ಶಾಸಕ ಆನಂದ ಸಿಂಗ್ ನಾರಾಯಣ ನೇತ್ರಾಲಯಕ್ಕೆ ಶಿಫ್ಟ್

 MLA  Anand Singh shifted to Narayana Netralaya

24-01-2019

ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಸಕ ಆನಂದ್ ಸಿಂಗ್ ಅವರನ್ನು ಕಣ್ಣಿನ ಚಿಕಿತ್ಸೆಗಾಗಿ  ರಾಜಾಜಿನಗರದಲ್ಲಿರುವ ನಾರಾಯಣ ನೇತ್ರಾಲಯಕ್ಕೆ ಗುರುವಾರ ಸ್ಥಳಾಂತರಿಸಲಾಗಿದೆ.ಬಿಡದಿ ಈಗಲ್‍ಟನ್ ರೆಸಾರ್ಟ್‍ನಲ್ಲಿ ಶಾಸಕ ಗಣೇಶ್ ನಡೆಸಿದ ಹಲ್ಲೆಯಿಂದ ಆನಂದ್ ಸಿಂಗ್ ಅವರ ಕಣ್ಣಿಗೆ ಪೆಟ್ಟಾಗಿ ಬಲಗಣ್ಣು ಊದಿಕೊಂಡಿದೆ ಕಣ್ಣಿನ ಚಿಕಿತ್ಸೆಯ ಅಗತ್ಯವಿರುವುದರಿಂದ ಅವರನ್ನು ನಾರಾಯಣ ನೇತ್ರಾಲಯಕ್ಕೆ ದಾಖಲು ಮಾಡಲಾಗಿದೆ

ಆನಂದ್ ಸಿಂಗ್‍ರವರನ್ನು ಬಿಗಿ ಪೆÇಲೀಸ್ ಭದ್ರತೆಯಲ್ಲಿ ನಾರಾಯಣ ನೇತ್ರಾಲಯಕ್ಕೆ ಶಿಫ್ಟ್ ಮಾಡಲಾಗಿದ್ದು ಈ ಸಂದರ್ಭದಲ್ಲಿ ಆನಂದ್ ಸಿಂಗ್ ಅವರ ಪುತ್ರ ಸಿದ್ದಾರ್ಧ್ ಸೇರಿ ಕುಟುಂಬದವರು ಹಾಜರಿದ್ದರು. ಶಾಸಕ ಗಣೇಶ್‍ನಿಂದ ಹಲ್ಲೆಗೊಳಗಾಗಿರುವ ಶಾಸಕ ಆನಂದ್ ಸಿಂಗ್ ಆಸ್ಪತ್ರೆ ಸೇರಿ ಐದು ದಿನಗಳಾಗಿದ್ದರೂ ಅವರ ಬಲಗಣ್ಣಿನ ಊತ ಕಡಿಮೆಯಾಗಿಲ್ಲ ಜೊತೆಗೆ ಉಸಿರಾಟದ ಸಮಸ್ಯೆ ಕೂಡ ಕಾಡುತ್ತಿರುವುದು ಕುಟುಂಬ ವರ್ಗಕ್ಕೆ ಆತಂಕುಂಟು ಮಾಡಿದೆ.

ಆನಂದ್ ಸಿಂಗ್ ಕಣ್ಣಿನ ಕೆಳಭಾಗದ ಮೂಳೆ ಮುರಿದಿದ್ದು, ಜತೆಗೆ ಪಕ್ಕೆಲುಬು ಮುರಿದಿದೆ. ಇದರಿಂದಾಗಿ ಕಣ್ಣಿನ ಊತ ಕಡಿಮೆಯಾಗಿಲ್ಲ. ಜತೆಗೆ ಜೋರಾಗಿ ಉಸಿರಾಡಿಸಲು ಕೂಡ ಅವರಿಂದ ಸಾಧ್ಯವಾಗುತ್ತಿಲ್ಲ. ನೇರವಾಗಿ ಮಲಗುವುದನ್ನು ಬಿಟ್ಟರೆ ಮಗ್ಗಲು ಬದಲಿಸುವುದು ಕೂಡ ಅವರಿಗೆ ಕಷ್ಟಸಾಧ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Mls Anand Sing #Narayana Netralaya #Shifted #Bangalore


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ