ಸಿದ್ದರಾಮಯ್ಯನವರೇ ಈಗಲೂ ಮುಖ್ಯಮಂತ್ರಿ  

 Siddaramaiah is the Chief Minister

24-01-2019

ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ಥಿತ್ವದಲ್ಲಿದ್ದು  ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರಿದ್ದರೂ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಮ್ಮ ಪಾಲಿಗೆ ಇಂದಿಗೂ ಮುಖ್ಯಮಂತ್ರಿ ಎಂದು ಚಿಕ್ಕಬಳ್ಳಾಪುರದ ಶಾಸಕ ಡಾ.ಸುಧಾಕರ್ ಹೇಳಿ ಮೈತ್ರಿ ಸರ್ಕಾರದ ವಿರುದ್ದ ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿಂದು ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವು ಲೆಕ್ಕಾಚಾರದಿಂದಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುವುದು ತಪ್ಪಿದೆ.ಆದರೆ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ  ಆಗಲಿದ್ದಾರೆ ಎಂದು ಡಾ.ಸುಧಾಕರ್ ಭವಿಷ್ಯ ನುಡಿದಿದ್ದಾರೆ.

ರಾಜಕಾರಣದಲ್ಲಿ ಅಪಪ್ರಚಾರ ಮಾಡುವುದು ಸಾಮಾನ್ಯ, ಮಹಾಭಾರತವೇ ಮೋಸದಿಂದ ಕೂಡಿದೆ. ಕಲಿಯುಗದಲ್ಲಿನ ಪಗಡೆಯಾಟದಲ್ಲಿ ನಮ್ಮ ಧರ್ಮರಾಜ ಸಿದ್ದರಾಮಯ್ಯ ಅವರನ್ನು ವ್ಯವಸ್ಥಿತವಾಗಿ ಸೋಲಿಸಲಾಗಿದೆ. ಕೆಲವರ ಅಪಪ್ರಚಾರದಿಂದ ಸಿದ್ದರಾಮಯ್ಯಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದು ತಪ್ಪಿದೆ. ಕೆಲವರು ತಮ್ಮ ಮೋಸದಾಟದಿಂದ, ಅಧರ್ಮವಾಗಿ ಗೆಲುವು ಸಾಧಿಸಿದರು. ಅಂತಿಮ ವಿಜಯ ನಮ್ಮದೇ ಎಂಬ ಕಲ್ಪನೆ ಗೆದ್ದವರಿಗೆ ಇರಲಿ ಎಂದು ಜೆಡಿಎಸ್ ವಿರುದ್ದ ಬೇಸರ ವ್ಯಕ್ತಪಡಿಸಿದರು.


ಸಂಬಂಧಿತ ಟ್ಯಾಗ್ಗಳು

# Siddaramaiah #Dr Sudhakar #Chief Minister #Karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ