ಟೊಕಿಯೋದಿಂದ ಬೆಂಗಳೂರಿಗೆ ನೇರವಿಮಾನ

 Flight from Tokyo to Bangalore

24-01-2019

ಬೆಂಗಳೂರು ಮತ್ತು ಜಪಾನ್ ನಡುವಿನ ವ್ಯಾವಹಾರಿಕ ಸಂಬಂಧ ಉತ್ತಮಗೊಳಿಸುವ ನಿಟ್ಟಿನಲ್ಲಿ ಜಪಾನ್ ಮತ್ತು ಬೆಂಗಳೂರಿನ ನಡುವೆ ವಿಮಾನ ಹಾರಾಟಕ್ಕೆ  ಚಾಲನೆ ದೊರೆತಿದೆ. ಈ ಕುರಿತು ಜಪಾನ್ ಏರಲೈನ್ಸ್ ಪ್ರಕಟಣೆ ಹೊರಡಿಸಿದೆ. 

ಜಪಾನ್‍ನ ಟೊಕಿಯೋದಿಂದ ನೇರವಾಗಿ ಬೆಂಗಳೂರಿಗೆ ವಿಮಾನ ಹಾರಾಟ ನಡೆಸಲಿದೆ.  ಟೊಕಿಯೋದಿಂದ ಸಂಜೆ 6.25 ಕ್ಕೆ ನಿರ್ಗಮಿಸುವ  ವಿಮಾನ ಮರುದಿನ ರಾತ್ರಿ 12.25 ಕ್ಕೆ  ಬೆಂಗಳೂರು ತಲುಪಿಲಿದೆ.  ಮಧ್ಯಾಹ್ನ 2.45 ಕ್ಕೆ  ನಿರ್ಗಮಿಸುವ ವಿಮಾನ ಮರುದಿನ ಮಧ್ಯಾಹ್ನ 2.25 ಕ್ಕೆ  ಟೊಕಿಯೋ ತಲುಪಲಿದೆ. ಪ್ರತಿದಿನವೂ  ವಿಮಾನ ಹಾರಾಟ ನಡೆಯಲಿದೆ.

ದಿಲ್ಲಿ ಮತ್ತು ಮುಂಬೈ ನಂತರ ಅತಿಹೆಚ್ಚು ಪ್ರಯಾಣಿಕರು ಹಾರಾಟ ನಡೆಸುವ  3ನೇ ವಿಮಾನ ನಿಲ್ದಾಣ  ಎಂಬ ಪ್ರಶಂಸೆಗೆ ಕೆಂಪೇಗೌಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ. ಇದೀಗ ಜಪಾನ್‍ಗೆ ಪ್ರಯಾಣಿಸುವ ಪ್ರಯಾಣಿಕರಿಗೂ ನೇರ ಸೇವೆ ದೊರೆತಂತಾಗಿದೆ. 


ಸಂಬಂಧಿತ ಟ್ಯಾಗ್ಗಳು

#Japan #Tokyo #Bangalore #Flight


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ