ಸೀತಾರಾಮ ಕಲ್ಯಾಣಕ್ಕೆ ಜೆಡಿಎಸ್ ಎಮ್‍ಎಲ್‍ಎಗಳು ಏನಂದ್ರು ಗೊತ್ತಾ? 

 How much do the marks give by JDS MLAs to seetarama kalyana

25-01-2019

ಸೀತಾರಾಮ ಕಲ್ಯಾಣ ದೋಸ್ತಿ ಸರ್ಕಾರದ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಯ ಬಹುನೀರಿಕ್ಷಿತ ಚಿತ್ರ. ನಿನ್ನೆ ಈ ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು, ಶೋದಲ್ಲಿ ಎಲ್ಲ ರಾಜಕೀಯ ನಾಯಕರು ಪಕ್ಷಬೇಧ ಮರೆತು ಒಟ್ಟಿಗೆ ಕೂತು ಚಿತ್ರ ವೀಕ್ಷಿಸಿದ್ದಾರೆ. ಚಿತ್ರ ವೀಕ್ಷಿಸಿದವರೆಲ್ಲ ಸಿಎಂ ಮುಲಾಜಿಗೆ ಅದ್ಭುತವಾಗಿ ಚಿತ್ರ ಎಂದಿದ್ದರೂ ಅಸಲಿ ಕತೆ ಬೇರೆನೆ ಇದೆ ಅಂತಿದ್ದಾರೆ.
 
ನಿಖಿಲ್ ಕುಮಾರಸ್ವಾಮಿ ಮೊದಲ ಚಿತ್ರ ಜಾಗ್ವಾರ್. ಅತಿ ಅದ್ದೂರಿ ಪ್ರಚಾರ ನೀಡಲಾಗಿದ್ದ ಸಿನಿಮಾ. ಈ ಸಿನಿಮಾದ ಬಗ್ಗೆ ಜನರು ಬಹಳ ನೀರಿಕ್ಷೆ ಇಟ್ಟುಕೊಂಡು ಜನರು ಚಿತ್ರಮಂದಿರಕ್ಕೆ ಹೋಗಿದ್ದರು. ಆದರೆ ಚಿತ್ರದಲ್ಲಿ ನಿಖಿಲ ಕುಮಾರಸ್ವಾಮಿ ಅಭಿನಯ ನೋಡಿ ಮೂಗು ಮುರಿದು ವಾಪಸ್ಸಾಗಿದ್ದರು. ಚಿತ್ರದಲ್ಲಿ ತಾಂತ್ರಿಕತೆ, ದೃಶ್ಯಗಳು ಎಲ್ಲವೂ ಅದ್ಭುತವಾಗಿತ್ತು ಅನ್ನೋದನ್ನು ಬಿಟ್ಟರೆ ಫೈಟಿಂಗ್, ಡೈಲಾಗ್ ಡೆಲಿವರಿ, ಡ್ಯಾನ್ಸ್ ಯಾವುದರಲ್ಲೂ ನಿಖಿಲ್ ಕುಮಾರಸ್ವಾಮಿ ಜನರಿಗೆ ಇಷ್ಟವಾಗಿರಲಿಲ್ಲ.  

ಈ ಚಿತ್ರದ ಬಳಿಕ ಇದೀಗ ಸೀತಾರಾಮ ಕಲ್ಯಾಣ ಚಿತ್ರ ಮೂಡಿಬಂದಿದ್ದು, ಅಪ್ಪಟ ಕೃಷಿಕರ ಸ್ಟೋರಿ, ಫ್ಯಾಮಿಲಿ ಎಂಟರಟೈನ್‍ಮೆಂಟ್ ಸ್ಟೋರಿ, ತಪ್ಪದೆ ನಿಮ್ಮ ತಂದೆಯೊಂದಿಗೆ ಚಿತ್ರಮಂದಿರಕ್ಕೆ ಹೋಗಿ ಎಂದೆಲ್ಲ ಬಿಲ್ಡಪ್ ನೀಡಲಾಗಿದೆ. ಆದರೆ ನಿನ್ನೆ ಪ್ರೀಮಿಯರ್ ಶೋ ನೋಡಿ ಬಂದ ಜೆಡಿಎಸ್ ಎಮ್‍ಎಲ್‍ಎಗಳೆ ಚಿತ್ರ ಚೆನ್ನಾಗಿಲ್ಲ ಅನ್ನೋದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ನಾವೇನೋ ಕುಮಾರಸ್ವಾಮಿಯವರಿಗೆ ಬೇಸರ ಆಗಬಾರದು ಅಂತ ಹೋಗಿ ನೋಡಿ ಬಂದ್ವಿ. ಅಭಿನಯದಲ್ಲಿ ನಿಖಿಲ್ ಕುಮಾರಸ್ವಾಮಿ ಇನ್ನೂ ಪ್ರೈಮರಿನಲ್ಲೆ ಇದ್ದಾರೆ ಅನ್ನೋದು ಜೆಡಿಎಸ್ ಅಂಗಳದಲ್ಲಿ ಕೇಳಿಬಂದ ಮಾತು. 

ಚಿತ್ರಕ್ಕೆ ಕೋಟ್ಯಾಂತರ ರೂಪಾಯಿ ಹಣ ವ್ಯಯಿಸಲಾಗಿದೆ. ಒಳ್ಳೊಳ್ಳೆ ಸ್ಥಳದಲ್ಲಿ ಚಿತ್ರೀಕರಣ ಮಾಡಲಾಗಿದೆ. ಆದರೆ ನಿಖಿಲ್ ಕುಮಾರಸ್ವಾಮಿ ಅಭಿನಯ ಇನ್ನು ಸುಧಾರಿಸಿಲ್ಲ. ಜಾಗ್ವಾರ್‍ನಲ್ಲಿ ತೋರಿದಂತ ಆಕ್ಟ್ಯಿಂಗ್‍ನ್ನೆ ಇಲ್ಲೂ ಮುಂದುವರಿಸಿದ್ದಾರೆ. ಚಿತ್ರದಲ್ಲಿ ನಟಿ ರಚಿತಾ ರಾಮ್ ಹಾಗೂ ಇತರರ ಅಭಿನಯ ಚೆನ್ನಾಗಿದೆ. ಆದರೆ ನಾಯಕನನ್ನೆ ನೋಡೋದು ಕಷ್ಟ ಎನ್ನುವ ಮೂಲಕ ನಿಖಿಲ್ ಕುಮಾರಸ್ವಾಮಿ ನಟನೆಗೆ ಝಿರೋ ಮಾಕ್ರ್ಸ್ ನೀಡಿದ್ದಾರೆ. 

ಆದರೆ ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನೋ ಹಾಗೆ ಕುಮಾರಸ್ವಾಮಿಯವರು ಮಾತ್ರ ಈ ಚಿತ್ರಕ್ಕೆ ಫುಲ್ ಮಾಕ್ರ್ಸ ನೀಡಿದ್ದು, ಸುಂದರವಾಗಿ ಮೂಡಿಬಂದಿದೆ. ಫ್ಯಾಮಿಲಿಯವರೆಲ್ಲ ಕುಳಿತು ನೋಡ ಬಹುದಾದ ಚಿತ್ರ ಎಲ್ಲರೂ ಮರಿದೆ ನೋಡಿ ಎಂದೆಲ್ಲ ಹೇಳಿದ್ದಾರೆ. ಆದರೆ ವಾಸ್ತವದಲ್ಲಿ ಸೀತಾರಾಮ ಕಲ್ಯಾಣ ಟೈಟಲ್ ನೋಡಿ ಒಳಹೊಕ್ಕವರಿಗೆ ಚಿತ್ರ ಮನಸ್ಸಿಗೆ ಹಿಡಿಸೋದರಿಲಿ  ಮೂರು ತಾಸಿನ ಮನೋರಂಜನೆಯನ್ನು ಕೊಡೋದಿಲ್ಲ ಅನ್ನೋದು ಜೆಡಿಎಸ್ ವಲಯದಲ್ಲೇ ಕೇಳಿಬಂದ ಗೊಣಗಾಟ.


ಸಂಬಂಧಿತ ಟ್ಯಾಗ್ಗಳು

#Seetaram Kalyana #Marks #JDS MLAs #Sandalwood


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ