ವಿಧಾನಸೌಧದ ಕೊಠಡಿ ಬಾಡಿಗೆಗೆ ಕೊಡಿ- ಸ್ಪೀಕರ್ ಗೆ ಪತ್ರ 

Rent Vidhan Soudha Letter To Speaker

24-01-2019

ಒಂದೆಡೆ ರೈತರು ಸಾಲಗಾರರ್ಕೆ ಕಂಗೆಟ್ಟು ಸಾಲಮನ್ನಾ ಆಗೋದು ಯಾವಾಗ ಅಂತ ಕಾಯುತ್ತಿದ್ದರೇ, ಸರ್ಕಾರ ಮಾತ್ರ ರೆಸಾರ್ಟನಲ್ಲಿ ಕಾಲಕ್ಷೇಪ ಮಾಡುತ್ತಿದೆ. ಈ ಬೆಳವಣಿಗೆಯಿಂದ ನೊಂದಿರೋ ರಾಜ್ಯದ ಜನ ಹಿಡಿಶಾಪ ಹಾಕುತ್ತಿದ್ದಾರೆ. ಇತ್ತ ವಿಧಾನಸೌಧ ಜನಪ್ರತಿನಿಧಿಗಳಿಲ್ಲದೇ ಭಣಗುಡುತ್ತಿದೆ. ಹೀಗಾಗಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ವಿಧಾನಸೌಧದ ಕೊಠಡಿಯನ್ನು ಬಾಡಿಗೆಗೆ ಕೇಳಿದ್ದು, ಈ ಕುರಿತು ಸ್ಪೀಕರ್‍ಗೆ ಪತ್ರ ಬರೆದಿದ್ದಾರೆ. 

ನಗರದ ಶೇಷಾದ್ರಿಪುರಂನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಬಿ.ಎಸ್.ಗೌಡ್(38) ಹೀಗೆ ಪತ್ರ ಬರೆದ ವ್ಯಕ್ತಿ. ಸಭಾಪತಿ ರಮೇಶ್ ಕುಮಾರ್ ಅವರಿಗೆ ಪತ್ರ ಬರೆದಿರುವ ಬಿ.ಎಸ್.ಗೌಡ್, ವಿಧಾನಸೌಧಕ್ಕೆ ನಾನು ಆಗಾಗ ಆಗಮಿಸುತ್ತಿರುತ್ತೇನೆ. ಹೀಗೆ ಬಂದಾಗ ನೋಡಿದೆ ವಿಧಾನಸೌಧದ ಮುಖ್ಯಮಂತ್ರಿ ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಸಚಿವರ ಕೊಠಡಿಗಳು ಹಲವು ದಿನದಿಂದ ಖಾಲಿ ಬಿದ್ದಿದೆ. ಬೀಗ ಹಾಕಿ ಇಡಲಾಗಿದೆ. ನನಗೆ ಒಂದಿಷ್ಟು ಬಾಡಿಗೆ ಕೋಣೆಗಳ ಅಗತ್ಯವಿದ್ದು, ನೀವು(ಸಭಾಪತಿಗಳು) ಈ ಕೊಠಡಿಗಳನ್ನು ಬಾಡಿಗೆ ನೀಡಿದರೆ ನಾನು ನಿಮಗೆ ಕೃತಜ್ಞನಾಗಿರುತ್ತೇನೆ. ಹಾಗೂ ಇದಕ್ಕಾಗಿ ನಾನು ನಿಮಗೆ ಬಾಡಿಗೆ ಮತ್ತು ಮುಂಗಡ ನೀಡುತ್ತೇನೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

ಅಲ್ಲದೆ ನಾನು ಈ ಕೊಠಡಿಗಳಿಗೆ ನೀಡುವ ಬಾಡಿಗೆ ಹಣವನ್ನು ನೀವು ರೈತರ ಸಾಲಮನ್ನಾಕ್ಕಾಗಿ ಬಳಸಿಕೊಳ್ಳಬಹುದು ಎಂದು ಬಿ.ಎಸ್.ಗೌಡ ಪತ್ರದಲ್ಲಿ ಬರೆದಿದ್ದಾರೆ.  ಬಿ.ಎಸ್.ಗೌಡರು ಮುಖ್ಯಮಂತ್ರಿಗಳ ಕೊಠಡಿಗೆ 10 ಸಾವಿರ ಹಾಗೂ ಶಾಸಕರ ಕೊಠಡಿಗಳಿಗೆ ತಲಾ 5 ಸಾವಿರ ಬಾಡಿಗೆ ಕೊಡಲು ಸಿದ್ಧರಿದ್ದಾರಂತೆ. ಸಾರ್ವಜನಿಕರ ಕ್ಷೇಮಕ್ಕಾಗಿ ಕೆಲಸ ಮಾಡಬೇಕಾಗಿರುವ ಶಾಸಕರು ಆ ಕೆಲಸ ಮಾಡುತ್ತಿಲ್ಲ. ಹೀಗಾಗಿ ಅವರಿಗೆ ಆ ಕೊಠಡಿಗಳ ಅಗತ್ಯವೂ ಇಲ್ಲ. ಅದನ್ನು ನೀಡಿದರೆ ರೈತರ ಸಾಲಮನ್ನಾಗೆ ಒಂದಿಷ್ಟು ಹಣ ಗಳಿಸಬಹುದೆಂದು  ಬಿ.ಎಸ್.ಗೌಡ ಪತ್ರದಲ್ಲಿ ಸಲಹೆ ನೀಡಿದ್ದಾರೆ. 

ಆದರೆ ಈ ಪತ್ರ ಸ್ಪೀಕರ್ ಕೈ ಸೇರಿದ್ಯಾ ಇಲ್ವಾ ಅನ್ನೋದರ ಬಗ್ಗೆ ಯಾವುದೆ ಮಾಹಿತಿ ಲಭ್ಯವಾಗಿಲ್ಲ. ಒಟ್ಟಿನಲ್ಲಿ ರಾಜ್ಯದಲ್ಲಿ ಜನಪ್ರತಿನಿಧಿಗಳೆಲ್ಲರೂ ಜನರ ಕಷ್ಟಕ್ಕೆ ಸ್ಪಂದಿಸುವ ಹೊಣೆಗಾರಿಕೆ ಮರೆತು ವರ್ತಿಸುತ್ತಿರುವುದು ಮಾತ್ರ ನಿಜ. ಒಂದೆಡೆ ಬಿಜೆಪಿ ಆಫರೇಶನ್ ಕಮಲಕ್ಕಾಗಿ ರೆಸಾರ್ಟ್ ಸೇರಿದ್ರೆ ಕಾಂಗ್ರೆಸ್ ಆಫರೇಶನ್ ಕಮಲ ತಪ್ಪಿಸಿಕೊಳ್ಳಲು ರೆಸಾರ್ಟ್‍ನಿಂದ ಬಚಾವಾಗಲೂ ರೆಸಾರ್ಟ್ ಮೊರೆ ಹೋಗ್ತಿದೆ. ಇದನ್ನು ಬೇಸತ್ತವರು ವಿಧಾನಸೌಧ ಖಾಲಿ ಇದೆ ಬಳಸಿಕೊಳ್ಳಬಹುದು ಎಂದು ನಗೆಚಟಾಕಿ ಹಾರಿಸುತ್ತಿದ್ದರೇ ಬಿ.ಎಸ್.ಗೌಡ್ರು ಮಾತ್ರ ವಿಧಾನಸೌಧವನ್ನೆ ಬಾಡಿಗೆಗೆ ಕೇಳುವ ಮೂಲಕ ಪರಿಸ್ಥಿತಿಯನ್ನು ಸರಿಯಾಗಿಯೇ ಅಣಕಿಸಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Rent #Letter To #Vidhansoudha #Speaker


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ