ನಾಯಕರಷ್ಟೇ ಸಂಭಾವನೆ ಕೊಟ್ಟರೆ ಮಾತ್ರ ನಟಿಸೋದು- ದೀಪಿಕಾ ಖಡಕ್ ನುಡಿ 

 The equivalent remuneration  should be given to heroines

24-01-2019

ಸಿನಿಮಾಗಳಲ್ಲಿ ನಾಯಕ ನಟರಿಗೆ ಕೊಡುವಷ್ಟೇ ಸಂಭಾವನೆಯನ್ನು ನಟಿಯರಿಗೂ ನೀಡಬೇಕು ಎಂಬುದು ಹಳೆಯ ವಾದ. ಆದರೆ ನಾಯಕ ನಟರೂ ಕೋಟಿಗಟ್ಟಲೆ ಸಂಭಾವನೆ ಪಡೆದರೂ ನಾಯಕರಿಯರ ಸಂಭಾವನೆ ಲಕ್ಷವೂ ದಾಟುವುದಿಲ್ಲ. ಆದರೆ ನಟಿ ದೀಪಿಕಾ ಮಾತ್ರ ಈ ಸಂಪ್ರದಾಯವನ್ನು ತೀವ್ರವಾಗಿ ವಿರೋಧಿಸಿದ್ದಾರಂತೆ ಮಾತ್ರವಲ್ಲ, ಕೆಲ ಚಿತ್ರಗಳನ್ನು ಇದೇ ಕಾರಣಕ್ಕಾಗಿ ಅವರು ಕೈಬಿಟ್ಟಿದ್ದಾರಂತೆ. 

ದೀಪಿಕಾ ಪಡುಕೋಣೆ ಸೇರಿದಂತೆ 51 ಮಹಿಳಾ ಸಾಧಕಿಯರ ಕುರಿತು ಸಿದ್ಧಪಡಿಸಲಾದ  ದಿ ಟಾಟ್ ದಟ್ ವೆಂಟ್ ಫಾರ್ ಎ ವಾಲ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತಮ್ಮ ವೃತ್ತಿ ಬದುಕಿನ ಕುರಿತು ಮಾತನಾಡಿದ ದೀಪಿಕಾ, ಸಿನಿಮಾಗಳಲ್ಲಿ ನಾವು ಹೀರೋಗಳಂತೆ ಶ್ರಮಪಟ್ಟು ದುಡಿತೇವೆ. ಆದರೂ ಸಂಭಾವನೆ ವಿಚಾರ ಬಂದಾಗ ನಾಯಕನಟಿಯರಿಗೆ ಯಾಕೆ ತಾರತಮ್ಯ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. 

ಸಿನಿಮಾಗಳಲ್ಲಿ ನಮಗೆ ಅವಕಾಶಗಳಿಗೇನೂ ಕಮ್ಮಿ ಇಲ್ಲ. ಆದರೆ ಸಿನಿಮಾದ ಸಂಭಾವನೆ ವಿಚಾರದಲ್ಲಿ ಮಾತ್ರ ಮನಸ್ಥಿತಿ ಬದಲಾಗಿಲ್ಲ. ಆದರೆ ನಾನಂತೂ ಹಿರೋಗಳಿಗೆ ಸರಿಸಮಾನವಾದ ಸಂಭಾವನೆ ಕೊಡದಿದ್ದರೇ ಕಾಲ್‍ಶೀಟ್ ಕೊಡುವುದಿಲ್ಲ ಎಂಬ ಹೋರಾಟದಲ್ಲಿ ಯಶಸ್ವಿಯಾಗಿದ್ದೇನೆ ಎಂದಿದ್ದಾರೆ. 

ಇನ್ನು ತಾವು ಇದೆ ಕಾರಣಕ್ಕೆ ಸಿನಿಮಾವೊಂದನ್ನು ಕೈಬಿಟ್ಟ ವಿಚಾರವನ್ನು ದೀಪಿಕಾ ಪಡುಕೋಣೆ , ಚಿತ್ರಕ್ರಿಯಾತ್ಮಕವಾಗಿತ್ತು ಅನ್ನೋ ಕಾರಣಕ್ಕೆ ಒಪ್ಪಿಕೊಂಡಿದ್ದೆ. ಆದರೆ ಸರಿಸಮಾನವಾದ ಸಂಭಾವನೆ ನೀಡಲು ನಿರಾಕರಿಸಿದ್ದರಿಂದ ಕಾಲಶೀಟ್ ನೀಡಲು ನಿರಾಕರಿಸಿದ್ದೇನೆ ಎಂಬ ವಿಚಾರವನ್ನು ಹಂಚಿಕೊಂಡರು. ನಾಯಕನಟರಷ್ಟೇ ದುಡಿಯುವ ನಾಯಕಿಯರಿಗೆ ಕಡಿಮೆ ಸಂಭಾವನೆ ಕೊಟ್ಟರೆ ಸುಖವಾಗಿ ನಿದ್ರಿಸಲಾಗದು. ನಾನು ಸುಖವಾಗಿ ನಿದ್ರಿಸಬೇಕು. ಹೀಗಾಗಿ ಸರಿಸಮಾನ ಸಂಭಾವನೆ ಕೊಡದೆ ಇದ್ದರೇ ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ತುಸು ಗಟ್ಟಿಯಾಗಿಯೇ ದೀಪಿಕಾ ಹೇಳಿಕೊಂಡಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Deepika Padukone #Remuneration #Equivale #Heroines


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ