಾಕೆಂದರೆ ಈಗಾಗಲೆ ಕಾಂಗ್ರೆಸ್ ಹಲವು ಜವಾಬ್ದಾರಿಗಳನ್ನು ಪ್ರಿಯಾಂಕಾ ಹೆಗಲೇರಿಸಲು ಸಿದ್ಧತೆ ನಡೆಸಿದ್ದು, ಪ್ರಿಯಾಂಕಾ ಉತ್ತರ ಪ್ರದೇಶದ ಜವಾಬ್ದಾರಿಯಲ್ಲಿ ಜಾದೂ ಮಾಡುವಲ್ಲಿ ಯಶಸ್ವಿಯಾದರೆ ಸಹಜವಾಗಿಯೇ ರಾಹುಲ್ ಗಾಂಧಿಗೆ ಇರಿಸುಮುರಿಸಾಗುವ ಎಲ್ಲ ಸಾಧ್ಯತೆ ಇದೆ. ಇದರೊಂದಿಗೆ ರಾಹುಲ್ ಗಾಂಧಿಗಿಂತ ಬುದ್ಧಿಮತ್ತೆಯಲ್ಲಿ ಪ್ರಿಯಾಂಕಾ ಇನ್ನಷ್ಟು ಚುರುಕಾಗಿರೋದರಿಂದ ಕಾಂಗ್ರೆಸ್ ತಮಗಾಗುವ ಮುಜುಗರದಿಂದ ತಪ್ಪಿಸಿಕೊಳ್ಳಲು ಪ್ರಿಯಾಂಕಾ ಪಟ್ಟಾಭಿಷೇಕಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.  

ಆದರೆ ಪ್ರಿಯಾಂಕಾ ರಾಜಕೀಯಕ್ಕೆ ಬಂದಿರೋದರಿಂದ ಬಿಜೆಪಿ ಮೇಲೆ ಅಂತಹ ಗಂಭೀರ ಪರಿಣಾಮವಾಗಲಿದೆ ಅನ್ನೋದರಲ್ಲಿ ಅರ್ಥವಿಲ್ಲ. ಪ್ರಧಾನಿ ಮೋದಿ ಎದುರು ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೂ ಗೆಲುವು ನಮ್ಮದೆ ಅಂತಾರೆ ಬಿಜೆಪಿ ನಾಯಕರು. ಕಳೆದ ಬಾರಿ ಉತ್ತರ ಪ್ರದೇಶದಲ್ಲಿ ಎರಡೇ ಸ್ಥಾನ ಪಡೆದುಕೊಂಡು ಹೀನಾಯವಾಗಿ ಪರಾಭವ ಕಂಡಿದ್ದ ಕಾಂಗ್ರೆಸ್ ಈ ಬಾರಿ ಪ್ರಿಯಾಂಕಾ ಚರಿಷ್ಮಾ ನಂಬಿಕೊಂಡಿದ್ದು, ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದು ಸಧ್ಯದ ಕುತೂಹಲ. 

ಇನ್ನೊಂದೆಡೆ ಸ್ವತಃ ತಮ್ಮ ಪತಿಯೇ ಸಾಕಷ್ಟು ಭ್ರಷ್ಟಾಚಾರ ಹಾಗೂ ಅಕ್ರಮ ವ್ಯೆವಹಾರದಲ್ಲಿ ತೊಡಗಿರುವ ಆರೋಪ ಕೇಳಿಬಂದಿರುವ ವೇಳೆಯಲ್ಲಿ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್‍ನ ಹೊಣೆಗಾರಿಕೆ ಹೊತ್ತು ರಾಜಕಾರಣಕ್ಕೆ ಧುಮುಕ್ಕಿರೋದು ಪತಿಯನ್ನು ರಾಜಕೀಯ ಪ್ರಭಾವ ಬಳಸಿ ರಕ್ಷಿಸಲು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಒಟ್ಟಾರೆ  ದೇಶದಲ್ಲಿ ಅತ್ಯಂತ ಅಪಾಯಕಾರಿಯಾಗಿರುವ ಕುಟುಂಬ ರಾಜಕಾರಣದ ಪರಂಪರೆ ಮತ್ತಷ್ಟು ಕಾಲ ಮುಂದುವರಿಯುವ ಲಕ್ಷಣ ದಟ್ಟವಾಗಿದ್ದು, ರಾಹುಲ್‍ನಂತಹ ಅಪ್ರಬುದ್ಧ ರಾಜಕಾರಣಿಯನ್ನೇ ಸಹಿಸಿಕೊಳ್ಳಲು ಸಾಧ್ಯವಾಗದೆ ಬಹುತೇಕ ನೇಪಥ್ಯಕ್ಕೆ ಸರಿದಿರುವ ಕಾಂಗ್ರೆಸ್ ಹಿರಿ ತಲೆಗಳು ಈಗ ಪ್ರಿಯಾಂಕಾ ಗಾಂಧಿಯನ್ನು ಸಹಿಸಿಕೊಂಡು ಪಕ್ಷವನ್ನು ಬೆಳೆಸುವ ಹೊಣೆಯನ್ನು ಹೇಗೆ ನಿಭಾಯಿಸುತ್ತಾರೆ ಕಾದು ನೋಡಬೇಕಿದೆ. 


ಸಂಬಂಧಿತ ಟ್ಯಾಗ್ಗಳು

#Priyanka Vadra #Congress #Entry to politics #India


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ