ಗಣೇಶ್‍ಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ- ಡಾ.ಜಿ.ಪರಮೆಶ್ವರ್

 Police are searching for Ganesh- Dr. G.Parmeshwar

24-01-2019

ಶಾಸಕ ಆನಂದ್ ಸಿಂಗ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಶಾಸಕ ಕಂಪ್ಲಿ ಶಾಸಕ ಜೆ.ಎನ್ ಗಣೇಶ್‍ನನ್ನು ಬಂಧಿಸಲು ಪೆÇಲೀಸರು ತೀವ್ರ ಶೋಧ ನಡೆಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ತಿಳಿಸಿದ್ದಾರೆ. ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಆನಂದ್‍ಸಿಂಗ್ ಅವರ ಹೇಳಿಕೆ ಆಧರಿಸಿ ಶಾಸಕ ಗಣೇಶ್ ಮೇಲೆ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದ್ದು ಈಗಾಗಲೇ ಅವರನ್ನು ಪಕ್ಷದಿಂದ ಈಗಾಗಲೇ ಅಮಾನತ್ತು ಮಾಡಲಾಗಿದೆ ಎಂದು ಹೇಳಿದರು.

ಸದಾಶಿವನಗರದ ಬಿಡಿಎ ಕಚೇರಿಯಲ್ಲಿ ಇನ್‍ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರೊಂದಿಗೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಪರಮೇಶ್ವರ ಅವರು ಹಲ್ಲೆ ನಡೆದ ಪ್ರಕರಣ ಕುರಿತು ನನ್ನ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದ್ದು ಸೂಕ್ತ ತನಿಖೆ ನಡೆಸಿ ಪಕ್ಷಕ್ಕೆ ವರದಿ ಸಲ್ಲಿಸುವುದಾಗಿ ಅವರು ತಿಳಿಸಿದರು.

ಸಿದ್ದಗಂಗಾ ಶ್ರೀಗಳ ಗದ್ದುಗೆ ಒಳಗೆ ಪ್ರವೇಶಿಸಲು ಕೆಲವರ ಹೆಸರನ್ನಷ್ಟೇ ಸಿದ್ದಗಂಗಾ ಕಿರಿಯ ಸ್ವಾಮೀಜಿಗಳು ಅಂತಿಮಗೊಳಿಸಿದ್ದರು. ಇದರ ಜವಾಬ್ದಾರಿಯನ್ನು ಎಸ್ಪಿದಿವ್ಯಾ ಅವರಿಗೆ ವಹಿಸಲಾಗಿತ್ತು. ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರು ಗದ್ದುಗೆ ಒಳಗೆ ಪ್ರವೇಶಿಸಲು ಬಂದಾಗ ಅವರ ಮುಖ ಪರಿಚಯ ಎಸ್ಪಿ ಅವರಿಗೆ ಇರಲಿಲ್ಲ ಎಂದೆನಿಸುತ್ತದೆ.ಈ ಘಟನೆ ಉದ್ದೇಶಪೂರಕವಾಗಿ ನಡೆದಿಲ್ಲ. ಇದನ್ನು ದೊಡ್ಡದು ಮಾಡದೆ ಇಲ್ಲಿಗೇ ತೆರೆ ಎಳೆಯುವುದು ಸೂಕ್ತ ಎಂದರು.


ಸಂಬಂಧಿತ ಟ್ಯಾಗ್ಗಳು

# Police #For Ganesh #Searching #Dr. G.Parmeshwar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ