ಅಂಬರೀಶ್ ಅವರ ಶಾಸಕ ಸ್ಥಾನ ರದ್ದುಗೊಳಿಸುವಂತೆ ಪ್ರತಿಭಟನೆ !

Kannada News

05-06-2017 221

ಬೆಂಗಳೂರು:- ಕಳೆದ ಮೂರು ಅಧಿವೇಶನಗಳಿಗೆ ಗೈರು ಹಾಜರಾಗಿದ್ದ ಮಾಜಿ ಸಚಿವ ಅಂಬರೀಶ್ ಅವರ ಶಾಸಕತ್ವ ರದ್ದುಗೊಳಿಸುವಂತೆ ಮಂಡ್ಯ ಜಿಲ್ಲೆಯ ಜೆಡಿಯು ಪಕ್ಷದ ಜಿಲ್ಲಾಧ್ಯಕ್ಷ ಬಿ.ಎಸ್. ಗೌಡ ಪಕ್ಷದ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿದರು. ವಿಧಾನಸೌಧದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ ಅಂಬರೀಶ್ ಅವರ ಶಾಸಕ ಸ್ಥಾನ ರದ್ದುಗೊಳಿಸುವಂತೆ ಆಗ್ರಹಿಸಿದರು. ಕಳೆದ ಮೂರು ಅಧಿವೇಶನದಿಂದಲೂ ಸದನಕ್ಕೆ ಅಂಬರೀಶ್ ಬಂದಿರಲಿಲ್ಲ. ಯಾವುದೇ ಶಾಸಕ ಮೂರು ಅಧಿವೇಶನಕ್ಕೆ ಆಗಮಿಸದೇ ಇದ್ದರೆ ಅವರ ಶಾಸಕತ್ವ ರದ್ದುಗೊಳಿಸಲು ಆವಕಾಶವಿದೆ. ಹಾಗಾಗಿ ಅವರ ಶಾಸಕತ್ವ ರದ್ದುಗೊಳಿಸಿ ಎಂದು ಒತ್ತಾಯಿಸಿದರು. ಈಗಾಗಲೇ ಸ್ಪೀಕರ್ ಹಾಗೂ ಲೋಕಾಯುಕ್ತರಿಗೆ ಬಿ.ಎಸ್.ಗೌಡ ದೂರು ನೀಡಿದ್ದಾರೆ. ವಿಧಾನಸೌಧದ ಮುಂದೆ ಅಂಬರೀಶ್ ವಿರುದ್ಧ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದರು. ಕಲಾಪಗಳಿಗೆ ಗೈರು ಹಾಜರಿಯ ಕುರಿತಂತೆ ಅಂಬರೀಷ್ ಅವರಿಗೆ ನೋಟಿಸ್ ನೀಡಿದ್ದು, ನೋಟಿಸ್ ಗೆ ಉತ್ತರಿಸುವಂತೆ ಸಭಾಧ್ಯಕ್ಷರು ಸೂಚಿಸಿದ್ದರು, ಇದಕ್ಕೆ ಉತ್ತರಿಸಿದ  ಅವರು ಅತಿಯಾದ ಎಸಿ ಕಾರಣ ಕಲಾಪಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದಿದ್ದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ