ಅರವಿಂದ್ ಜಾಧವ್ ವಿರುದ್ಧ  ಸಿಬಿಐ ಕೇಸ್

 CBI Case against Arvind Jadhav

24-01-2019

ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿದ್ದ ವೇಳೆ ಭೂಕಬಳಿಕೆ ಆರೋಪಕ್ಕೆ ಗುರಿಯಾಗಿದ್ದ ಐಎಎಸ್ ಅಧಿಕಾರಿ ಅರವಿಂದ್ ಜಾಧವ್ ವಿರುದ್ಧ ಈಗ ಮತ್ತೊಂದು ಆರೋಪ ಕೇಳಿಬಂದಿದ್ದು, ಸಿಬಿಐಯಲ್ಲಿ ದೂರು ದಾಖಲಾಗಿದೆ. ಏರ್ ಇಂಡಿಯಾದ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ  ಅರವಿಂದ್ ಜಾಧವ್ ವಿರುದ್ಧ ನೇಮಕಾತಿ ವೇಳೆ ನಿಯಮ ಉಲ್ಲಂಘಿಸಿದ ಆರೋಪ ಕೇಳಿಬಂದಿದೆ. 

ಏರ ಇಂಡಿಯಾದಲ್ಲಿ  ಹಿರಿಯ ಅಧಿಕಾರಿಗಳ ನೇಮಕಾತಿ ವೇಳೆ  ನಿಯಮಾವಳಿಗಳನ್ನು ಉಲ್ಲಂಘಿಸಿದ  ಆರೋಪವನ್ನು ಜಾಧವ್ ಎದುರಿಸುತ್ತಿದ್ದಾರೆ. ಜಾಧವ್ ಹಾಗೂ ಇತರ ಅಧಿಕಾರಿಗಳ ವಿರುದ್ಧ  ಕ್ರಿಮಿನಲ್ ಸಂಚು ಮತ್ತು ಭ್ರಷ್ಟಾಚಾರ ತಡೆ ಕಾಯಿದೆ ಅಡಿಯಲ್ಲಿ ಸಿಬಿಐ ಪ್ರಕರಣ ದಾಖಲಿಸಿದೆ.  ಏರ ಇಂಡಿಯಾದಲ್ಲಿ 2009-10 ರ ಅವಧಿಯಲ್ಲಿ  ಹಿರಿಯ ಅಧಿಕಾರಿಗಳ ಬಡ್ತಿಗೆ  ಅಕ್ರಮವಾಗಿ ಸಮಿತಿ ರಚಿಸಿ ನೆರವಾಗಿದ್ದರು ಎಂಬ ಆರೋಪವಿದೆ. ಸಿಬಿಐ ವಿಚಾರಣೆ ಕೈಗೆತ್ತಿಕೊಳ್ಳಲಿದ್ದು, ಜಾಧವ್ ಸಂಕಷ್ಟಕ್ಕಿಡಾಗಿದ್ದಾರೆ. 
ಈ ಹಿಂದೆ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿದ್ದ ಅರವಿಂದ್ ಜಾಧವ್ ಮೇಲೆ, ಅಧಿಕಾರ ದುರ್ಬಳಕೆ ಆರೋಪ ಕೇಳಿಬಂದಿತ್ತು. ಈ ವೇಳೆ ಜಾಧವ್ ವಿಧಾನಸೌಧದದಲ್ಲಿ ಮಾಧ್ಯಮದವರಿಂದ ತಪ್ಪಿಸಿಕೊಳ್ಳಲು ಓಡಿಹೋಗುವ ಮೂಲಕ ಸುದ್ದಿಯಾಗಿದ್ದರು. ಅಲ್ಲದೆ ಜಾಧವ್ ಭೂವಿವಾದ ಒಂದರಲ್ಲೂ ಸಿಲುಕಿಕೊಂಡಿದ್ದರು. ಇದೀಗ ಎಸಿಬಿಯಿಂದ ತಪ್ಪಿಸಿಕೊಂಡ ಜಾಧವ್‍ಗೆ ಸಿಬಿಐ ಕಾಟ ಎದುರಾಗಿರೋದಂತು ಸತ್ಯ. 


ಸಂಬಂಧಿತ ಟ್ಯಾಗ್ಗಳು

#Cbi #Case #Arvind Jadhav #Air India


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ